ಭಾರತದಲ್ಲಿ ಏರುತ್ತಿರುವ ಒಮಿಕ್ರಾನ್ ಪ್ರಕರಣ, 3ನೇ ಅಲೆ ಆತಂಕ; ನಾಳೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ದೇಶದಲ್ಲಿ ದಿನದಿನವೂ ಒಮಿಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈಗಾಗಲೇ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ದೇಶದಲ್ಲಿ ಒಮಿಕ್ರಾನ್ ಸೋಂಕಿನ (Omicron Variant) ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಡಿ.23) ಉನ್ನತ ಮಟ್ಟದ ನಿರ್ಣಾಯಕ ಸಭೆ (High Level Meeting)ಯೊಂದನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಸದ್ಯ 214 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಿ, ಅದರಲ್ಲಿ ನಿಯಂತ್ರಣಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
ದೇಶದಲ್ಲಿ ದಿನದಿನವೂ ಒಮಿಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈಗಾಗಲೇ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ಒಮಿಕ್ರಾನ್ ವೈರಾಣು ಡೆಲ್ಟಾಕ್ಕಿಂತ ಮೂರು ಪಟ್ಟು ವೇಗವಾಗಿ ಹರಡುತ್ತದೆ. ಹೀಗಾಗಿ ಮತ್ತೆ ಹೋರಾಟ ಶುರುವಾಗಬೇಕು. ನಿಮ್ಮ ನಿಮ್ಮ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಾರ್ ರೂಂಗಳನ್ನು ಮತ್ತೆ ಸಕ್ರಿಯಗೊಳಿಸಿ ಎಂದು ಹೇಳಿದ್ದಾರೆ. ಹಾಗೇ, ಕೊವಿಡ್ 19 ತಪಾಸಣೆ ಮತ್ತು ಟ್ರ್ಯಾಕಿಂಗ್ನ್ನು ವೇಗಗೊಳಿಸುವ ಜತೆಗೆ ದೊಡ್ಡ ಸಮಾರಂಭಗಳು, ಜನರ ಗುಂಪುಗೂಡುವಿಕೆ ನಿಷೇಧ, ರಾತ್ರಿ ಕರ್ಫ್ಯೂ ಹೇರುವಿಕೆಯಂಥ ಕೊರೊನಾ ನಿಯಂತ್ರಣ ಕಾರ್ಯತಂತ್ರಗಳನ್ನು ಮತ್ತೆ ಜಾರಿಗೊಳಿಸಲು ಪ್ರಾರಂಭಿಸಿ ಎಂದು ಕೇಳಿ ಕೊಂಡಿದ್ದಾರೆ.
ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್ ಸೋಂಕು ಇದೀಗ 99ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಭಾರತದಲ್ಲಿ 214 ಮಂದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಈಗ ದೆಹಲಿಯಲ್ಲಿ 57 ಮಂದಿ ಒಮಿಕ್ರಾನ್ ಸೋಂಕಿತರಿದ್ದಾರೆ. ಇದೀಗ ದೆಹಲಿ ಮಹಾರಾಷ್ಟ್ರವನ್ನೂ ಹಿಂದಿಕ್ಕಿದ್ದು, ಮಹಾರಾಷ್ಟ್ರದಲ್ಲಿ 54 ಸೋಂಕಿತರಿದ್ದಾರೆ. ಇನ್ನುಳಿದಂತೆ ತೆಲಂಗಾಣದಲ್ಲಿ 24, ಕರ್ನಾಟಕ 19, ರಾಜಸ್ಥಾನ 18, ಕೇರಳ 15, ಗುಜರಾತ್ 14, ಜಮ್ಮು-ಕಾಶ್ಮೀರ 3, ಒಡಿಶಾ 2, ಉತ್ತರ ಪ್ರದೇಶ 2, ಆಂಧ್ರ ಚಂಡೀಗಢದಲ್ಲಿ, ಲಡಾಖ್, ಹೈದರಾಬಾದ್, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಈಗಿರುವ 214 ಮಂದಿಯಲ್ಲಿ 90 ಮಂದಿ ಚೇತರಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ. ಈ ಮಧ್ಯೆ ಫೆಬ್ರವರಿ ಹೊತ್ತಿಗೆ ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಉತ್ತುಂಗಕ್ಕೆ ಏರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದಾಗ್ಯೂ ಕೂಡ ಈ ಮೂರನೇ ಅಲೆ, ಎರಡನೇ ಅಲೆಯಷ್ಟು ಭಯಂಕರವಾಗಿ ಇರಲಾದರು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Sankashti Chaturthi: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಚಂದ್ರೋದಯದ ಸಮಯ ತಿಳಿಯಿರಿ
ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ಏರಿಕೆ; ಎಚ್ಚರಿಕೆ ನೀಡಿದ ವಿಜ್ಞಾನಿಗಳು
Published On - 1:27 pm, Wed, 22 December 21