ನವದೆಹಲಿ: ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ಹೊಸ ದಾಖಲೆ ಬರೆದ ಬೆನ್ನಲ್ಲೇ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಳು ಭಾರತೀಯ ಕೊವಿಡ್-19 ಲಸಿಕೆ ತಯಾರಕರನ್ನು ಭೇಟಿಯಾಗಿದ್ದಾರೆ. ಭಾರತೀಯ ಕೊರೊನಾ ಲಸಿಕೆ ಉತ್ಪಾದಕರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಸಹಕಾರದಿಂದ ದೇಶದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಯ ಮೈಲುಗಲ್ಲನ್ನು ಸಾಧಿಸಿದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಭಾರತ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡಿ ಲ್ಯಾಬೋರೇಟರೀಸ್, ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಗೆನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯ ಬಯೋಟೆಕ್ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಉಪಸ್ಥಿತರಿದ್ದರು.
Hon’ble PM Shri @NarendraModi ji chairs a meeting with our vaccine manufacturers at 7LKM. Health Minister Shri @mansukhmandviya ji was also part of the engagement.#VaccineCentury pic.twitter.com/iVze39E2LZ
— Poonamben Maadam (@PoonambenMaadam) October 23, 2021
ಭಾರತದಲ್ಲಿ ಇನ್ನು ಉಳಿದ ಅರ್ಹ ಮಂದಿಗೆ ಸಾಧ್ಯವಾದಷ್ಟೂ ಬೇಗ ಲಸಿಕೆ ನೀಡುವ ಮಾರ್ಗಗಳ ಬಗ್ಗೆ ಹಾಗೂ ‘ಎಲ್ಲರಿಗೂ ಲಸಿಕೆ’ ಎಂಬ ಅಭಿಯಾನದ ಅಡಿಯಲ್ಲಿ ಇತರ ದೇಶಗಳಿಗೂ ಸಹಾಯ ಮಾಡುವ ಬಗ್ಗೆ ಮೋದಿ ಈ ಸಭೆಯಲ್ಲಿ ಚರ್ಚಿಸಿದ್ದಾರೆ.
ಭಾರತದ ವಯಸ್ಕರ ಜನಸಂಖ್ಯೆಯ ಶೇ. 75ಕ್ಕಿಂತ ಹೆಚ್ಚು ಜನರು ಈಗಾಗಲೇ ಕನಿಷ್ಠ ಒಂದು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿದ್ದಾರೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದ ಸುಮಾರು 93 ಕೋಟಿ ವಯಸ್ಕರಲ್ಲಿ ಶೇ. ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: Police Commemoration Day 2021 ಕರ್ತವ್ಯದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ನರೇಂದ್ರ ಮೋದಿ
Published On - 5:47 pm, Sat, 23 October 21