AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಚಂದ್ರೋದಯದ ಸಮಯ ತಿಳಿಯಿರಿ

Moonrise Timings in Bengaluru: ಸಂಕಷ್ಟಗಳನ್ನು ತೊರೆದು ಜೀವನದುದ್ದಕ್ಕೂ ಸುಖ ಶಾಂತಿಯಿಂದ ಜೀವನ ಸಾಗಿಸುವ ದೃಷ್ಟಿಯಿಂದ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಮೋದಕ ಮಾಡಿ ನೈವೇದ್ಯ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

Sankashti Chaturthi: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಚಂದ್ರೋದಯದ ಸಮಯ ತಿಳಿಯಿರಿ
ಭಗವಾನ್ ಗಣೇಶ
TV9 Web
| Edited By: |

Updated on:Jan 20, 2022 | 10:47 AM

Share

ಚತುರ್ಥಿ ತಿಥಿ (ನಾಲ್ಕನೇ ದಿನ), ಕೃಷ್ಣ ಪಕ್ಷ (ಚಂದ್ರ ಕ್ಷೀಣಿಸುತ್ತಿರುವ ಹಂತ)ದಂದು ಪ್ರತಿ ತಿಂಗಳು ಸಂಕಷ್ಟಹರ ಚತುರ್ಥಿ (Sankashti Chaturthi) ಆಚರಿಸಲಾಗುತ್ತದೆ. ಗಣಪತಿಯ ಭಕ್ತರು ಸಂಕಷ್ಟ ಚತುರ್ಥಿಯಂದು ಗಣೇಶನನ್ನು ಬೇಡಿಕೊಳ್ಳುತ್ತಾ, ವಿಶೇಷ ಪೂಜಾ ವಿಧಿ ವಿಧಾನ ನೆರವೆರಿಸುತ್ತಾರೆ ಮತ್ತು ಈ ದಿನದಂದು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಉಪಾವಾಸ ಮಾಡುತ್ತಾರೆ. ಅಂತಿಮವಾಗಿ ಚಂದ್ರನ ದರ್ಶನ ಪಡೆದು ವೃತವನ್ನು ಕೈಬಿಡುತ್ತಾರೆ. ಅದರಂತೆ ಇಂದು (ಬುಧವಾರ, ಡಿಸೆಂಬರ್​ 22) ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಸಂಕಷ್ಟಗಳನ್ನು ತೊರೆದು ಜೀವನದುದ್ದಕ್ಕೂ ಸುಖ ಶಾಂತಿಯಿಂದ ಜೀವನ ಸಾಗಿಸುವ ದೃಷ್ಟಿಯಿಂದ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಮೋದಕ ಮಾಡಿ ನೈವೇದ್ಯ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

ಒಂದು ವರ್ಷದಲ್ಲಿ ಇಪ್ಪತ್ತನಾಲ್ಕು ಚಂದ್ರ ಪಾಕ್ಷಿಕಗಳು ಮತ್ತು ಹನ್ನೆರಡು ಕೃಷ್ಣ ಪಕ್ಷಗಳಿವೆ. ಆದ್ದರಿಂದ, ಭಕ್ತರು ವರ್ಷಕ್ಕೆ ಹನ್ನೆರಡು ಸಂಕಷ್ಟಹರ ಗಣೇಶ ಚತುರ್ಥಿ ವ್ರತಗಳನ್ನು ಆಚರಿಸುತ್ತಾರೆ. ಪೌಷ್ ತಿಂಗಳು ಮತ್ತು ಮಾರ್ಗಶೀರ್ಷದಲ್ಲಿ ಸಂಕಷ್ಟಹರ ಚತುರ್ಥಿ ಎಂದು ಉಲ್ಲೇಖಿಸಲಾಗಿದೆ. ಈ ದಿನ ಭಕ್ತರು ಗಣೇಶನ ಮಹಾ ಗಣಪತಿ ರೂಪ ಮತ್ತು ದುರ್ಗಾ ಪೀಠವನ್ನು ಪೂಜಿಸುತ್ತಾರೆ. ಚಂದ್ರೋದಯ ಅಥವಾ ಚಂದ್ರೋದಯ ಸಮಯ ಈ ದಿನದಂದು ಬಹಳ ಮಹತ್ವದ್ದಾಗಿದೆ. ಆದ್ದರಿಂದ ಭಕ್ತರು ಚಂದ್ರ ದೇವರಿಗೆ ಅರ್ಘ್ಯವನ್ನು ಅರ್ಪಿಸುತ್ತಾರೆ ಮತ್ತು ವ್ರತವನ್ನು ಮುಗಿಸಲು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಬೆಂಗಳೂರು ಮತ್ತು ಇತರ ನಗರಗಳಲ್ಲಿ ಚಂದ್ರೋದಯ ಸಮಯ

ಬೆಂಗಳೂರು 8:42 PM

ಮುಂಬೈ 8:50 PM

ಹೈದರಾಬಾದ್ 8:30 PM

ವಿಶಾಖಪಟ್ಟಣಂ 8:10 PM

ನಾಸಿಕ್ 8:45 PM

ನಾಗ್ಪುರ 8:20 PM

ಇಂದೋರ್ 8:31 PM

ಪುಣೆ 8:47 PM

ಚೆನ್ನೈ 8:31 PM

ಕೊಯಮತ್ತೂರು 8:48 PM

ತಿರುವನಂತಪುರಂ 8:53 PM

ದೆಹಲಿ 8:12 PM

ಭುವನೇಶ್ವರ್ 7:54 PM

ಭೋಪಾಲ್ 8:23 PM

ಕಾನ್ಪುರ 8:04 PM

ಚಂಡೀಗಢ 8:09 PM

ಸೂರತ್ 8:46 PM

ಅಹಮದಾಬಾದ್ 8:43 PM

ಜೈಪುರ 8:22 PM

ಗುವಾಹಟಿ 7:17 PM

ಕೋಲ್ಕತ್ತಾ 7:39 PM

ಗಣೇಶನ ಭಕ್ತರು ಬೇಗ ಎದ್ದು ಸ್ನಾನ ಮಾಡಿ. ಶುಭ್ರವಾದ ವಸ್ತ್ರವನ್ನು ಧರಿಸಿ ಗಣೇಶನ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಗಣೇಶನ ಅಚ್ಚುಮೆಚ್ಚಿನ ಸಿಹಿ ಮೋದಕ ತಯಾರಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ. ಹೂವುಗಳಿಂದ ಅಲಂಕಾರಗೊಂಡ ಗಣೇಶನ ಧ್ಯಾನದಲ್ಲಿ ದಿನವಿಡೀ ಕಾಲ ಕಳೆಯುತ್ತಾರೆ.

ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ಕುಟುಂಬ ಸಹಬಾಳ್ವೆಯಿಂದ ಶಾಂತಿಯುತವಾಗಿ ಜೀವನ ನಡೆಸಲು ದೇವರಲ್ಲಿ ಮೊರೆ ಹೋಗುವುದೇ ಈ ದಿನದ ವಿಶೇಷ. ಜೀವನದ ಎಲ್ಲಾ ಅಡೆತಡೆಗಳನ್ನು, ವಿಘ್ನಗಳನ್ನು ದೂರವಾಗಿಸು ಎಂದು ಭಕ್ತಿಯಿಂದ ವಿನಾಯಕನಲ್ಲಿ ಬೇಡಿಕೆ ಇಡುವುದೇ ಈ ದಿನದ ಭಕ್ತರ ಪ್ರಾರ್ಥನೆ.

ಇದನ್ನೂ ಓದಿ:

ಹಾವೇರಿಯಲ್ಲಿ ಕಾಂತೇಶನಾಗಿ ನಿಂತ ಆಂಜನೇಯ ದೇವಾಲಯದ ವಿಶೇಷತೆಗಳನ್ನು ನೋಡಿ

ಮೈಸೂರು: ಚಾಮುಂಡಿದೇವಿ ದೇವಸ್ಥಾನದ ಹುಂಡಿಯಲ್ಲಿ ಭರ್ಜರಿ ಕಾಣಿಕೆ; ಒಂದೂವರೆ ತಿಂಗಳಲ್ಲಿ 1.77 ಕೋಟಿ ರೂ. ಸಂಗ್ರಹ

Published On - 1:06 pm, Wed, 22 December 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ