AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai BMW crash: ಮುಂಬೈ ಬಿಎಂಡಬ್ಲ್ಯು ಗುದ್ದೋಡು ಪ್ರಕರಣದ ಆರೋಪಿ ಮಿಹಿರ್ ಶಾ ಬಂಧನ

ಇದೀಗ ಬಂಧನಕ್ಕೊಳಗಾಗಿರುವ 23 ವರ್ಷ ವಯಸ್ಸಿನ ಮಿಹಿರ್ ಶಾ, ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ. ಘಟನೆಯ ಸಮಯದಲ್ಲಿ, ಮಿಹಿರ್ ಶಾ ಮತ್ತು ರಾಜೇಂದ್ರ ಸಿಂಗ್ ಬಿಡಾವತ್ ಅವರು ತಮ್ಮ BMW ಕಾರಿನಲ್ಲಿದ್ದರು. ಘಟನೆಯ ಸಮಯದಲ್ಲಿ ಮಿಹಿರ್ ಶಾ ವಾಹನ ಚಲಾಯಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ

Mumbai BMW crash: ಮುಂಬೈ ಬಿಎಂಡಬ್ಲ್ಯು ಗುದ್ದೋಡು ಪ್ರಕರಣದ ಆರೋಪಿ ಮಿಹಿರ್ ಶಾ ಬಂಧನ
ಬಿಎಂಡಬ್ಲ್ಯು ಕಾರು
ರಶ್ಮಿ ಕಲ್ಲಕಟ್ಟ
|

Updated on: Jul 09, 2024 | 5:18 PM

Share

ಮುಂಬೈ ಜುಲೈ 09: ಮುಂಬೈನ ವರ್ಲಿ ಗುದ್ದೋಡು (hit-and-run case) ಪ್ರಕರಣದ ಆರೋಪಿ ಮಿಹಿರ್ ಶಾನನ್ನು (Mihir Shah) ಪೊಲೀಸ್ ಮಂಗಳವಾರ ಬಂಧಿಸಿದ್ದಾರೆ. ಅಪಘಾತ ಸಂಭವಿಸಿದ ದಿನದಿಂದ ಈತ ತಲೆಮರೆಸಿಕೊಂಡಿದ್ದ. ಭಾನುವಾರ ಬೆಳಗ್ಗೆ ಶಿವಸೇನಾ (Shiv Sena) ಮುಖಂಡರೊಬ್ಬರ ಪುತ್ರ ಮಿಹಿರ್ ಶಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. 45 ವರ್ಷದ ಕಾವೇರಿ ನಖ್ವಾ ಅವರು ತಮ್ಮ ಪತಿ ಪ್ರದೀಪ್ ಅವರೊಂದಿಗೆ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೆಳಿಗ್ಗೆ 5:30 ರ ಸುಮಾರಿಗೆ ಪ್ರಯಾಣಿಸುತ್ತಿದ್ದಾಗ ಮಿಹಿರ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಪ್ರದೀಪ್ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಕಾವೇರಿ ಕೊನೆಯುಸಿರೆಳೆದಿದ್ದರು.

ಘಟನೆಯ ನಂತರ ಮಿಹಿರ್ ಶಾ ತಲೆಮರೆಸಿಕೊಂಡಿದ್ದು, ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಆತನ ತಂದೆ ರಾಜೇಶ್ ಶಾ ಮತ್ತು ಕುಟುಂಬದ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಿಹಿರ್ ಶಾ ಯಾರು?

23 ವರ್ಷ ವಯಸ್ಸಿನ ಮಿಹಿರ್ ಶಾ, ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ. ಘಟನೆಯ ಸಮಯದಲ್ಲಿ, ಮಿಹಿರ್ ಶಾ ಮತ್ತು ರಾಜೇಂದ್ರ ಸಿಂಗ್ ಬಿಡಾವತ್ ಅವರು ತಮ್ಮ BMW ಕಾರಿನಲ್ಲಿದ್ದರು. ಘಟನೆಯ ಸಮಯದಲ್ಲಿ ಮಿಹಿರ್ ಶಾ ವಾಹನ ಚಲಾಯಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ. ವರದಿಗಳ ಪ್ರಕಾರ, ಶಾ ಮತ್ತು ಬಿಡಾವತ್ ಮರೈನ್ ಡ್ರೈವ್‌ನಲ್ಲಿ ಡ್ರೈವ್ ಮುಗಿಸಿ ಮನೆಗೆ ಮರಳುತ್ತಿದ್ದರು. ಚಾಲಕನು ನಶೆಯಲ್ಲಿದ್ದನೇ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಪ್ರೊಡಕ್ಷನ್ ವಾರಂಟ್ ಜಾರಿ ಮಾಡಿದ ದೆಹಲಿ ಕೋರ್ಟ್

ಪ್ರದೀಪ್ ನಖ್ವಾ ಅವರ ಹೇಳಿಕೆಯನ್ನು ಆಧರಿಸಿ BNS ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೆಕ್ಷನ್ 105, 281, 125(b), 238, 324(4), 184, 134(a), 134 (ಬಿ), ಮತ್ತು 187 ಸೇರಿದಂತೆ ಹಲವಾರು ಸೆಕ್ಷನ್ ಅಡಿಯಲ್ಲಿ ಶಾ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ