World’s Most Popular Leader: ಜಾಗತಿಕ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ: ಜೋ ಬಿಡೆನ್​​ ಹಿಂದಿಕ್ಕಿದ ನಮೋ

|

Updated on: Feb 23, 2024 | 10:20 AM

Morning Consult survey: ವಿಶ್ವ ಸಮೀಕ್ಷಾ ಏಜೆನ್ಸಿ ಮಾರ್ನಿಂಗ್ ಕನ್ಸಲ್ಟ್‌ನ ಶ್ರೇಯಾಂಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂಬರ್ ಒನ್ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿವಿಧ ದೇಶಗಳಲ್ಲಿನ ಸಮೀಕ್ಷೆಗಳ ಆಧಾರದ ಮೇಲೆ ಈ ಸಂಸ್ಥೆ ಈ ಡೇಟಾವನ್ನು ಬಿಡುಗಡೆ ಮಾಡಿದೆ. ಅಮೆರಿಕ ಮತ್ತು ಇಂಗ್ಲೆಂಡ್ ರಾಷ್ಟ್ರಗಳ ಮುಖ್ಯಸ್ಥರಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿಗಳನ್ನು ಪ್ರಸ್ತುತಪಡಿಸಲಾಗಿದೆ.

Worlds Most Popular Leader: ಜಾಗತಿಕ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ: ಜೋ ಬಿಡೆನ್​​ ಹಿಂದಿಕ್ಕಿದ ನಮೋ
ಪ್ರಧಾನಿ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಜನಪ್ರಿಯತೆ ಎಂಬ ವಿಚಾರದಲ್ಲಿ ಪ್ರಧಾನಿ ಮೋದಿ (Narendra Modi) ವಿಶ್ವದ ಅನೇಕ ದೊಡ್ಡ ಮತ್ತು ಪ್ರಬಲ ರಾಷ್ಟ್ರಗಳ ಪ್ರಸಿದ್ಧ ನಾಯಕರನ್ನು ಹಿಂದಿಕ್ಕಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಸರ್ವೆ ಏಜೆನ್ಸಿ ನಡೆಸಿದ ವಿಶ್ವ ಸಮೀಕ್ಷೆ ಪ್ರಕಾರ ಪ್ರಧಾನಿ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸೋಜ್ ಅವರನ್ನು ಹಿಂದಿಕ್ಕಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಅವರ ವಿಶ್ವ ಸಮೀಕ್ಷೆಯ ಶ್ರೇಯಾಂಕದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ 77 ಪ್ರತಿಶತ ಮತಗಳನ್ನು ಪಡೆದರೆ, ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 64 ಪ್ರತಿಶತ ಮತಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಸ್ವಿಸ್ ಒಕ್ಕೂಟದ ಅಧ್ಯಕ್ಷ ಅಲೈನ್ ಬರ್ಸೆಟ್ 57 ಪ್ರತಿಶತ ಮತಗಳನ್ನು ಪಡೆದುಕೊಂಡಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಈ ಶ್ರೇಯಾಂಕದಲ್ಲಿ, ಜೋ ಬಿಡೆನ್ ಮತ್ತು ರಿಷಿ ಸುನಕ್ ಅವರಂತಹ ಅಮೇರಿಕಾ ಮತ್ತು ಇಂಗ್ಲೆಂಡ್‌ನ ಪ್ರಸಿದ್ಧ ನಾಯಕರಿಬ್ಬರೂ ಹಿಂದಿಕ್ಕಿದ್ದಾರೆ.

ಜೋ ಬಿಡೆನ್​ ಮತ್ತು ರಿಷಿ ಸುನಕ್​ಗೆ ಯಾವ ಸ್ಥಾನ?

ಈ ಸಮೀಕ್ಷೆಯನ್ನು ಇತ್ತೀಚೆಗೆ ಮಾರ್ನಿಂಗ್ ಕನ್ಸಲ್ಟ್ ಜನವರಿ 30 ಮತ್ತು ಫೆಬ್ರವರಿ 5 ರ ನಡುವೆ ನಡೆಸಿದೆ. ಪ್ರಧಾನಿ ಮೋದಿ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ನಾಯಕ ಎಂದು ಸಮೀಕ್ಷೆ ಹೇಳಿದೆ. ಅವರ ಜನಪ್ರಿಯತೆ ಹಾಗೇ ಉಳಿದಿದೆ.

ಇದನ್ನೂ ಓದಿ: ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಮೋದಿ; ಸಂದೇಶ್‌ಖಾಲಿ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ

ಈ ವಿಷಯದಲ್ಲಿ ಸಮೀಕ್ಷೆಯ ಅಂಕಿಅಂಶಗಳು ಅತ್ಯಂತ ಪ್ರಮುಖವಾಗಿದ್ದು, ಶ್ರೇಯಾಂಕದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ 37 ಪ್ರತಿಶತ ಮತಗಳನ್ನು ಪಡೆದಿದ್ದರೆ, ರಿಷಿ ಸುನಕ್ ಮತ್ತು ಓಲಾಫ್ 20 ಪ್ರತಿಶತ ಮತಗಳನ್ನು ಪಡೆದಿದ್ದಾರೆ. ಪ್ರಧಾನಿ ಮೋದಿ ಭಾರತದ ಮಾಧ್ಯಮಗಳಿಗೆ ಮಾತ್ರವಲ್ಲದೆ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಸಮೀಕ್ಷೆ ಉಲ್ಲೇಖಿಸಿದೆ.

ಏನಿದು ಮಾರ್ನಿಂಗ್ ಕನ್ಸಲ್ಟ್?

ಮಾರ್ನಿಂಗ್ ಕನ್ಸಲ್ಟ್ ಒಂದು ವ್ಯಾಪಾರ ಗುಪ್ತಚರ ಕಂಪನಿಯಾಗಿದೆ. ಮಾರ್ನಿಂಗ್ ಕನ್ಸಲ್ಟ್ ಎಂಬ ಈ ಸಂಸ್ಥೆಯು ಕಾಲಕಾಲಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರಮುಖ ನಾಯಕರ ಜನಪ್ರಿಯತೆಯನ್ನು ಪ್ರಸ್ತುತಪಡಿಸುತ್ತದೆ.

ಇದನ್ನೂ ಓದಿ: Mallikarjun Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ

ಮಾರ್ನಿಂಗ್ ಕನ್ಸಲ್ಟ್ ವಿಶ್ವದರ್ಜೆಯ ಕಂಪನಿಯಾಗಿದ್ದು, ಸ್ಮಾರ್ಟೆಸ್ಟ್, ವೇಗ ಮತ್ತು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವ ನಾಯಕರ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ.


ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ಏಜೆನ್ಸಿಯು ಅದರ ಗುಣಮಟ್ಟದಿಂದಾಗಿ ಸಾರ್ವಜನಿಕರಿಗೆ ತಲುಪುವ ಮೂಲಕ ಈಗಾಗಲೇ ಹೆಸರುವಾಸಿಯಾಗಿದೆ. ಪ್ರಸ್ತುತ ಕಂಪನಿಯು ಸಿದ್ಧಪಡಿಸಿರುವ ಸಮೀಕ್ಷೆಯು ಸಾಕಷ್ಟು ನಿಖರವಾಗಿ ಪರಿಗಣಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:51 pm, Thu, 22 February 24