ಜಮೀನು ದಾಖಲೆ ಪತ್ರಕ್ಕೆ ಸತಾಯಿಸುತ್ತಿರುವ ಅಧಿಕಾರಿಗಳು, ಬಸ್ ನಿಲ್ದಾಣದಲ್ಲೇ ವಾಸ ಮಾಡಿರುವ ಕುಟುಂಬ
ಜಮೀನು ವರ್ಗಾವಣೆಯ ಮೂಲ ನಕಲು ಪ್ರತಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕುಟುಂಬದ ಸದಸ್ಯರು ಬಸ್ ನಿಲ್ದಾಣದಲ್ಲೇ ವಾಸ ಮಾಡ್ತಾಯಿದ್ದಾರೆ.
ಯಾದಗಿರಿ: ಜಮೀನು ವರ್ಗಾವಣೆಯ ಮೂಲ ನಕಲು ಪ್ರತಿ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕುಟುಂಬದ ಸದಸ್ಯರು ಬಸ್ ನಿಲ್ದಾಣದಲ್ಲೇ ವಾಸ ಮಾಡ್ತಾಯಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಪ್ರಮೀಳಾ ಹಾಗೂ ವೆಂಕಟರಡ್ಡಿ ದಂಪತಿ ಬಸ್ ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಪಳ್ಳಿ ನಿವಾಸಿಗಳು.
ಏನಿದರ ವೃತ್ತಾಂತ: ಪ್ರಮೀಳಾ ಅವರ ತಂದೆ- ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. ಹೀಗಾಗಿ ಪಿತ್ರಾರ್ಜಿತ ಆಸ್ತಿಯ ದಾಖಲೆ ಪಡೆಯಲು ಪ್ರಮೀಳಾ ಅರ್ಜಿ ಸಲ್ಲಿಸಿದ್ದಾರೆ. ಪ್ರಮೀಳಾ ಪಿತ್ರಾರ್ಜಿತ ಆಸ್ತಿ ಗುರುಮಠಕಲ್ ತಾಲೂಕಿನ ಹಿಮಾಲಪುರ ಗ್ರಾಮದಲ್ಲಿದೆ. ಪ್ರಮೀಳಾ- ವೆಂಕಟರಡ್ಡಿ ದಂಪತಿ ಹೈದರಾಬಾದ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ಇದೆ ಸೆಪ್ಟೆಂಬರ್ 6 ರಂದು ಗುರುಮಠಕಲ್ ತಹಸೀಲ್ದಾರ ಕಚೇರಿಯಲ್ಲಿ ಜಮೀನು ದಾಖಲೆ ಪಡೆಲು ದಂಪತಿ ಅರ್ಜಿ ಹಾಕಿದ್ದರು. ಆದರೆ ಇಲ್ಲಿನ ಅಧಿಕಾರಿಗಳು ದಾಖಲೆಗಳನ್ನ ನೀಡದೆ ದಂಪತಿಯನ್ನು ದಿನಾ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಹಾಗಾಗಿ ಪ್ರಮೀಳಾ- ವೆಂಕಟರಡ್ಡಿ ದಂಪತಿ 16 ದಿನಗಳಿಂದ ಬಸ್ ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದಾರೆ.
ಬಸ್ ನಿಲ್ದಾಣದಲ್ಲೇ ಇದ್ದು ನಿತ್ಯ ತಹಸೀಲ್ ಕಚೇರಿಗೆ ಅಲೆಯುತ್ತಿದ್ದಾರೆ ಈ ದಂಪತಿ. ಆದರೆ ದಂಪತಿ ಬಸ್ ನಿಲ್ದಾಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಇವರತ್ತ ತಿರುಗಿ ನೋಡಿಲ್ಲ.
Also Read: ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಶಿಕ್ಷಣಾಧಿಕಾರಿ ಕಾಲು ಹಿಡಿದ ವಿದ್ಯಾರ್ಥಿಗಳು
ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಹಣವಿಲ್ಲವೆಂದು ಆತ್ಮಹತ್ಯೆ ದೊಡ್ಡಬಳ್ಳಾಪುರ ಪ್ರಿಯದರ್ಶಿನಿ ಬಡಾವಣೆಯಲ್ಲಿ ಘಟನೆ
(revenue department officials fail to provide documents couple reside in the middle of bus stand in gurmitkal yadgir)
Published On - 8:20 am, Fri, 24 September 21