ದೆಹಲಿ:ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೇವಾರ್ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Noida International Airport – NIA)ಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿ ಕಾರ್ಯ 10,050 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಡೆಯುತ್ತಿದೆ. ಅಂದಹಾಗೇ, ಈ ಏರ್ಪೋರ್ಟ್ನ್ನು 1300 ಹೆಕ್ಟೇರ್ಗೂ ಹೆಚ್ಚಿನ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಒಂದು ವರ್ಷಕ್ಕೆ 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಇರಲಿದೆ. ಏರ್ಪೋರ್ಟ್ 2024ರಿಂದ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಪ್ರಧಾನಿಯವರೊಂದಿಗೆ ಸಿಎಂ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಂಧಿಯಾ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಹು ಮಾದರಿ ಸಂಪರ್ಕ ಕೇಂದ್ರವಾಗಲಿದೆ. ಇದು 1 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ 17 ವಿಮಾನ ನಿಲ್ದಾಣಗಳನ್ನು ನೋಡಲಿದ್ದೇವೆ ಎಂದು ಹೇಳಿದ್ದಾರೆ.
#WATCH | PM Narendra Modi lays foundation stone of Noida International Airport, Jewar in Gautam Buddh Nagar
(Source: DD) pic.twitter.com/M1EnwoCWdC
— ANI UP (@ANINewsUP) November 25, 2021
ಇಲ್ಲಿನ ರೈತರು ಒಂದು ಕಾಲದಲ್ಲಿ ಕಬ್ಬಿನ ಸಿಹಿ ಹೆಚ್ಚಿಸುವ ಕೆಲಸ ಮಾಡಿದ್ದರೆ, ಕೆಲವರು ಕಬ್ಬಿನ ಸಿಹಿಯನ್ನು ಕಹಿಯಾಗಿ ಪರಿವರ್ತಿಸಿದ್ದರು. ಇವರೇ ಇಂದು ಜಿನ್ನಾ ಅನುಯಾಯಿಗಳಾಗಿ ಮುಂದುವರಿದಿದ್ದು, ಅವರಿಗೆ ಇಲ್ಲಿನ ಜನ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ.
#WATCH | Some people caused a series of riots here. Today, the country has to decide whether it wants to give new wings to the sweetness of sugarcane here or let the followers of Jinnah run riot: UP CM Yogi Adityanath on the occasion of foundation laying of Jewar airport pic.twitter.com/aoCMquUI9w
— ANI UP (@ANINewsUP) November 25, 2021
ಯಾವುದೇ ಒತ್ತಡವಿಲ್ಲದೆ ಅವರಾಗಿಯೇ ಲಖನೌಗೆ ಬಂದು ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡಿದ 700 ರೈತರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ಬದಲಾದ ರಾಜ್ಯದ ಚಿತ್ರಣ ಎಂದು ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಮೋದಿ ಭಾಷಣ
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಇದು ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೋಟ್ಯಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಉತ್ತಮ ರಸ್ತೆಗಳು, ಉತ್ತಮ ರೈಲು ನೆಟ್ವರ್ಕ್, ಉತ್ತಮ ವಿಮಾನ ನಿಲ್ದಾಣಗಳು ಕೇವಲ ಮೂಲಸೌಕರ್ಯ ಯೋಜನೆಗಳಲ್ಲ. ಅವುಗಳು ರೂಪಾಂತರಗೊಳ್ಳುತ್ತವೆ. ಇಡೀ ಪ್ರದೇಶವು ಜನರ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಶೀಘ್ರದಲ್ಲೇ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
ಈ ವಿಮಾನ ನಿಲ್ದಾಣವು ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆಗಾಗಿ ದೇಶದ ಅತಿದೊಡ್ಡ ಕೇಂದ್ರವಾಗಿದೆ. ಇದು ಈಗ ಉತ್ತರಪ್ರದೇಶದ ಚಿತ್ರಣ ಮತ್ತು ಗ್ರಹಿಕೆಯಲ್ಲಿ ಆಮೂಲಾಗ್ರ ಬದಲಾವಣೆಯ ಸಮಯ. ಹಿಂದಿನ ಸರ್ಕಾರಗಳಿಂದ ಕತ್ತಲೆಯಲ್ಲಿ, ಹಿಂದುಳಿದ ಮತ್ತು ಕಾನೂನಿನ ಕೊರತೆಯಲ್ಲಿ ಮುಳುಗಿದ್ದ ರಾಜ್ಯವು ಈಗ ಅಭಿವೃದ್ಧಿ ಮತ್ತು ಬೆಳವಣಿಗೆಯ ಹೊಸ ಗತಿಯನ್ನು ಕಾಣುತ್ತಿದೆ.ಉದ್ಯಮಕ್ಕೆ ಯುಪಿ ಈಗ ‘ಉತ್ತಮ್ ಸೇವಾ, ನಿರಂತರ ನಿವೇಶ್’ ಆಗಿದೆ. ಹಿಂದಿನ ಸರ್ಕಾರಗಳು ಪಶ್ಚಿಮ ಯುಪಿಯಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು. ಎರಡು ದಶಕಗಳ ಹಿಂದೆ ಅಂದಿನ ಬಿಜೆಪಿ ಸರ್ಕಾರ ಜೇವರ್ ವಿಮಾನ ನಿಲ್ದಾಣವನ್ನು ಕಲ್ಪಿಸಿತ್ತು. ಮುಂದಿನ ಸರ್ಕಾರಗಳು ಈ ಕಲ್ಪನೆಯನ್ನು ತಣ್ಣಗಾಗಿಸಿದವು ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: Noida International Airport: ಇಂದು ನೊಯ್ಡಾ ಏರ್ಪೋರ್ಟ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಪ್ರಧಾನಿ ಮೋದಿ
Published On - 2:34 pm, Thu, 25 November 21