Lord Vishnu: ಗುರುವಾರ ವಿಷ್ಣು ಪೂಜೆ ಮಾಡುವುದರಿಂದ ಸಿಗುವ ಫಲಗಳೇನು?
ಇಂದು ಗುರುವಾರ ಈ ದಿನ ವಿಷ್ಣು ಪೂಜೆ ಮಾಡುವುದರಿಂದ ಅನೇಕ ರೀತಿಯ ಫಲಗಳು ಸಿಗುತ್ತವೆ. ಹಾಗೂ ಜಾತಕದಲ್ಲಿ ಗುರುಗ್ರಹದ ಸ್ಥಾನ ಕೆಟ್ಟದಾಗಿದ್ದರೆ, ಅವರು ಗುರುವಾರ ದೇವಾಲಯದಲ್ಲಿ ಕೇಸರಿ ಮತ್ತು ಹಳದಿ ಬಣ್ಣದ ಬೇಳೆಗಳನ್ನು ದಾನ ಮಾಡಬೇಕು. ಇದರಿಂದ ಕುಂಡಲಿಯಲ್ಲಿನ ಗುರುವಿನ ಸ್ಥಾನ ಬಲವಾಗುತ್ತೆ.
ಗುರುವಾರ ಭಗವಾನ್ ವಿಷ್ಣುವಿನ ಆರಾಧನೆಯ ದಿನ. ಅಲ್ಲದೆ ಈ ದಿನ ಗುರುವನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳೂ ದೊರೆಯುತ್ತವೆ. ವಾರದ 7 ದಿನಗಳೂ ಕೂಡ ಅದರದೇ ಮಹತ್ವವನ್ನು ಹೊಂದಿವೆ. ಹಿಂದೂ ಪುರಾಣಗಳ ಪ್ರಕಾರ ವಾರದ 7 ದಿನವನ್ನೂ ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಆ ದಿನದಂದು ಆ ದೇವರನ್ನು ಪೂಜಿಸುವುದರಿಂದ ವಿಶೇಷವಾದ ಕೃಪೆಗೆ ಪಾತ್ರರಾಗುತ್ತೀರಿ. ಇಂದು ಗುರುವಾರ ಈ ದಿನ ವಿಷ್ಣು ಪೂಜೆ ಮಾಡುವುದರಿಂದ ಅನೇಕ ರೀತಿಯ ಫಲಗಳು ಸಿಗುತ್ತವೆ. ಹಾಗೂ ಜಾತಕದಲ್ಲಿ ಗುರುಗ್ರಹದ ಸ್ಥಾನ ಕೆಟ್ಟದಾಗಿದ್ದರೆ, ಅವರು ಗುರುವಾರ ದೇವಾಲಯದಲ್ಲಿ ಕೇಸರಿ ಮತ್ತು ಹಳದಿ ಬಣ್ಣದ ಬೇಳೆಗಳನ್ನು ದಾನ ಮಾಡಬೇಕು. ಇದರಿಂದ ಕುಂಡಲಿಯಲ್ಲಿನ ಗುರುವಿನ ಸ್ಥಾನ ಬಲವಾಗುತ್ತೆ.
ಸಾಮಾನ್ಯವಾಗಿ ಗುರುವಾರ ಗುರು ರಾಘವೇಂದ್ರನನ್ನು ಪೂಜಿಸಬೇಕೆಂದು ಹೇಳುತ್ತಾರೆ. ಆದರೆ ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಅವಿವಾಹಿತ ಕನ್ಯೆಯರು ಭಗವಾನ್ ವಿಷ್ಣುವನ್ನು ಪೂಜಿಸಿದರೆ ಅರ್ಹ ವರನನ್ನು ತಮ್ಮ ಪತಿಯಾಗಿ ಪಡೆದುಕೊಳ್ಳುತ್ತಾರೆ. ಮನೆಯಲ್ಲಿನ ಹಣದ ಕೊರತೆ ದೂರವಾಗುತ್ತೆ. ಮಕ್ಕಳಿಲ್ಲದ ದಂಪತಿಗಳು ಸಂತಾನ ಭಾಗ್ಯವನ್ನು ಪಡೆಯುತ್ತಾರೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉನ್ನತ ದರ್ಜೆಯ ಕೆಲಸ ಸಿಗುತ್ತದೆ. ಆದರೆ ಈ ದಿನ ಮಾಡುವ ಉಪವಾಸವನ್ನು ಯಾವುದೇ ತಪ್ಪುಗಳಿಲ್ಲದೆ ಮಾಡಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.
ಗುರುವಾರ ವಿಷ್ಣು ಪೂಜೆ ಮಾಡುವುದು ಹೇಗೆ? ಗುರುವಾರ, ಬೆಳಿಗ್ಗೆ ಸ್ನಾನ ಮಾಡಿ ವಿಷ್ಣುನನ್ನು ಪೂಜಿಸಬೇಕು. ಪೂಜೆಯಲ್ಲಿ ಹಳದಿ ವಸ್ತುಗಳು, ಹಳದಿ ಹೂವುಗಳು, ಹಳದಿ ಬಣ್ಣದ ಬೇಳೆಯನ್ನು, ಒಣ ದ್ರಾಕ್ಷಿ, ಸಿಹಿ ತಿಂಡಿಗಳನ್ನು, ಹಳದಿ ಅಕ್ಕಿ ಮತ್ತು ಅರಿಶಿನವನ್ನು ಅರ್ಪಿಸಬೇಕು. ವಿಷ್ಣುವಿನ ಕಥೆಯನ್ನು ಓದುವ ಮತ್ತು ಪೂಜಿಸುವ ಸಮಯದಲ್ಲಿ, ಶುದ್ಧ ಮನಸ್ಸಿನಿಂದ ತಮ್ಮೆಲ್ಲಾ ಆಸೆಗಳನ್ನು ಈಡೇರಿಸುವಂತೆ ಪೂಜಿಸಬೇಕು.
ಬಾಳೆ ಮರವನ್ನು ಗುರುವಾರ ಪೂಜಿಸುವುದು ಅವಶ್ಯಕ. ನೀರಿಗೆ ಅರಿಶಿನ ಸೇರಿಸಿ ಮತ್ತು ಬಾಳೆ ಮರಕ್ಕೆ ಅರ್ಪಿಸಿ. ನಂತರ ಬಾಳೆ ಮರಕ್ಕೆ ಬಾಳೆಹಣ್ಣು, ಕಡಲೆ ಬೇಳೆ, ಬೆಲ್ಲ ಮತ್ತು ಒಣ ದ್ರಾಕ್ಷಿಯನ್ನು ಅರ್ಪಿಸಿ. ಆರತಿಯನ್ನು ಬೆಳಗಿ ಬಾಳೆ ಗಿಡದ ಕೆಳಗೆ ದೀಪವನ್ನು ಬೆಳಗಿಸಬೇಕು. ಗುರುವಾರ, ಉಪವಾಸವನ್ನು ಮಾಡುವಾಗ ಕೇವಲ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸಬೇಕು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ