PM Narendra Modi ಕೊವಿಡ್ ಲಸಿಕೆ ತಯಾರಿಸಲು ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 04, 2021 | 1:57 PM

CSIR Society Meeting: ಸಿಎಸ್‌ಐಆರ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ವಿಭಾಗದ ಭಾಗವಾಗಿದೆ.

PM Narendra Modi  ಕೊವಿಡ್ ಲಸಿಕೆ ತಯಾರಿಸಲು ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಸೊಸೈಟಿಯ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ವಿಡಿಯೊ  ಸಂವಾದ ಮೂಲಕ ಮೋದಿ ಮಾತನಾಡಿದ್ದಾರೆ

ಕಾರ್ಯಕ್ರಮದಲ್ಲಿ  ಸ್ವದೇಶಿ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದು, ಆತ್ಮನಿರ್ಭರ ಭಾರತಕ್ಕೆ ವಿಜ್ಞಾನಿಗಳ ಕೊಡುಗೆ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಉಪಸ್ಥಿತರಿದ್ದರು.
ಸಿಎಸ್‌ಐಆರ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ವಿಭಾಗದ ಭಾಗವಾಗಿದೆ. ಇದರ ಚಟುವಟಿಕೆಗಳನ್ನು 37 ಪ್ರಯೋಗಾಲಯಗಳು ಮತ್ತು ಭಾರತದಾದ್ಯಂತ ಹರಡಿರುವ 39 ಕೇಂದ್ರಗಳ ಮೂಲಕ ನಡೆಸಲಾಗುತ್ತದೆ.

ಪ್ರಖ್ಯಾತ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ವೈಜ್ಞಾನಿಕ ಸಚಿವಾಲಯಗಳ ಹಿರಿಯ ಅಧಿಕಾರಿಗಳು ವಾರ್ಷಿಕವಾಗಿ ಸಭೆ ಸೇರುವ ಸೊಸೈಟಿಯ ಭಾಗವಾಗಿದ್ದಾರೆ ಎಂದು ಪ್ರಧಾನಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಮೋದಿ ಮಾತು

ಕೊವಿಡ್-19 ಬಿಕ್ಕಟ್ಟು ನಮ್ಮ ವೇಗವನ್ನು ನಿಧಾನಗೊಳಿಸಿರಬಹುದು ಆದರೆ ‘ಆತ್ಮನಿರ್ಭರ್ ಭಾರತ್’ ಹೊಂದಿರುವ, ಬಲವಾದ ಭಾರತ ನಮ್ಮ ಸಂಕಲ್ಪವಾಗಿ ಉಳಿದಿದೆ

ಹೊರಗಡೆ ಸಾಧಿಸಿದ ಆವಿಷ್ಕಾರಗಳನ್ನು ಹಿಡಿಯಲು ಭಾರತ ವರ್ಷಗಟ್ಟಲೆ ಕಾಯುತ್ತಿತ್ತು, ಈಗ ನಮ್ಮ ವಿಜ್ಞಾನಿಗಳು ಅದೇ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ಒಂದು ವರ್ಷದಲ್ಲಿ ಭಾರತದಲ್ಲಿ ತಯಾರಿಸಿದ ಕೋವಿಡ್ ಲಸಿಕೆ ತಯಾರಿಸಿದ್ದಕ್ಕಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಸೊಸೈಟಿ ಸಭೆಯಲ್ಲಿ ವಿಜ್ಞಾನಿಗಳನ್ನು ಪಿಎಂ ಮೋದಿ ಶ್ಲಾಘಿಸಿದ್ದಾರೆ.

ಸಿಎಸ್ಐಆರ್ ಸೊಸೈಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಾಂತಿ ಸ್ವರೂಪ್ ಭಟ್ನಾಗರ್ ನಂತಹ ಪ್ರತಿಭಾವಂತ ವಿಜ್ಞಾನಿಗಳನ್ನು ಉತ್ಪಾದಿಸಿರುವ ನಮ್ಮ ದೇಶದಲ್ಲಿ ವಿಜ್ಞಾನ, ಸಮಾಜ ಮತ್ತು ಉದ್ಯಮಕ್ಕಾಗಿ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಹೇಳಿದರು.

ಕೃಷಿ, ಖಗೋಳವಿಜ್ಞಾನ, ವಿಪತ್ತು ನಿರ್ವಹಣೆ, ರಕ್ಷಣಾ ತಂತ್ರಜ್ಞಾನ, ಲಸಿಕೆಗಳು ಮತ್ತು ವರ್ಚುವಲ್ ರಿಯಾಲಿಟಿ ವರೆಗಿನ ವಿವಿಧ ಅಂಶಗಳಲ್ಲಿ ಭಾರತವು ಸ್ವಾವಲಂಬಿಗಳಾಗಲು ಬಯಸಿದೆ.

ವಿಜ್ಞಾನವು ಮಾನವಕುಲಕ್ಕೆ ಕಷ್ಟಕರ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡಿದೆ ಮತ್ತು ಕೊವಿಡ್ ವಿರುದ್ಧದ ಹೋರಟಕ್ಕೂ.

ಒಂದು ವರ್ಷದೊಳಗೆ ಕೊವಿ ವಿರುದ್ಧ ಲಸಿಕೆ ತಯಾರಿಸಲು ಮತ್ತು ಅವುಗಳನ್ನು ಜನರ ಬಳಿಗೆ ತರಲು ವಿಜ್ಞಾನಿಗಳು ಮಾಡಿದ ಪ್ರಯತ್ನವನ್ನು ಪ್ರಧಾನಿ  ನರೇಂದ್ರ ಮೋದಿ ಶ್ಲಾಘಿಸಿದರು, ಇದನ್ನು ಐತಿಹಾಸಿಕ ಸಾಧನೆ ಎಂದು ಕರೆದರು.

ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತಿದೆ. ಕೃಷಿಯಿಂದ ಖಗೋಳವಿಜ್ಞಾನ, ವಿಪತ್ತು ನಿರ್ವಹಣೆಯಿಂದ ರಕ್ಷಣಾ ತಂತ್ರಜ್ಞಾನ ಮತ್ತು ಲಸಿಕೆ ವರ್ಚುವಲ್ ರಿಯಾಲಿಟಿ ವರೆಗೆ ರಾಷ್ಟ್ರವು ಸ್ವಾವಲಂಬಿಯಾಗುವ ಗುರಿ ಹೊಂದಿದೆ .

ಕೊವಿಡ್ -19 ಬಿಕ್ಕಟ್ಟು ನಮ್ಮ ವೇಗವನ್ನು ನಿಧಾನಗೊಳಿಸಿರಬಹುದು ಆದರೆ ನಮ್ಮ ಸಂಕಲ್ಪ ‘ಆತ್ಮನಿರ್ಬರ ಭಾರತ್ ’,‘ ಅಭಿವೃದ್ಧಿಯ ಭಾರತ ’ ಎಂದು ಅವರು ಹೇಳಿದರು.

ಕೊರೊನಾವೈರಸ್  ಮತ್ತು ಅದರಿಂದ ಉಂಟಾದ ವಿನಾಶದ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಈ ಶತಮಾನದ ಅತಿದೊಡ್ಡ ಜಾಗತಿಕ ಸವಾಲಾಗಿ ಹೊರಹೊಮ್ಮಿದೆ .ಆದಾಗ್ಯೂ, ಮಾನವೀಯತೆಯ ಮೇಲೆ ಭಾರಿ ಬಿಕ್ಕಟ್ಟು ಉಂಟಾದಾಗ, ವಿಜ್ಞಾನವು ರಕ್ಷಣೆಗೆ ಬರುತ್ತದೆ ಮತ್ತು ಉತ್ತಮ ಭವಿಷ್ಯದ ಹಾದಿಯನ್ನು ಯಾವಾಗಲೂ ಸಿದ್ಧಪಡಿಸಿದೆ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಜೊತೆಗೆ ಕಮಲಾ ಹ್ಯಾರಿಸ್ ಮಾತುಕತೆ: ಇದೇ ತಿಂಗಳಲ್ಲಿ ಭಾರತಕ್ಕೆ ಅಮೆರಿಕದಿಂದ ಇನ್ನಷ್ಟು ಕೊವಿಡ್ ಲಸಿಕೆ

Published On - 12:16 pm, Fri, 4 June 21