ಪುಣೆಯಲ್ಲಿ ಪತ್ನಿ ಜತೆ ವಡಾ ಪಾವ್ ಸವಿದ ಜಪಾನ್ ರಾಯಭಾರಿ ಮೋದಿ ಹೀಗಂದ್ರು

ಭಾರತದಲ್ಲಿ ಫಾಸ್ಟ್​ಫುಡ್ ತುಂಬಾ ಫೇಮಸ್, ಇಲ್ಲಿನ ಪ್ರತಿಯೊಂದು ನಗರದಲ್ಲಿಯೂ ಅದರದ್ದೇ ಆದ ವಿಶಿಷ್ಟ ತಿನಿಸುಗಳನ್ನು ಕಾಣಬಹುದು, ವಿದೇಶಿ ನಾಯಕರಿಗೂ ನಮ್ಮ ದೇಶದ ಆಹಾರವೆಂದರೆ ಅಚ್ಚು ಮೆಚ್ಚು.

ಪುಣೆಯಲ್ಲಿ ಪತ್ನಿ ಜತೆ ವಡಾ ಪಾವ್ ಸವಿದ ಜಪಾನ್ ರಾಯಭಾರಿ ಮೋದಿ ಹೀಗಂದ್ರು
ಜಪಾನ್ ರಾಯಭಾರಿ
Follow us
ನಯನಾ ರಾಜೀವ್
|

Updated on:Jun 11, 2023 | 2:44 PM

ಭಾರತದಲ್ಲಿ ಫಾಸ್ಟ್​ಫುಡ್ ತುಂಬಾ ಫೇಮಸ್, ಇಲ್ಲಿನ ಪ್ರತಿಯೊಂದು ನಗರದಲ್ಲಿಯೂ ಅದರದ್ದೇ ಆದ ವಿಶಿಷ್ಟ ತಿನಿಸುಗಳನ್ನು ಕಾಣಬಹುದು, ವಿದೇಶಿ ನಾಯಕರಿಗೂ ನಮ್ಮ ದೇಶದ ಆಹಾರವೆಂದರೆ ಅಚ್ಚು ಮೆಚ್ಚು. ಹಾಗೆಯೇ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಪುಣೆಯಲ್ಲಿ ತಮ್ಮ ಪತ್ನಿಯೊಂದಿಗೆ ವಡಾ ಪಾವ್ ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಪತ್ನಿ ಜತೆ ವಡಾ ಪಾವ್(Vada Pav) ತಿನ್ನುವ ಸ್ಪರ್ಧೆಯಲ್ಲಿ ಸೋತಿದ್ದೇನೆ ಎನ್ನುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಸ್ವತಃ ಜಪಾನ್ ರಾಯಭಾರಿ ಸುಜುಕಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಪತ್ನಿ ನನ್ನನ್ನು ಸೋಲಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಸುಜುಕಿಯ ಈ ಟ್ವೀಟ್‌ಗೆ ಪ್ರಧಾನಿ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಸೋತಿದ್ದಕ್ಕೆ ಬೇಸರ ಪಡಬೇಡಿ, ನೀವು ಭಾರತೀಯ ತಿನಿಸುಗಳನ್ನು ಆನಂದಿಸುವುದನ್ನು ನೋಡಲು ಸಂತೋಷವಾಗುತ್ತದೆ, ಇಂತಹ ವಿಡಿಯೋಗಳು ಮತ್ತಷ್ಟು ಬರಲಿ ಎಂದಿದ್ದಾರೆ.

ಇದೊಂದು ಸ್ಪರ್ಧೆಯಲ್ಲಿ ನೀವು ಸೋತರೂ ಪರವಾಗಿಲ್ಲ, ಮಿಸ್ಟರ್ ರಾಯಭಾರಿ. ನೀವು ಭಾರತದ ತಿನಿಸುಗಳ ವೈವಿಧ್ಯತೆಯನ್ನು ಆನಂದಿಸುತ್ತಿರುವುದನ್ನು ಮತ್ತು ಅಂತಹ ವಿನೂತನ ರೀತಿಯಲ್ಲಿ ಅದನ್ನು ಪ್ರಸ್ತುತಪಡಿಸುವುದನ್ನು ನೋಡಲು ಸಂತೋಷವಾಗುತ್ತಿದೆ, ಇಂತಹ ವೀಡಿಯೊಗಳು ಬರುತ್ತಿರಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾರ್ಯಕ್ರಮಕ್ಕಾಗಿ ಪುಣೆಗೆ ಭೇಟಿ ನೀಡಿದಾಗ, ಜಪಾನ್ ರಾಯಭಾರಿ ಹಿರೋಷಿ ಸುಜುಕಿ ಅವರು ಮಹಾರಾಷ್ಟ್ರ ಶೈಲಿಯ ಬೀದಿ ಆಹಾರವನ್ನು ಪ್ರಯತ್ನಿಸಿದರು. ಸ್ವಲ್ಪ ದಿನಗಳ ಹಿಂದೆ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಕೂಡ ಭಾರತೀಯ ತಿನಿಸುಗಳನ್ನು ಆನಂದಿಸಿದ್ದರು, ಹೈದರಾಬಾದಿ ಗೋಸ್ಟ್​ ಬಿರಿಯಾನಿ ಸವಿದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:43 pm, Sun, 11 June 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?