ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ; ಹಾಸನ-ಚರ್ಲಪಲ್ಲಿ ಗ್ಯಾಸ್ ಪೈಪ್​ಲೈನ್ ಸೇರಿದಂತೆ 13,500 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಘೋಷಣೆ

PM Narendra Modi at Telangana: ಕರ್ನಾಟಕದ ಹಾಸನದಿಂದ ತೆಲಂಗಾಣದ ಚರ್ಲಪಲ್ಲಿವರೆಗಿನ ಎಲ್​ಪಿಜಿ ಪೈಪ್​ಲೈನ್ ಯೋಜನೆ ಸೇರಿದಂತೆ 13,500 ಕೋಟಿ ರೂಗೂ ಹೆಚ್ಚು ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ. 900 ಕೋಟಿ ರೂ ವೆಚ್ಚದಲ್ಲಿ ಸಮ್ಮಕ್ಕ ಸಾರಕ್ಕ ಬುಡಕಟ್ಟು ವಿಶ್ವವಿದ್ಯಾಲಯ ನಿರ್ಮಾಣವಾಗುವುದನ್ನೂ ಮೋದಿ ಘೋಷಿಸಿದ್ದಾರೆ. ರಾಯಚೂರಿನಿಂದ ಕಾಚಿಗುಡದ ಮಾರ್ಗದಲ್ಲಿ ಹೊಸ ರೈಲನ್ನು ಮೋದಿ ಬಿಡುಗಡೆ ಮಾಡಿದ್ದಾರೆ.

ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ; ಹಾಸನ-ಚರ್ಲಪಲ್ಲಿ ಗ್ಯಾಸ್ ಪೈಪ್​ಲೈನ್ ಸೇರಿದಂತೆ 13,500 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಘೋಷಣೆ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 01, 2023 | 5:31 PM

ಹೈದರಾಬಾದ್, ಅಕ್ಟೋಬರ್ 1: ತೆಲಂಗಾಣದಲ್ಲಿ ಚುನಾವಣಾ ಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಭಾನುವಾರ ಮೆಹಬೂಬನಗರದಲ್ಲಿ ನಡದ ಬಿಜೆಪಿ ಪ್ರಜಾಘರ್ಜನೆ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಹಾಸನದಿಂದ ತೆಲಂಗಾಣದ ಚರ್ಲಪಲ್ಲಿವರೆಗಿನ ಎಲ್​ಪಿಜಿ ಪೈಪ್​ಲೈನ್ (Hassan – Cherlapalli LPG Pipeline project) ಯೋಜನೆ ಸೇರಿದಂತೆ 13,500 ಕೋಟಿ ರೂಗೂ ಹೆಚ್ಚು ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣಕ್ಕೆ ಪ್ರಧಾನಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ನ್ಯಾಷನಲ್ ಟರ್ಮರಿಕ್ ಬೋರ್ಡ್ (National Turmeric Board) ಸ್ಥಾಪನೆಯೂ ಒಂದು.

ಇದೇ ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ತೆಲಂಗಾಣ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಆಡಳಿತದಲ್ಲಿರುವ ಕೆಸಿಆರ್ ನೇತೃತ್ವದ ಟಿಆರ್​​ಎಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಹರಸಾಹಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಇಂದು ಮಾಡಿದ ಘೋಷಣೆಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಕಾದುನೋಡಬೇಕು.

ಇದನ್ನೂ ಓದಿ: Swachhata Hi Seva: ಬನ್ನಿ ದೇಶವನ್ನು ಸ್ವಚ್ಛ ಹಾಗೂ ಸುಂದರವಾಗಿಸೋಣ: ಹಮೀಪುರದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಶ್ರಮದಾನ

ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಮಾಡಿದ ಘೋಷಣೆಗಳು

  • ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ
  • ಸಮ್ಮಕ್ಕ ಸಾರಕ್ಕೆ ಬುಡಕಟ್ಟು ವಿಶ್ವವಿದ್ಯಾಲಯ (ಸೆಂಟ್ರಲ್ ಟ್ರೈಬಲ್ ಯೂನಿವರ್ಸಿಟಿ) 900 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆ
  • ಹಾಸನದಿಂದ ಚರ್ಲಪಲ್ಲಿವರೆಗೆ ಎಲ್​ಪಿಜಿ ಗ್ಯಾಸ್ ಪೈಪ್​ಲೈನ್
  • ಕಾಚಿಗುಡ ರಾಯಚೂರು ಮಾರ್ಗದಲ್ಲಿ ಹೊಸ ರೈಲಿಗೆ ಚಾಲನೆ
  • ವಾರಂಗಲ್, ಖಮ್ಮಂ, ವಿಜಯವಾಡ ಹೆದ್ದಾರಿ ಕಾಮಗಾರಿಗೆ ಶಂಕು ಸ್ಥಾಪನೆ
  • ಸೂರ್ಯಪೇಟ್ ಮತ್ತು ಖಮ್ಮಂ ಹೆದ್ದಾರಿ ಉದ್ಘಾಟನೆ
  • ಹನುಮಕೊಂಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ

ಏನಿದು ಹಾಸನ ಚರ್ಲಪಲ್ಲಿ ಗ್ಯಾಸ್ ಪೈಪ್​ಲೈನ್ ಯೋಜನೆ?

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆ (ಎಚ್​ಪಿಸಿಎಲ್) ಕರ್ನಾಟಕದ ಹಾಸನದಿಂದ ತೆಲಂಗಾಣದ ಚೆರ್ಲಪಲ್ಲಿ ನಡುವೆ 649 ಕಿಮೀ ಉದ್ದದ ಎಲ್​ಪಿಜಿ ಪೈಪ್​ಲೈನ್ ಯೋಜನೆ ಕೈಗೊಳ್ಳಲಿದೆ. ಹಾಸನ, ತಿಪಟೂರು, ಶಿರಾ, ಅನಂತಪುರಂ, ಕರ್ನೂಲು, ಮೆಹಬೂಬನಗರ ಮತ್ತು ಹೈದರಾಬಾದ್​ನ ಚೆರ್ಲಪಲ್ಲಿಯವರೆಗೆ ಈ ಪೈಪ್​ಲೈನ್ ಸಾಗಿ ಹೋಗುತ್ತದೆ. ಅನಂತಪುರಂನಲ್ಲಿ ಬಾಟ್ಲಿಂಗ್ ಪ್ಲಾಂಟ್ ಇರಲಿದೆ.

ಇದನ್ನೂ ಓದಿ: ಸ್ವಚ್ಛ, ಸುಂದರ, ಉತ್ತಮ ಭಾರತಕ್ಕಾಗಿ ಒಟ್ಟಿಗೆ ಒಂದು ಪ್ರಯತ್ನ: ದೆಹಲಿಯಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಸರ್ಕಾರ 9 ವರ್ಷದಲ್ಲಿ ರಾಜ್ಯಕ್ಕೆ 9 ಸಾವಿರ ಕೋಟಿ ನೀಡಿದೆ: ಕಿಶನ್ ರೆಡ್ಡಿ

ತೆಲಂಗಾಣ ಪರ ನಿಲ್ಲುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಇದೇ ವೇಳೆ ಹೇಳಿದ್ದಾರೆ. ರೈಲ್ವೆ, ಹೆದ್ದಾರಿ ನಿರ್ಮಾಣದಲ್ಲಿ ರಾಜ್ಯಕ್ಕೆ ಕೇಂದ್ರ ಬೆಂಬಲ ನೀಡುತ್ತಿದೆ ಎಂದ ಅವರು, ಕೇಂದ್ರವು ರೈತರಿಗೆ ರಸಗೊಬ್ಬರಕ್ಕೆ ಸಬ್ಸಿಡಿ ರೂಪದಲ್ಲಿ ಸಾವಿರಾರು ಕೋಟಿ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹೈದರಾಬಾದ್ ಸುತ್ತ ಕೇಂದ್ರ ನಿರ್ಮಿಸುತ್ತಿರುವ ಪ್ರಾದೇಶಿಕ ವರ್ತುಲ ರಸ್ತೆಯಿಂದ ತೆಲಂಗಾಣ ರಾಜ್ಯದ ಸ್ವರೂಪವೇ ಬದಲಾಗಲಿದೆ. ಪ್ರಾದೇಶಿಕ ವರ್ತುಲ ರಸ್ತೆಯ ಸುತ್ತಲೂ ರೈಲು ಮಾರ್ಗ ನಿರ್ಮಾಣಕ್ಕೂ ಕೇಂದ್ರ ನಿರ್ಧರಿಸಿದೆ. ಪ್ರಾದೇಶಿಕ ವರ್ತುಲ ರಸ್ತೆಗೆ ಕೇಂದ್ರ 26 ಸಾವಿರ ಕೋಟಿ ರೂ ನೀಡಿದೆ. ಆದರೆ, ತೆಲಂಗಾಣಕ್ಕೆ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಶನ್ ರೆಡ್ಡಿ ಈ ವೇಳೆ ತಿರುಗೇಟಿ ನೀಡದ್ದಾರೆ.

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿ ಬಂದರೆ ಸಿಎಂ ಕೆಸಿಆರ್ ಅನುಪಸ್ಥಿತರಿದ್ದಾರೆ. ಅವರು ಪ್ರಧಾನಿಯನ್ನೂ ಭೇಟಿ ಮಾಡುತ್ತಿಲ್ಲ. ಸಿಎಂ ಕೆಸಿಆರ್ ಧೋರಣೆಯಿಂದ ತೆಲಂಗಾಣ ಸೋಲುತ್ತಿದೆ ಎಂದು ಬಿಜೆಪಿ ನಾಯಕರೂ ಆದ ಕಿಶನ್ ರೆಡ್ಡಿ ವಿಷಾದಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Sun, 1 October 23

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ