PM Modi in US: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ

PM Modi US Visit: ಕಮಲಾ ಹ್ಯಾರಿಸ್​​ ಭೇಟಿಯ ಬಳಿಕ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಪ್ರಧಾನಿ ಮೋದಿ, ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭೇಟಿಯಿಂದ ಸಂತೋಷ ಆಗಿದೆ ಎಂದಿದ್ದಾರೆ.

PM Modi in US: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್ ಭೇಟಿ
Follow us
TV9 Web
| Updated By: Lakshmi Hegde

Updated on:Sep 24, 2021 | 9:16 AM

ನಿನ್ನೆ ಗುರುವಾರದಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಯುಎಸ್​ ಪ್ರವಾಸ (PM Modi US Visit)ಪ್ರಾರಂಭವಾಗಿದ್ದು, ಮೊದಲದಿನ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harries)​ರನ್ನು ಮೋದಿ ಭೇಟಿಯಾಗಿದ್ದಾರೆ. ಇವರಿಬ್ಬರೂ ವಾಷಿಂಗ್ಟನ್​ ಡಿಸಿಯಲ್ಲಿ ಭೇಟಿಯಾಗಿದ್ದು, ಇತ್ತೀಚಿಗಿನ ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಅಫ್ಘಾನಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮತ್ತು ಇಂಡೋ-ಫೆಸಿಪಿಕ್​ ರೀಜನ್​​ನ್ನು ಮುಕ್ತ-ಅಂತರ್ಗತಗೊಳಿಸುವ ಬಗ್ಗೆ ಮಾತುಕತೆಗಳು ನಡೆದಿವೆ. ಅಂದಹಾಗೆ ಅಮೆರಿಕದಲ್ಲಿ ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​ ಅಧ್ಯಕ್ಷರು, ಉಪಾಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ. 

ಕಮಲಾ ಹ್ಯಾರಿಸ್​​ ಭೇಟಿಯ ಬಳಿಕ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಪ್ರಧಾನಿ ಮೋದಿ, ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭೇಟಿಯಿಂದ ಸಂತೋಷ ಆಗಿದೆ. ಅವರು ತಮ್ಮ ಸಾಧನೆಯಿಂದ ಇಡೀ ಜಗತ್ತಿಗೇ ಸ್ಫೂರ್ತಿಯಾದವರು. ಭಾರತ ಮತ್ತು ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಹಲವು ವಿಚಾರಗಳ ಬಗ್ಗೆ ನಾವು ಮಾತುಕತೆ ನಡೆಸಿದ್ದೇವೆ.  ಮೌಲ್ಯ ಮತ್ತು ಸಂಸ್ಕೃತಿ ಆಧಾರಿತ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್​, ಭಾರತ ಹಾಗೂ ಅಮೆರಿಕದಲ್ಲಿನ ಕೊವಿಡ್​ 19 ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಕೊವಿಡ್​ 19 ಲಸಿಕೆ ಮೂಲಕ ರೋಗ ನಿಯಂತ್ರಣ, ನಿರ್ಣಾಯಕ ಔಷಧಗಳು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಧನಗಳು, ಇತರ ಚಿಕಿತ್ಸಕಗಳ ಸಮರ್ಪಕ ಪೂರೈಕೆಯಂಥ ವಿಷಯಗಳ ಬಗ್ಗೆಯೂ ಆಳವಾಗಿ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಹವಾಮಾನ ಬದಲಾವಣೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ನವೀಕರಿಸಬಹುದಾದ ಇಂಧನಗಳ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಹೈಡ್ರೋಜನ್​ ಮಿಶನ್​​ನ್ನು ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು. ಹಾಗೇ, ಪರಿಸರ ಸುಸ್ಥಿರತೆ ಕಾಪಾಡಿಕೊಳ್ಳಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ತುಂಬ ಮುಖ್ಯ ಎಂಬುದನ್ನು ಪುನರುಚ್ಚರಿಸಿದರು. ಇದರ ಹೊರತಾಗಿ ಬಾಹಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಸಹಕಾರ, ಮಾಹಿತಿ ತಂತ್ರಜ್ಞಾನ, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಆರೋಗ್ಯ ಕ್ಷೇತ್ರದ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಭಯೋತ್ಪಾದನೆ ವಿಚಾರ ಬಂದಾಗ, ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರು, ಪಾಕಿಸ್ತಾನ ಉಗ್ರರನ್ನು ಪೋಷಿಸುವುದನ್ನು ನಿಲ್ಲಿಸಬೇಕು ಎಂದೂ ಹೇಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಜಪಾನ್​, ಆಸ್ಟ್ರೇಲಿಯಾ ನಾಯಕರ ಭೇಟಿ ಕ್ವಾಡ್​ ಶೃಂಗಸಭೆಯ ನಿಮಿತ್ತ ಯುಎಸ್​ಗೆ ತೆರಳಿರುವ ಪ್ರಧಾನಿ ಮೋದಿ ಇಂದು ಶ್ವೇತಭವನದಲ್ಲಿ ನಡೆಯಲಿರುವ ಕ್ವಾಡ್​ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ನಿನ್ನೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​, ಜಪಾನ್​  ಪ್ರಧಾನಿ ಯೋಶಿಹಿದೆ ಸುಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ರನ್ನು ಭೇಟಿಯಾಗಿದ್ದಾರೆ. ಜಪಾನ್​ ಪ್ರಧಾನಿ ಭೇಟಿ ಬಳಿಕ ಟ್ವೀಟ್ ಮಾಡಿದ ಮೋದಿ, ಭಾರತದ ಅಮೂಲ್ಯವಾದ ಸಹಭಾಗಿಗಳಲ್ಲಿ ಜಪಾನ್​ ಕೂಡ ಒಂದು. ಪಿಎಂ ಯೋಶಿಹಿದೆಯವರನ್ನು ಭೇಟಿಯಾಗಿ, ಭಾರತ ಮತ್ತು ಜಪಾನ್​ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಪೂರಕವಾಗಿ ಹಲವು ವಿಚಾರಗಳ ಚರ್ಚೆ ನಡೆಸಿದ್ದೇವೆ. ಜಪಾನ್​- ಭಾರತ ಸ್ನೇಹ ಇಡೀ ಜಗತ್ತಿಗೇ ಒಳ್ಳೆಯದು ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಭೇಟಿ ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್​ ಮಾರಿಸನ್​ ನನ್ನ ಆಪ್ತ ಸ್ನೇಹಿತರಲ್ಲಿ ಒಬ್ಬರು. ಅವರ ಭೇಟಿ ನನಗೆ ಯಾವಾಗಲೂ ಖುಷಿಕೊಡುತ್ತದೆ. ಈ ಬಾರಿ ಕೂಡ  ವಾಣಿಜ್ಯ, ವ್ಯಾಪಾರ, ಇಂಧನ ಮತ್ತುಇತರ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟ: ದೂರು ಕೊಟ್ಟ ಗ್ರಾ.ಪಂ. ಸದಸ್ಯನನ್ನೇ ಬೈದು ಕಳಿಸಿದ ಪೊಲೀಸ್, ರಾಜೀನಾಮೆ ನೀಡಿದ ಸದಸ್ಯ

ಜಮೀನು ದಾಖಲೆ ಪತ್ರಕ್ಕೆ ಸತಾಯಿಸುತ್ತಿರುವ ಅಧಿಕಾರಿಗಳು, ಬಸ್ ನಿಲ್ದಾಣದಲ್ಲೇ‌ ವಾಸ ಮಾಡಿರುವ ಕುಟುಂಬ 

(Narendra modi and kamala harris discuss afghanistan covid situation during in washington dc)

Published On - 8:30 am, Fri, 24 September 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ