ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಕೊರೊನಾ ಸೋಂಕು; ಸಂಪರ್ಕದಲ್ಲಿದ್ದವರು ಕೊವಿಡ್ 19 ಟೆಸ್ಟ್ ಮಾಡಿಸಿಕೊಳ್ಳಿ ಎಂದ ಸಿಎಂ
2020ರ ಜೂನ್ನಲ್ಲಿ ಅರವಿಂದ್ ಕೇಜ್ರಿವಾಲ್ಗೆ ತೀವ್ರವಾದ ಜ್ವರ, ಗಂಟಲುನೋವು ಕಾಣಿಸಿತ್ತು. ಆಗ ಕೊರೊನಾ ಟೆಸ್ಟ್ ಮಾಡಿಸಿದಾಗ ಕೊವಿಡ್ 19 ನೆಗೆಟಿವ್ ವರದಿ ಬಂದಿತ್ತು. ಹಾಗಿದ್ದಾಗ್ಯೂ ಆಗ ತಮಗೆ ಶೀತ, ಜ್ವರ ಬಂದಾಗಿನಿಂದಲೂ ಎಲ್ಲ ಸಭೆಗಳನ್ನೂ ರದ್ದು ಮಾಡಿ ಅವರು ಕ್ವಾರಂಟೈನ್ ಆಗಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ (Arvind Kejriwal) ಕೊರೊನಾ ಸೋಂಕು (Corona Virus) ತಗುಲಿದೆ. ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ತಿಳಿಸಿದ್ದು, ನನಗೆ ಕೊರೊನಾದ ಸೌಮ್ಯ ಲಕ್ಷಣಗಳು ಇವೆ. ಕಳೆದ ಕೆಲವು ದಿನಗಳಿಂದಲೂ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್ 19 ತಪಾಸಣೆ ಮಾಡಿಸಿಕೊಳ್ಳಿ. ಐಸೋಲೇಟ್ ಆಗಿ ಎಂದು ಮನವಿ ಮಾಡಿದ್ದಾರೆ. ನನಗೆ ಕೊವಿಡ್ 19 ಸೋಂಕು ತಗುಲಿದೆ ಎಂದಷ್ಟೇ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹಾಗಾಗಿ, ಒಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೋ, ಅಥವಾ ಕೊರೊನಾ ಸೋಂಕೋ ಎಂಬುದಿನ್ನೂ ದೃಢಪಟ್ಟಿಲ್ಲ. ಸದ್ಯ ಅರವಿಂದ್ ಕೇಜ್ರಿವಾಲ್ ಐಸೋಲೇಟ್ ಆಗಿದ್ದಾರೆ.
2020ರ ಜೂನ್ನಲ್ಲಿ ಅರವಿಂದ್ ಕೇಜ್ರಿವಾಲ್ಗೆ ತೀವ್ರವಾದ ಜ್ವರ, ಗಂಟಲುನೋವು ಕಾಣಿಸಿತ್ತು. ಆಗ ಕೊರೊನಾ ಟೆಸ್ಟ್ ಮಾಡಿಸಿದಾಗ ಕೊವಿಡ್ 19 ನೆಗೆಟಿವ್ ವರದಿ ಬಂದಿತ್ತು. ಹಾಗಿದ್ದಾಗ್ಯೂ ಆಗ ತಮಗೆ ಶೀತ, ಜ್ವರ ಬಂದಾಗಿನಿಂದಲೂ ಎಲ್ಲ ಸಭೆಗಳನ್ನೂ ರದ್ದು ಮಾಡಿ ಅವರು ಕ್ವಾರಂಟೈನ್ ಆಗಿದ್ದರು. ನಂತರ ಏಪ್ರಿಲ್ ತಿಂಗಳಲ್ಲಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ಗೆ ಕೊರೊನಾ ಸೋಂಕು ತಗುಲಿತ್ತು. ಆಗಲೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು.
ಇನ್ನು ಈಗ ಅರವಿಂದ್ ಕೇಜ್ರಿವಾಲ್ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಬ್ಯೂಸಿಯಲ್ಲಿದ್ದಾರೆ. 2021ರ ನವೆಂಬರ್ನಿಂದಲೂ ಪಂಜಾಬ್, ಉತ್ತರಾಖಂಡ್ ಮತ್ತು ಗೋವಾ (ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳು) ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿರಾಜ್ಯಗಳಿಗೂ ತೆರಳಿ ದೊಡ್ಡಮಟ್ಟದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಜನಸಂಪರ್ಕಕ್ಕೆ ಹೋಗುತ್ತಿದ್ದಾರೆ. ಇನ್ನು ದೆಹಲಿಯಲ್ಲಿ ಕಳೆದ ವಾರದಿಂದ ಕೊವಿಡ್ 19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಒಮಿಕ್ರಾನ್ ಕೂಡ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ದೆಹಲಿಯಲ್ಲಿ 4099 ಕೊರೊನಾ ಕೇಸ್ಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.6.46ರಷ್ಟಿದೆ. ಅಲ್ಲಿ ಹಲವು ರೀತಿಯ ನಿರ್ಬಂಧಗಳನ್ನು ವಹಿಸಲಾಗಿದೆ. ಸದ್ಯ ಹಳದಿ ಅಲರ್ಟ್ ಘೋಷಣೆಯಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಸಂಪೂರ್ಣ ಲಾಕ್ಡೌನ್ ಆಗಬಹುದಾದ ಸಾಧ್ಯತೆ ಇದೆ.
I have tested positive for Covid. Mild symptoms. Have isolated myself at home. Those who came in touch wid me in last few days, kindly isolate urself and get urself tested
— Arvind Kejriwal (@ArvindKejriwal) January 4, 2022
ಇದನ್ನೂ ಓದಿ: 9 ಬ್ಯಾಂಕ್ಗಳಿಗೆ ವಂಚನೆ; ಗುಜರಾತ್ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.
Published On - 8:46 am, Tue, 4 January 22