ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳುನಾಡು ಮತ್ತು ಪುದುಚೇರಿಗೆ ಭೇಟಿ ನೀಡಿ, ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ವೀರಪಾಂಡಿ, ತಿರುಪ್ಪೂರ್ನ ತಿರುಕುಮಾರನ್ ನಗರ, ಮಧುರೈನ ರಾಜಕ್ಕೂರ್ ಎರಡನೇ ಹಂತ, ತಿರುಚ್ಚಿಯ ಇರುಂಗಲೂರ್ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಗುರುವಾರ ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಮೋದಿ ಪುದುಚೇರಿ ಮತ್ತು ತಮಿಳುನಾಡಿನಲ್ಲಿನ ಜನರ ಜೀವನ ಸುಧಾರಣೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಹೊರಡುತ್ತಿದ್ದೇನೆ ಎಂದಿದ್ದಾರೆ.
Leaving for Puducherry and Tamil Nadu to inaugurate development works that will further ‘Ease of Living’ and economic growth. pic.twitter.com/7b6T4OJnI6
— Narendra Modi (@narendramodi) February 25, 2021
ದೇಶದ ಪ್ರಗತಿಗೆ ತಮಿಳುನಾಡಿನ ಕೊಡುಗೆ ಬಗ್ಗೆ ಹೆಮ್ಮ ಇದೆ. ತಮಿಳು ಸಂಸ್ಕೃತಿ ಜಾಗತಿಕ ಮಟ್ಟದಲ್ಲಿಯೇ ಜನಪ್ರಿಯವಾಗಿದೆ. ತಮಿಳುನಾಡಿನ ಪ್ರಗತಿಗಾಗಿ ಕೆಲಸ ಮಾಡುವುದು ಕೇಂದ್ರ ಸರ್ಕಾರಕ್ಕೆ ಹೆಮ್ಮೆ ಎನಿಸಿದೆ. ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ನಾನು ಕೊಯಂಬತ್ತೂರ್ ಗೆ ತೆರಳಲಿದ್ದೇನೆ ಎಂದು ಮೋದಿ ಬುಧವಾರ ಟ್ವೀಟ್ ಮಾಡಿದ್ದರು.
India is proud of Tamil Nadu’s contribution to national progress. The vibrant Tamil culture is popular globally. Central Government is honoured to be working for TN’s growth. Will be in Coimbatore tomorrow to inaugurate various projects. https://t.co/KNLUrFg9mE
— Narendra Modi (@narendramodi) February 24, 2021
ಮೋದಿಯವರು 11.30ಕ್ಕೆ ಪುದುಚೇರಿಗೆ ತಲುಪಲಿದ್ದು ಸಂಜೆ 4.30ಕ್ಕೆ ಕೊಯಂಬತ್ತೂರ್ ತಲುಪಲಿದ್ದಾರೆ. ಪುದುಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ45- ಎ ಚತುಷ್ಪಥ ಯೋಜನೆ, ಕಿರು ಬಂದರು ಮತ್ತು ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರಾಕ್ಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಕೊಯಂಬತ್ತೂರ್ನಲ್ಲಿ 12,400 ಕೋಟಿಗಿಂತಲೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ.
ಇದನ್ನೂ ಓದಿ: PM-KISAN ಯೋಜನೆಗೆ 2 ವರ್ಷ: ರೈತರ ಆದಾಯ ದ್ವಿಗುಣಕ್ಕೆ ಸರ್ಕಾರದ ಪರಿಶ್ರಮ ಎಂದ ನರೇಂದ್ರ ಮೋದಿ
Published On - 11:22 am, Thu, 25 February 21