‘ಸರ್ ಪೇ ಲಾಲ್ ಟೋಪಿ ರೂಸಿ’…ರಷ್ಯಾದಲ್ಲಿ ರಾಜ್ ಕಪೂರ್ ಜನಪ್ರಿಯತೆ ಬಗ್ಗೆ ಮೋದಿ ಮಾತು

|

Updated on: Jul 09, 2024 | 6:21 PM

ರಾಜ್ ಕಪೂರ್ ನಟಿಸಿದ ಅವಾರಾ ಸಿನಿಮಾದ ಜನಪ್ರಿಯ ಹಾಡು 'ಸರ್ ಪೇ ಲಾಲ್ ಟೋಪಿ ರೂಸಿ, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ' ಅನ್ನು ನೆನಪಿಸಿಕೊಂಡ ಮೋದಿ, ಅದರ ಭಾವನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಭಾರತೀಯ ನಟ ಮಿಥುನ್ ಚಕ್ರವರ್ತಿ ಎಂದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿ ಹೇಳಿದರು.

ಸರ್ ಪೇ ಲಾಲ್ ಟೋಪಿ ರೂಸಿ...ರಷ್ಯಾದಲ್ಲಿ ರಾಜ್ ಕಪೂರ್ ಜನಪ್ರಿಯತೆ ಬಗ್ಗೆ ಮೋದಿ ಮಾತು
ನರೇಂದ್ರ ಮೋದಿ
Follow us on

ಮಾಸ್ಕೋ ಜುಲೈ 09: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಭಾರತ ಮತ್ತು ರಷ್ಯಾ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಮಾತನಾಡುವಾಗ ಭಾರತೀಯ ನಟರಾದ ರಾಜ್ ಕಪೂರ್ (Raj Kapoor) ಮತ್ತು ಮಿಥುನ್ ಚಕ್ರವರ್ತಿ ಅವರ ಜನಪ್ರಿಯತೆ ಬಗ್ಗೆ ಉಲ್ಲೇಖಿಸಿದ್ದಾರೆ. ಮಾಸ್ಕೋದಲ್ಲಿ (Moscow) ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ-ರಷ್ಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವದ ಬಲವಾದ ಸ್ತಂಭದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿದರು. ರಷ್ಯಾವನ್ನು ಎಲ್ಲಾ ಕಾಲದ ಸ್ನೇಹಿತ ಎಂದು ಬಣ್ಣಿಸಿದ ಮೋದಿ ಕಳೆದ ಎರಡು ದಶಕಗಳಲ್ಲಿ ಸಂಬಂಧವನ್ನು ಬಲಪಡಿಸಿದ್ದಕ್ಕಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಶ್ಲಾಘಿಸಿದರು.

ರಾಜ್ ಕಪೂರ್ ನಟಿಸಿದ ಅವಾರಾ ಸಿನಿಮಾದ ಜನಪ್ರಿಯ ಹಾಡು ‘ಸರ್ ಪೇ ಲಾಲ್ ಟೋಪಿ ರೂಸಿ, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ’ ಅನ್ನು ನೆನಪಿಸಿಕೊಂಡ ಮೋದಿ, ಅದರ ಭಾವನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಭಾರತೀಯ ನಟ ಮಿಥುನ್ ಚಕ್ರವರ್ತಿ ಎಂದ ಮೋದಿ, ಉಭಯ ದೇಶಗಳ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿ ಹೇಳಿದರು.

ತಮ್ಮ ಭಾಷಣದಲ್ಲಿ, ಪಿಎಂ ಮೋದಿ ಪ್ರಭಾವ-ಆಧಾರಿತ ಜಾಗತಿಕ ಕ್ರಮ ವನ್ನು ಟೀಕಿಸಿದ್ದು ಒಂದಾಗುವ ಅಗತ್ಯವನ್ನು ಒತ್ತಿಹೇಳಿದರು. ಹೀಗೆ ಒಗ್ಗಟಾಗಿ ಸ್ವೀಕರಿಸುವ ಸಂಪ್ರದಾಯದೊಂದಿಗೆ ಭಾರತವು ಈ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಬಹುದು ಎಂದು ಸೂಚಿಸಿದರು.
ಉಕ್ರೇನ್ ಯುದ್ಧದ ಆರಂಭದ ನಂತರ ಮೊದಲ ಬಾರಿಗೆ ರಷ್ಯಾಕ್ಕೆ ಎರಡು ದಿನಗಳ ಭೇಟಿ ನೀಡಿದ ಮೋದಿ, ಭಾರತವನ್ನು ವಿಶ್ವದ ಬಲವಾದ ಸ್ತಂಭ ಎಂದು ಬಣ್ಣಿಸಿದ್ದಾರೆ. “ಇದು ಶಾಂತಿ, ಸಂವಾದ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತನಾಡುವಾಗ, ಇಡೀ ಜಗತ್ತು ಕೇಳುತ್ತದೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ:  ಭಾರತ-ರಷ್ಯಾ ಸ್ನೇಹ ಯಾವಾಗಲೂ ಸಕಾರಾತ್ಮಕವಾಗಿರುತ್ತದೆ: ನರೇಂದ್ರ ಮೋದಿ

ರಷ್ಯಾ ‘ಸುಖ್-ದುಖ್ ಕಾ ಸಾಥಿ’: ಪ್ರಧಾನಿ ಮೋದಿ

ಭಾರತ ಮತ್ತು ರಷ್ಯಾ ನಡುವಿನ ಅನನ್ಯ ಪಾಲುದಾರಿಕೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾ “ಸುಖ್-ದುಖ್ ಕಾ ಸಾಥಿ” (ಸುಖ- ದುಃಖಗಳ ಸ್ನೇಹಿತ) ಎಂದಿದ್ದಾರೆ. “ರಷ್ಯಾ ಪದವನ್ನು ಕೇಳಿದಾಗ, ಪ್ರತಿಯೊಬ್ಬ ಭಾರತೀಯನ ಮನಸ್ಸಿಗೆ ಬರುವ ಮೊದಲ ಪದವೆಂದರೆ ಭಾರತದ ‘ಸುಖ್-ದುಖ್ ಕಾ ಸಾಥಿ’ ಮತ್ತು ವಿಶ್ವಾಸಾರ್ಹ ಮಿತ್ರ,” ಎಂದು ಮೋದಿ ಹೇಳಿದ್ದಾರೆ.  ರಷ್ಯಾದ ಚಳಿಗಾಲದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಡಿಮೆಯಾದರೂ, ಭಾರತ-ರಷ್ಯಾ ಸ್ನೇಹವು ಯಾವಾಗಲೂ ‘ಪ್ಲಸ್’ ನಲ್ಲಿ ಉಳಿಯುತ್ತದೆ ಮತ್ತು ಬೆಚ್ಚಗೆ ಇರುತ್ತದೆ ಎಂದಿದ್ದಾರೆ.  ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವದ ಬಲವಾದ ತಳಹದಿಯ ಮೇಲೆ ಈ ಸಂಬಂಧವನ್ನು ನಿರ್ಮಿಸಲಾಗಿದೆ ಎಂದು ಮೋದಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ