ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಮೇಘಾಲಯ (Meghalaya) ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ಹೇಳಿದ್ದನ್ನು ಉಲ್ಲೇಖಿಸಿ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿರುವ ಮಧ್ಯೆಯೇ, ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಪ್ರಧಾನಿಯ ಕ್ರಮವನ್ನು ಶ್ಲಾಘಿಸಿದ ಮಲಿಕ್, ಪ್ರಧಾನಿ ಈಗ ಸರಿಯಾದ ಹಾದಿಯಲ್ಲಿದ್ದಾರೆ ಎಂದು ಹೇಳಿದರು. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಮಲಿಕ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ “ಜನರನ್ನು ಭೇಟಿಯಾಗಲು ಮತ್ತು ಅವರಿಗೆ ಮನವರಿಕೆ ಮಾಡಲು ನನ್ನನ್ನು ಕೇಳಿದ್ದಾರೆ” ಎಂದು ಹೇಳಿದ್ದಾರೆ. “ವಾಸ್ತವವಾಗಿ, ನಾನು ಏಕೆ ಹೇಳಿಕೆಗಳನ್ನು ನೀಡುತ್ತಿದ್ದೇನೆ ಎಂದು ಅಮಿತ್ ಶಾ ಕೇಳಿದ್ದರು. ಆದರೆ ಸರ್ಕಾರವು ರೈತರಿಗೆ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಅವರನ್ನು ಸಾಯಲು ಬಿಡಬಾರದು ಎಂದು ನಾನು ಅವರಿಗೆ ಹೇಳಿದಾಗ ಅವರು ತುಂಬಾ ಅರ್ಥಮಾಡಿಕೊಂಡರು. ಅವರಿಗೂ ಸಮಸ್ಯೆ ಅರ್ಥವಾಗಿತ್ತು ಎಂದರು.
ಹರ್ಯಾಣದ ದಾದ್ರಿಯಲ್ಲಿ ಭಾನುವಾರ ಸಾಮಾಜಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಲಿಕ್, ರೈತರ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿಯವರನ್ನು ಭೇಟಿ ಮಾಡಲು ಹೋದಾಗ ಐದೇ ನಿಮಿಷದಲ್ಲಿ ಅವರ ಜತೆ ಜಗಳ ಮಾಡಿ ಮುಗಿಸಿದೆ. ಅವರು ಬಹಳ ಸೊಕ್ಕು ತೋರಿಸಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದಾಗ, ‘ಅವರು ನನಗಾಗಿ ಸತ್ತರೇ?’ ಎಂದು ಕೇಳಿದರು. ಅದಕ್ಕೆ ನಾನು ಹೌದು, ನಿಮಗಾಗಿ ಸತ್ತರು, ಏಕೆಂದರೆ ನೀವು ರಾಜರಾಗಿದ್ದೀರಿ. ನಾನು ಅವರೊಂದಿಗೆ ಜಗಳವಾಡಿದ್ದೇನೆ. ಅವರು ಅಮಿತ್ ಶಾರನ್ನು ಭೇಟಿಯಾಗುವಂತೆ ಹೇಳಿದ್ದರು. ನಾನು ಭೇಟಿ ಮಾಡಿದ್ದೇನೆ ಎಂದಿದ್ದರು. “ದೇಶದ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಈ ದೇಶದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಇಂತಹ ಮಾತುಗಳನ್ನು ಹೇಳುವ ಧೈರ್ಯ ಮಾಡಿಲ್ಲ” ಎಂದು ಹೇಳಿದ್ದರು.
ನಾನು ಅಮಿತ್ ಶಾ ಅವರನ್ನು ಭೇಟಿಯಾಗುವಂತೆ ಹೇಳಿದ್ದರು ಮತ್ತು ನಾನು ಭೇಟಿ ಮಾಡಿದ್ದೇನೆ. ಆಗ ಶಾ ಅವರು ‘ಸತ್ಯಪಾಲ್, ಅವರನ್ನು(ಮೋದಿ) ಕೆಲವರು ದಾರಿ ತಪ್ಪಿಸಿದ್ದಾರೆ. ನೀವು ಅದರ ಬಗ್ಗೆ ಚಿಂತಿಸಬೇಡಿ, ನೀವು ಭೇಟಿಯಾಗುತ್ತಿರಿ. ಮುಂದೊಂದು ದಿನ ವಿಷಯ ಅರ್ಥವಾಗುತ್ತದೆ ಎಂದು ಹೇಳಿದ್ದರು ಎಂದು ಮಲಿಕ್ ಹೇಳಿದ್ದರು. ಸೋಮವಾರ ಮಲಿಕ್ ಅದನ್ನು ನಿರಾಕರಿಸಿದ್ದು. “ಇಲ್ಲ, ಅದು ತಪ್ಪು. ಶಾ ನನ್ನ ಬಳಿ ಆ ರೀತಿ ಏನನ್ನೂ ಹೇಳಿಲ್ಲ. ಎಲ್ಲರನ್ನು ಭೇಟಿಯಾಗಲು ಅವರು ಹೇಳಿದರು ಎಂದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಲಿಕ್ ಅವರ ಕಾಮೆಂಟ್‌ಗಳ ವಿಡಿಯೊ ತುಣುಕನ್ನು ಟ್ವೀಟ್ ಮಾಡಿ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ. “ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ರೈತರ ಸಮಸ್ಯೆಯ ಬಗ್ಗೆ ಪ್ರಧಾನಿ ‘ಅಹಂಕಾರಿ’ ಎಂದು ಹೇಳುತ್ತಿದ್ದಾರೆ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ‘ಹುಚ್ಚ’ ಎಂದು ಕರೆದಿದ್ದಾರೆ ಸಂವಿಧಾನಾತ್ಮಕ ಅಧಿಕಾರಿಗಳು ಪರಸ್ಪರ ತಿರಸ್ಕಾರದಿಂದ ಮಾತನಾಡುತ್ತಿದ್ದಾರೆ! ನರೇಂದ್ರ ಮೋದಿ ಜೀ ಇದು ನಿಜವೇ?” ಎಂದು ಕೇಳಿದ್ದಾರೆ.
Meghalaya’s Governor Sri. Satya Pal Malik is on record saying PM was ‘arrogant’ on the issue of Farmers & HM Amit Shah called the PM as ‘mad’
Constitutional authorities speaking about each other with such contempt!@narendramodi ji is this true?pic.twitter.com/M0EtHn2eQp
— Mallikarjun Kharge (@kharge) January 3, 2022
ಮೋದಿ ಕುರಿತು ಸೋಮವಾರ ಮಾತನಾಡಿದ ಮಲಿಕ್, “ರೈತರಿಗಾಗಿ ಅವರು ತೆಗೆದುಕೊಂಡ ಹೆಜ್ಜೆಗಾಗಿ ನಾನು ಸಾರ್ವಜನಿಕವಾಗಿ ಪ್ರಶಂಸಿಸಿದ್ದೇನೆ. ಅವರು (ಗುಜರಾತ್‌ನ) ಮುಖ್ಯಮಂತ್ರಿಯಾಗಿದ್ದಾಗ, ಅವರು ರೈತರ ಪರವಾಗಿದ್ದರು ಮತ್ತು ಎಂಎಸ್‌ಪಿಗೆ ಶಾಸನಬದ್ಧ ಸ್ಥಾನಮಾನವನ್ನು ನೀಡಬೇಕೆಂದು ಬಯಸಿದ್ದರು. ಆದರೆ ಪ್ರಧಾನಿಯಾದ ಬಳಿಕ ದಿಕ್ಕು ತಪ್ಪಿದರು. ಆದರೂ, ರೈತರು ಯಾವುದೇ ಬೆಲೆ ತೆತ್ತಾದರೂ ಕಾನೂನನ್ನು ಬೆಂಬಲಿಸುವುದಿಲ್ಲ ಎಂದು ಅವರು ಅರಿತುಕೊಂಡಾಗ, ಅದನ್ನು ಹಿಂತೆಗೆದುಕೊಳ್ಳಲು ಮತ್ತು ಕ್ಷಮೆಯಾಚಿಸಲು ಅವರು ಮನಸ್ಸು ಮಾಡಿದರು. ಅದು ಅವರ ದೊಡ್ಡ ಹೃದಯವನ್ನು ತೋರಿಸುತ್ತದೆ. ಅವರು ಈಗ ಸರಿಯಾದ ಹಾದಿಯಲ್ಲಿದ್ದಾರೆ ಎಂದಿದ್ದಾರೆ.
ತನ್ನ ಮೊದಲ ಅವಧಿಯಲ್ಲಿ ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರವು ತನ್ನ ನೇತೃತ್ವದ ಸಂಸದೀಯ ತಂಡದ ನಿಲುವನ್ನು ಒಪ್ಪಿಕೊಂಡಿದೆ ಎಂದ ಅವರು ಅಮಿತ್ ಶಾ ಅವರು ನನ್ನನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದ್ದರು. ಪ್ರಧಾನಿ ಮತ್ತು ರೈತರೊಂದಿಗೆ ವಿಷಯಗಳನ್ನು ಪ್ರಸ್ತಾಪಿಸಲು ಸಮರ್ಥರಾಗಿದ್ದಾರೆಂದು ನನಗೆ ತಿಳಿದಿತ್ತು. “ಅಮಿತ್ ಶಾ ಮತ್ತು ಪ್ರಧಾನಿ ನಡುವೆ ಉತ್ತಮ ಬಂಧ ಇದೆ ಮತ್ತು ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ಅಂಶದ ಬಗ್ಗೆ ನಾನು ಬಲ್ಲೆ ಎಂದು ಮಲಿಕ್ ಹೇಳಿದರು.
ಇದನ್ನೂ ಓದಿ: ಮೋದಿ ಅಹಂಕಾರಿ ಎಂದ ಮೇಘಾಲಯ ಗವರ್ನರ್ ; ಮಲಿಕ್ ಆರೋಪ ಸತ್ಯವಾಗಿದ್ದರೆ ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು
Published On - 10:29 am, Tue, 4 January 22