PM Narendra Modi: ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್​ಗೆ ಪ್ರಧಾನಿ ಮೋದಿ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Oct 25, 2021 | 3:52 PM

PM Modi in Varanasi: ತಮ್ಮ ಸ್ವ ಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ ಫ್ರಾಸ್ಟ್ರಕ್ಚರ್ ಮಿಷನ್​ಗೆ ಚಾಲನೆ ನೀಡಿದ್ದು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದಲ್ಲಿನ ಅಂತರಗಳನ್ನ ತಗ್ಗಿಸುವುದೇ ಇದರ ಉದ್ದೇಶವಾಗಿದೆ.

PM Narendra Modi: ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್​ಗೆ ಪ್ರಧಾನಿ ಮೋದಿ ಚಾಲನೆ
ಆಯುಷ್ಮಾನ್ ಭಾರತ ಆರೋಗ್ಯ ಮಿಷನ್​ಗೆ ನರೇಂದ್ರ ಮೋದಿ ಚಾಲನೆ
Follow us on

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಇಂದು ವಾರಾಣಸಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಅಭಿಯಾನಕ್ಕೆ (Ayushman Bharat Health Infrastructure Mission) ಚಾಲನೆ ನೀಡಿದರು. ಈ ಅಭಿಯಾನ ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಪ್ಯಾನ್-ಇಂಡಿಯಾ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಭಾರತದ ಆರೋಗ್ಯ ಸೌಲಭ್ಯಗಳಿಗೆ ಹೊಸ ಶಕ್ತಿ ಹಾಗೂ ಅಭಿವೃದ್ಧಿಯನ್ನು ತುಂಬುತ್ತದೆ ಎಂದು ಮೋದಿ (Narendra Modi) ಭರವಸೆ ನೀಡಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೆ ಉತ್ತರ ಪ್ರದೇಶದ ಪ್ರವಾಸ ಕೈಗೊಳ್ಳುತ್ತಿರುವ ನರೇಂದ್ರ ಮೋದಿ ಈ ಬಾರಿಯ ಉತ್ತರ ಪ್ರದೇಶ ಪ್ರವಾಸದಲ್ಲಿ ಸಾಲು ಸಾಉ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಅವರು ಬಳಿಕ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್​ಗೆ ಚಾಲನೆ ನೀಡಿದ್ದಾರೆ. ವಾರಣಾಸಿಗಾಗಿ ಒಟ್ಟು 5,200 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ.

ತಮ್ಮ ಸ್ವ ಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ ಫ್ರಾಸ್ಟ್ರಕ್ಚರ್ ಮಿಷನ್​ಗೆ ಚಾಲನೆ ನೀಡಿದ್ದು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದಲ್ಲಿನ ಅಂತರಗಳನ್ನ ತಗ್ಗಿಸುವುದೇ ಇದರ ಉದ್ದೇಶವಾಗಿದೆ ಎಂದರು. ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೈಕೆ ಸೌಲಭ್ಯಗಳು ಮತ್ತು ಪ್ರಾಥಮಿಕ ಆರೈಕೆ ನಿರ್ಣಾಯಕವಾಗಿದೆ. ಇದು 10 ಉನ್ನತ ಗಮನದ ರಾಜ್ಯಗಳಲ್ಲಿ 17,788 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಬೆಂಬಲ ಒದಗಿಸುತ್ತದೆ. ಇದಲ್ಲದೆ, ಎಲ್ಲಾ ರಾಜ್ಯಗಳಲ್ಲಿ 11,024 ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನ ಸ್ಥಾಪಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಈ ಯೋಜನೆಯಡಿ, ಒಂದು ಆರೋಗ್ಯಕ್ಕಾಗಿ ರಾಷ್ಟ್ರೀಯ ಸಂಸ್ಥೆ, ವೈರಾಲಜಿಗಾಗಿ ನಾಲ್ಕು ಹೊಸ ರಾಷ್ಟ್ರೀಯ ಸಂಸ್ಥೆಗಳು, ಡಬ್ಲ್ಯೂಹೆಚ್‌ಒ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ಸಂಶೋಧನಾ ವೇದಿಕೆ, ಒಂಬತ್ತು ಜೈವಿಕ ಸುರಕ್ಷತಾ ಮಟ್ಟ-3 ಪ್ರಯೋಗಾಲಯಗಳು, ರೋಗ ನಿಯಂತ್ರಣಕ್ಕಾಗಿ ಐದು ಹೊಸ ಪ್ರಾದೇಶಿಕ ರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi: ಉತ್ತರ ಪ್ರದೇಶದಲ್ಲೀಗ 16 ವೈದ್ಯಕೀಯ ಕಾಲೇಜು: ಇದು ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಎಂದ ನರೇಂದ್ರ ಮೋದಿ

ಚುನಾವಣೆ ಬಿಸಿಯಲ್ಲಿ ಉತ್ತರ ಪ್ರದೇಶ: ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ, ಮೋದಿ ಪ್ರವಾಸ

 

Published On - 3:52 pm, Mon, 25 October 21