ಗುರುಪತ್ವಂತ್ ಪನ್ನುನ್ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಿಷೇಧ 5 ವರ್ಷಗಳವರೆಗೆ ವಿಸ್ತರಣೆ

ಖಲಿಸ್ತಾನಿ ಪರ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್​​ನ ಸಂಘಟನೆಯಾದ ಎಸ್‌ಎಫ್‌ಜೆ "ಉಗ್ರಗಾಮಿ ಸಂಘಟನೆಗಳು ಮತ್ತು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಭಾರತದ ಒಕ್ಕೂಟದ ಪ್ರದೇಶದಿಂದ ಸಾರ್ವಭೌಮ ಖಲಿಸ್ತಾನ್ ಗಾಗಿ ಪಂಜಾಬ್ ಮತ್ತು ಇತರೆಡೆಗಳಲ್ಲಿ ಉಗ್ರವಾದ ಮತ್ತು ಉಗ್ರವಾದದ ಹಿಂಸಾತ್ಮಕ ರೂಪವನ್ನು ಬೆಂಬಲಿಸುತ್ತಿದೆ ಎಂದು ಗೃಹಸಚಿವಾಲಯ ಆರೋಪಿಸಿದೆ.

ಗುರುಪತ್ವಂತ್ ಪನ್ನುನ್ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಿಷೇಧ 5 ವರ್ಷಗಳವರೆಗೆ ವಿಸ್ತರಣೆ
ಗುರುಪತ್ವಂತ್ ಪನ್ನುನ್
Follow us
|

Updated on: Jul 09, 2024 | 7:34 PM

ದೆಹಲಿ ಜುಲೈ 09: ಗೃಹ ವ್ಯವಹಾರಗಳ ಸಚಿವಾಲಯ (MHA) ಮಂಗಳವಾರ ಖಲಿಸ್ತಾನಿ ಪರ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್​​ನ (Gurpatwant Singh Pannun) ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ. ಇದೇ ಭಯೋತ್ಪಾದಕ ಸಂಘಟನೆಯನ್ನು ಮೊದಲು 2019 ರಲ್ಲಿ ನಿಷೇಧಿಸಲಾಯಿತು. ಎಸ್‌ಎಫ್‌ಜೆ “ಭಾರತದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕರ” ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಎಸ್‌ಎಫ್‌ಜೆ ಚಟುವಟಿಕೆಗಳು “ದೇಶದ ಶಾಂತಿ, ಏಕತೆ ಮತ್ತು ಸಮಗ್ರತೆಯನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿವೆ” ಎಂದು ಸಚಿವಾಲಯ ಹೇಳಿದೆ.

ಸಚಿವಾಲಯದ ಪ್ರಕಾರ, ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಎಸ್‌ಎಫ್‌ಜೆ ಪಂಜಾಬ್‌ನಲ್ಲಿ ದೇಶವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕಂಡುಬಂದಿದೆ.  ಎಸ್‌ಎಫ್‌ಜೆ “ಉಗ್ರಗಾಮಿ ಸಂಘಟನೆಗಳು ಮತ್ತು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದೆ. ಭಾರತದ ಒಕ್ಕೂಟದ ಪ್ರದೇಶದಿಂದ ಸಾರ್ವಭೌಮ ಖಲಿಸ್ತಾನ್ ಗಾಗಿ ಪಂಜಾಬ್ ಮತ್ತು ಇತರೆಡೆಗಳಲ್ಲಿ ಉಗ್ರವಾದ ಮತ್ತು ಉಗ್ರವಾದದ ಹಿಂಸಾತ್ಮಕ ರೂಪವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ.

ಖಲಿಸ್ತಾನಿ ಪರ ಸಂಘಟನೆಯು ಭಾರತೀಯ ಭೂಪ್ರದೇಶದ ಒಂದು ಭಾಗವನ್ನು ಭಾರತ ಒಕ್ಕೂಟದಿಂದ ಬೇರ್ಪಡಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ,  ಸಹಾಯ ಮಾಡುತ್ತಿದೆ ಮತ್ತು ಭಾರತ ಮತ್ತು ಇತರೆಡೆ ಈ ಉದ್ದೇಶಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕತಾವಾದಿ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.

“ಎಸ್‌ಎಫ್‌ಜೆಯ ಕಾನೂನುಬಾಹಿರ ಚಟುವಟಿಕೆಗಳನ್ನು” ತಕ್ಷಣವೇ ನಿಯಂತ್ರಿಸದಿದ್ದರೆ, ಖಲಿಸ್ತಾನಿ ಪರ ಸಂಘಟನೆಯು “ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ಭಾರತದ ಒಕ್ಕೂಟದ ಪ್ರದೇಶದಿಂದ ಖಲಿಸ್ತಾನ್ ರಾಷ್ಟ್ರವನ್ನು ರೂಪಿಸುವ ಪ್ರಯತ್ನಗಳನ್ನು ಒಳಗೊಂಡಂತೆ ವಿಧ್ವಂಸಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ” ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಇದನ್ನು ನಿಯಂತ್ರಿಸದೇ ಇದ್ದರೆ, ಪನ್ನುನ್ ನೇತೃತ್ವದ ಸಂಘಟನೆಯು ಪಂಜಾಬ್ ಅನ್ನು ಭಾರತ ಒಕ್ಕೂಟದಿಂದ ಬೇರ್ಪಡಿಸಲು ಮತ್ತು ಖಲಿಸ್ತಾನ್ ರಚನೆಯನ್ನು ಪ್ರತಿಪಾದಿಸುವುದನ್ನು ಮುಂದುವರಿಸುತ್ತದೆ.

ಇದನ್ನೂ ಓದಿ: Char Dham Yatra 2024: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಚಾರ್ ಧಾಮ್ ಯಾತ್ರೆ ಸ್ಥಗಿತ

“ಇದು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ಪೂರ್ವಾಗ್ರಹ ಪೀಡಿತ ರಾಷ್ಟ್ರ ವಿರೋಧಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚಾರ ಮಾಡುತ್ತದೆ ಮತ್ತು ಪ್ರತ್ಯೇಕತಾವಾದಿ ಚಳುವಳಿಗಳನ್ನು ಉಲ್ಬಣಗೊಳಿಸುತ್ತದೆ, ಉಗ್ರಗಾಮಿತ್ವವನ್ನು ಬೆಂಬಲಿಸುತ್ತದೆ ಮತ್ತು ದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತದೆ” ಎಂದು ಕೇಂದ್ರ ಹೇಳಿದೆ.

ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು 2020 ರಲ್ಲಿ ಕೇಂದ್ರವು ಭಯೋತ್ಪಾದಕ ಲಿಸ್ಟ್ ನಲ್ಲಿ ಸೇರಿಸಿತ್ತು. ಈತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಸಿಖ್ಖರಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಸಕ್ರಿಯವಾಗಿ ಹೋರಾಡುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ