Breaking News ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದಾಗ ವಿಷಾನಿಲ ಸೇವನೆ; ತಮಿಳುನಾಡಿನಲ್ಲಿ ಮೂವರು ಸಾವು
ತಮಿಳುನಾಡಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದಾಗ ವಿಷ ಅನಿಲ ಸೇವಿಸಿ ಮೂವರು ಸಾವು
ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಸೆಪ್ಟಿಕ್ ಟ್ಯಾಂಕ್ (Septic Tank) ಸ್ವಚ್ಛ ಮಾಡುತ್ತಿದ್ದಾಗ ವಿಷ ಅನಿಲ ಸೇವಿಸಿ ಮೂವರು ಸಾವಿಗೀಡಾಗಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಚೆನ್ನೈನಿಂದ 47 ಕಿಮೀ ದೂರದಲ್ಲಿರುವ ಶ್ರೀಪೆರಂಬದೂರ್ ಪ್ರದೇಶದ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಸರಿಯಾದ ಕೈಗವಸು ಮತ್ತು ರಕ್ಷಣಾತ್ಮಕ ಬಟ್ಟೆಗಳಿಲ್ಲದೆ ಕಾರ್ಮಿಕರು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅಸುರಕ್ಷಿತ ಅಭ್ಯಾಸದಿಂದ ಈ ಹಿಂದೆ ನೂರಾರು ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ವರದಿಯಾಗುವುದಕ್ಕಿಂತ ಮುನ್ನ , ಪುಣೆಯ ವಾಘೋಲಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಡ್ರೈನೇಜ್ ಚೇಂಬರ್ ಅನ್ನು ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲವನ್ನು ಉಸಿರಾಡಿದ ಮೂವರು ಕಾರ್ಮಿಕರು ಸಾವಿಗೀಡಾದ ಘಟನೆ ನಡೆದಿದೆ.
ವಾಘೋಲಿಯಲ್ಲಿ ಬೆಳಿಗ್ಗೆ 6.00 ಗಂಟೆಗೆ ಕಾರ್ಮಿಕರು ಸೆಪ್ಟಿಕ್ ಚೇಂಬರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೆಳಗ್ಗೆ 7 ಗಂಟೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಮೃತರನ್ನು ಬುಲ್ಧಾನದ ನಿತಿನ್ ಪ್ರಭಾಕರ್ ಗೊಂಡ್ (45) ಮತ್ತು ಉತ್ತರ ಪ್ರದೇಶದ ಸತೀಶ್‌ಕುಮಾರ್ ಚೌಧರಿ (35) ಎಂದು ಗುರುತಿಸಲಾಗಿದೆ.
Published On - 4:09 pm, Fri, 21 October 22