ಜಪಾನಿನ ನೆಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಅವಿರತ ಶ್ರಮದ ಮೂಲಕ ಭಾರತ-ಜಪಾನ್ (Japan) ಬಾಂಧವ್ಯವನ್ನು ಹೆಚ್ಚಿಸಿದ ಕೀರ್ತಿಗೆ ಭಾಜನರಾದ ಜಪಾನಿನ ಖ್ಯಾತ ಲೇಖಕ, ಹಿಂದಿ ಮತ್ತು ಪಂಜಾಬಿ ಭಾಷಾತಜ್ಞ, ಪದ್ಮ ಪುರಸ್ಕೃತ ಡಾ ಟೊಮಿಯೊ ಮಿಜೋಕಾಮಿ (Dr Tomio Mizokami) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಭೇಟಿ ಮಾಡಿದರು. ಅವರ ಸಂವಾದದ ಕುರಿತು ಮಾತನಾಡಿದ ಡಾ ಮಿಜೋಕಾಮಿ ಅವರು ಮುಂದಿನ ‘ವಿಶ್ವ ಹಿಂದಿ ಸಮ್ಮೇಳನ’ವನ್ನು ಜಪಾನ್‌ನಲ್ಲಿ ನಡೆಸಬೇಕೆಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿರುವುದಾಗಿ ಹೇಳಿದರು.
ಹಿಂದಿ ಭಾಷೆಯಲ್ಲಿ ಅವರ ಆಸಕ್ತಿ ಏಕೆ ಬೆಳೆಯಿತು ಎಂಬ ಕಾರಣವನ್ನು ಕೇಳಿದಾಗ, ನಾನು ಜಪಾನಿನ ಕೋಬ್ ನಗರದಲ್ಲಿ ಜನಿಸಿದೆ, ಆಗ ಭಾರತೀಯ ಜನಸಂಖ್ಯೆಯು ಹೆಚ್ಚಾಗಿ ಪ್ರಾಬಲ್ಯ ಹೊಂದಿತ್ತು. ನಾನು ಅವರಿಂದ ಪ್ರಭಾವಿತನಾಗಿದ್ದೆ. ಆ ಭಾಷೆ ಕಲಿಯಲು ನನಗೆ ಹೆಚ್ಚಿನ ಕುತೂಹಲವಿತ್ತು.
In Hiroshima, I was glad to interact with Professor Tomio Mizokami. A Padma Awardee, he is a distinguished Hindi and Punjabi linguist. He has made numerous efforts to make Indian culture and literature popular among the people of Japan. pic.twitter.com/mEWYZLr62F
— Narendra Modi (@narendramodi) May 20, 2023
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಎಂದರೆ ನನಗಿಷ್ಟ. ಆ ಕಾಲದಲ್ಲಿ, ಅವರು (ನೆಹರು) ಪ್ರಪಂಚದಾದ್ಯಂತ ಹೆಚ್ಚಿನ ಪ್ರಭಾವವನ್ನು ಹೊಂದಿದ್ದರು. ‘ಅಲಿಪ್ತ ಚಳವಳಿಯ’ (ಶೀತಲ ಸಮರದ ಅವಧಿಯಲ್ಲಿ) ಸಂಸ್ಥಾಪಕರಲ್ಲಿ ಒಬ್ಬರಾಗಿ, ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಿದ್ದರು. ಶಾಂತಿ ಮತ್ತು ಸ್ಥಿರತೆಯನ್ನು ಬಯಸಿದರು. ಹಾಗಿರುವಾಗ ಅಂತಹ ನಾಯಕನ ಭಾಷೆಯನ್ನು ಏಕೆ ಕಲಿಯಬಾರದು ಎಂದು ಅನಿಸಿತು ಎಂದಿದ್ದಾರೆ ಮಿಜೋಕಾಮಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ