AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi US Visit: ಕಮಲಾ ಹ್ಯಾರಿಸ್​ಗೆ ಭಾವನಾತ್ಮಕ ಉಡುಗೊರೆ ನೀಡಿದ ಪ್ರಧಾನಿ ಮೋದಿ; ತಾತ ಗೋಪಾಲನ್​ರನ್ನು ನೆನಪಿಸಿದ ಗಿಫ್ಟ್​

PM Modi US Visit: ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​ ಮಾರಿಸನ್​ಗೆ ಬೆಳ್ಳಿ ಗುಲಾಬಿ ಮೀನಾಕಾರಿ ಹಡಗಿನ ಕ್ರಾಫ್ಟ್​​ನ್ನು ಉಡುಗೊರೆ ನೀಡಿದ್ದಾರೆ. ಇದೂ ಕೂಡ ಕಾಶಿಯ ವೈಭವದ ಪ್ರತೀಕವಾಗಿದೆ.

PM Modi US Visit: ಕಮಲಾ ಹ್ಯಾರಿಸ್​ಗೆ ಭಾವನಾತ್ಮಕ ಉಡುಗೊರೆ ನೀಡಿದ ಪ್ರಧಾನಿ ಮೋದಿ; ತಾತ ಗೋಪಾಲನ್​ರನ್ನು ನೆನಪಿಸಿದ ಗಿಫ್ಟ್​
ಕಮಲಾ ಹ್ಯಾರಿಸ್​ಗೆ ಉಡುಗೊರೆ ಮೂಲಕ ತಾತ ಗೋಪಾಲನ್​ರನ್ನು ನೆನಪಿಸಿದ ಪ್ರಧಾನಿ ಮೋದಿ
S Chandramohan
| Updated By: Lakshmi Hegde|

Updated on:Sep 24, 2021 | 2:31 PM

Share

ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರು ನಿನ್ನೆ (ಸೆ.23) ಅಮೆರಿಕ್ಕೆ ತೆರಳಿದ್ದು, ಇಂದು ಅವರು ಕ್ವಾಡ್​ ಶೃಂಗಸಭೆ (Quad Summit)ಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಗುರುವಾರ ಯುಎಸ್​ಗೆ ಹೋದ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris)​, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​, ಜಪಾನ್​ ಪ್ರಧಾನಿ ಯೋಶಿಹಿದೆ ಸುಗಾರನ್ನು ಭೇಟಿಯಾಗಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಬಳಿಕ ಜಂಟಿಯಾಗಿ ಮಾಧ್ಯಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್​, ಯೋಶಿಹಿದೆ ಸುಗಾ ಮತ್ತು ಸ್ಕಾಟ್​ ಮಾರಿಸನ್​ ಅವರಿಗೆ ಉಡುಗೊರೆಗಳನ್ನೂ ನೀಡಿದ್ದಾರೆ. ಅದರಲ್ಲೂ ಕಮಲಾ ಹ್ಯಾರಿಸ್​ಗೆ ನೀಡಿದ ಉಡುಗೊರೆ ನಿಜಕ್ಕೂ ವಿಶೇಷ ಎನ್ನಿಸಿದೆ.

ಕಮಲಾ ಹ್ಯಾರಿಸ್​ ಭಾರತದ ಮೂಲದವರು. ಅಂದರೆ ಅವರ ತಾಯಿಯ ತವರು ಮನೆ ತಮಿಳುನಾಡಿನ ತುಳಸೇಂದ್ರಪುರಂ. ಇವರ ತಾತ  ಪಿ.ವಿ.ಗೋಪಾಲನ್​ ಸರ್ಕಾರಿ ಉದ್ಯೋಗಿಯಾಗಿದ್ದು, ತುಂಬ ಹೆಸರು ಮಾಡಿದ್ದರು. ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಇದೀಗ ಪ್ರಧಾನಿ  ನರೇಂದ್ರ ಮೋದಿಯವರು ಪಿ.ವಿ.ಗೋಪಾಲನ್​ರನ್ನು ಸ್ಮರಿಸುವಂಥ ಉಡುಗೊರೆಯನ್ನು ಕಮಲಾ ಹ್ಯಾರಿಸ್​ಗೆ ನೀಡಿದ್ದಾರೆ. ತಾತ ಗೋಪಾಲನ್​​ರಿಗೆ ಸಂಬಂಧಪಟ್ಟ ಹಳೇ ಅಧಿಸೂಚನೆಗಳ ಪ್ರತಿಯನ್ನು ಒಂದು ಚೆಂದನೆಯ ಮರದ ಕರಕುಶಲ ಫ್ರೇಮ್​​ನಲ್ಲಿ ಹಾಕಿ ಮೊಮ್ಮಗಳು ಕಮಲಾ ಹ್ಯಾರಿಸ್​ಗೆ ನೀಡಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದ ಪಿ.ವಿ.ಗೋಪಾಲನ್ ಜಂಟಿ ಕಾರ್ಯದರ್ಶಿಯಾಗಿದ್ದರು. 1966 ರಲ್ಲಿ ಪಿ.ವಿ.ಗೋಪಾಲನ್ ಅವರನ್ನು ನಿಯೋಜನೆ ಮೇಲೆ ಜಾಂಬಿಯಾದ ನಿರಾಶ್ರಿತರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರದಿಂದ ನೇಮಿಸಲಾಗಿತ್ತು. ಅದುವರೆಗೂ ಪಿ.ವಿ.ಗೋಪಾಲನ್ ಕೇಂದ್ರ ಸರ್ಕಾರದ ಕಾರ್ಮಿಕ, ಉದ್ಯೋಗ ಮತ್ತು ಪುನರ್ ವಸತಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದರು. ಈ ಬಗ್ಗೆ ವರ್ಗಾವಣೆಯ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಈಗ ಕಮಲಾ ಹ್ಯಾರಿಸ್ ಗೆ ಗಿಫ್ಟ್ ಆಗಿ ಪ್ರಧಾನಿ ಮೋದಿ ನೀಡಿದ್ದಾರೆ.  ಇದು ಭಾವನಾತ್ಮಕ ಉಡುಗೊರೆಯಾಗಿದೆ.

ಇದರೊಂದಿಗೆ ವಾರಾಣಸಿಯ ಪ್ರಸಿದ್ಧ ಕ್ರಾಫ್ಟ್​ ಎನ್ನಿಸಿರುವ ಗುಲಾಬಿ ಮೀನಾಕಾರಿ (ಬೆಳ್ಳಿ ಗುಲಾಬಿ ಮೀನಾಕ್ಷಿ) ಚೆಸ್​ ಸೆಟ್​​ನ್ನೂ ಕೂಡ ಗಿಫ್ಟ್ ಆಗಿ ಕೊಟ್ಟಿದ್ದಾರೆ. ವಾರಾಣಸಿ ಸೊಬಗನ್ನು ಬಿಂಬಿಸುವ ಈ ಚೆಸ್​​ ಸೆಟ್​ನಲ್ಲಿ ಕರಕುಶಲತೆಯ ಕೌಶಲ್ಯ ಎದ್ದು ಕಾಣುವಂತಿದೆ.

ಕಮಲಾ ಹ್ಯಾರಿಸ್​ಗೆ ಪ್ರಧಾನಿ ನೀಡಿದ ಗುಲಾಬಿ ಮೀನಾಕ್ಷಿ ಚೆಸ್​ ಸೆಟ್​

ಆಸ್ಟ್ರೇಲಿಯಾ, ಜಪಾನ್​ ಪ್ರಧಾನಿಗಳಿಗೂ ಗಿಫ್ಟ್​ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​ ಮಾರಿಸನ್​ಗೆ ಬೆಳ್ಳಿ ಗುಲಾಬಿ ಮೀನಾಕಾರಿ (ಬೆಳ್ಳಿ ಗುಲಾಬಿ ಮೀನಾಕ್ಷಿ) ಹಡಗಿನ ಕ್ರಾಫ್ಟ್​​ನ್ನು ಉಡುಗೊರೆ ನೀಡಿದ್ದಾರೆ. ಇದೂ ಕೂಡ ಕಾಶಿಯ ವೈಭವದ ಪ್ರತೀಕವಾಗಿದೆ. ವಿಶೇಷವಾಗಿ ಕರಕಶುಲ ಕಲೆಯಿಂದ ಕೆತ್ತಲಾಗಿದ್ದು ಕಾಶಿಯ  ಕ್ರಿಯಾಶೀಲತೆಯನ್ನು ಬಿಂಬಿಸುವಂತಿದೆ. ಇನ್ನು ಜಪಾನ್​ ಪ್ರಧಾನಿ ಯೋಶಿಹಿದೆ ಅವರಿಗೆ ಬುದ್ಧನ ಶ್ರೀಗಂಧದ ಪ್ರತಿಮೆಯನ್ನು ನೀಡಿದ್ದಾರೆ. ನೀಡಲಾದ ಎಲ್ಲ ಉಡುಗೋರೆಗಳೂ ಕಾಶಿಯನ್ನೇ ಪ್ರತಿಬಿಂಬಿಸುತ್ತವೆ. ವಾರಾಣಸಿ ಭಾರತದ ಪವಿತ್ರ ತಾಣವಾಗಿದ್ದು, ಜಗತ್ತಿನ ಹಳೇ ನಗರಗಳಲ್ಲಿ ಒಂದಾಗಿದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವೂ ಹೌದು.

ಆಸ್ಟ್ರೇಲಿಯಾ ಪ್ರಧಾನಿಗೆ ನೀಡಿದ ಬೆಳ್ಳಿ ಗುಲಾಬಿ ಮೀನಾಕ್ಷಿ ಹಡಗಿನ ಕ್ರಾಫ್ಟ್

Buddha statue.

ಜಪಾನ್​ ಪ್ರಧಾನಿಗೆ, ನರೇಂದ್ರ ಮೋದಿಯವರು ನೀಡಿದ ಉಡುಗೊರೆ 

ಇದನ್ನೂ ಓದಿ: ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

PM Modi in US: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ

(PM Narendra Modi presents Kamala Harris with gifts related her grandfather PV Gopalan)

Published On - 2:03 pm, Fri, 24 September 21