ನವದೆಹಲಿ: ಆಟಿಕೆ ಮೇಳ (India Toy Fair 2021 ) ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ಆಟಿಕೆ ಮೇಳ ಆಯೋಜಿಸಿರುವುದರ ಬಗ್ಗೆ ಹೆಮ್ಮೆಯೆನಿಸುತ್ತದೆ. ಆತ್ಮ ನಿರ್ಭರ ಭಾರತದ ನಿರ್ಮಾಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈ ಮೇಳದಲ್ಲಿ ಭಾಗವಹಿಸುವ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.
ಆಟಿಕೆ ಮೇಳಕ್ಕೆ ಚಾಲನೆ ನೀಡಿದ ನಂತರ ವಿವಿಧ ರಾಜ್ಯಗಳ ಆಟಿಕೆ ತಯಾರಕರೊಂದಿಗೆ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಆಟಿಕೆ ಉದ್ಯಮದಲ್ಲಿ 200 ವರ್ಷಗಳಿಂದ ತೊಡಗಿರುವ ಚನ್ನಪಟ್ಟಣ ಬೊಂಬೆ ತಯಾರಕರಲ್ಲಿ ಮಾತನಾಡಿದ ಮೋದಿ, ಮಾರಾಟಗಾರರು ಇ- ಮಾರುಕಟ್ಟೆಗೆ ತೆರೆದುಕೊಳ್ಳುವಂತೆ ಹೇಳಿದ್ದಾರೆ. ಬೊಂಬೆ ಮಾರಾಟಕ್ಕೆ ಹೊಸ ವಿಧಾನಗಳನ್ನು ಕಂಡುಕೊಳ್ಳುವ ಮೂಲಕ ಈ ಆಟಿಕೆಗಳನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ಯಬೇಕು ಎಂದು ಅವರು ಹೇಳಿದ್ದಾರೆ.
ವಾರಣಾಸಿ ಆಟಿಕೆ ತಯಾರಕರಲ್ಲಿ ಮಾತನಾಡಿದ ಪ್ರಧಾನಿ ಬೊಂಬೆಗಳಿಗೆ ಮಾಸ್ಕ್ ಹಾಕಿ. ಮಕ್ಕಳು ಬೊಂಬೆಗಳಲ್ಲಿ ಜೀವಂತಿಕೆಯನ್ನು ಹುಡುಕುತ್ತಿರುತ್ತಾರೆ. ಅವರು ಬೊಂಬೆಗಳನ್ನು ಅನುಕರಿಸುತ್ತಾರೆ. ಬೊಂಬೆಯಾಟ ನಮ್ಮ ದೇಶದಲ್ಲಿ ಖ್ಯಾತಿ ಪಡೆದ ಕಲೆಯಾಗಿದೆ. ಮಕ್ಕಳು ಈಗಲೂ ಕುತೂಹಲದಿಂದ ಬೊಂಬೆಯಾಟ ನೋಡುತ್ತಾರೆ. ಬೊಂಬೆಗಳನ್ನು ಕುಣಿಸುವಾಗ ನೀವು ತೋರುವ ಆತ್ಮವಿಶ್ವಾಸ ಅತುಲ್ಯವಾದುದು ಎಂದು ಜೈಪುರದ ಕಟ್ ಪುತಲಿ (ಬೊಂಬೆಯಾಟ) ಸಂಘದೊಂದಿಗೆ ಮಾತನಾಡಿದ ಮೋದಿ ಹೇಳಿದ್ದಾರೆ.
Delhi: PM Narendra Modi inaugurates The India Toy Fair 2021. pic.twitter.com/dfBNR2Aidf
— ANI (@ANI) February 27, 2021
ಮೋದಿ ಭಾಷಣದ ಮುಖ್ಯಾಂಶಗಳು
ಭಾರತದ ಮೊದಲ ಆಟಿಕೆ ಮೇಳ ಆಯೋಜಿಸಿರುವುದರ ಬಗ್ಗೆ ಹೆಮ್ಮೆಯೆನಿಸುತ್ತದೆ. ಆತ್ಮ ನಿರ್ಭರ ಭಾರತದ ನಿರ್ಮಾಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈ ಮೇಳದಲ್ಲಿ ಭಾಗವಹಿಸುವ ಎಲ್ಲರಿಗೂ ಅಭಿನಂದನೆಗಳು. ನಮ್ಮ ದೇಶದ ಪುರಾತನ ಸಂಪ್ರದಾಯವನ್ನು ಇದು ಸುದೃಢಗೊಳಿಸಲಿದೆ. 1,000ಕ್ಕಿಂತಲೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಲಿದ್ದಾರೆ.
ಇದು ಕೇವಲ ವ್ಯಾವಹಾರಿಕ ಕಾರ್ಯಕ್ರಮವಲ್ಲ, ಇದು ದೇಶದ ಪುರಾತನ ಆಟ ಮತ್ತು ಕ್ರೀಡಾ ಸಂಸ್ಕೃತಿಯನ್ನು ಬಲಗೊಳಿಸುವ ಕಾರ್ಯಕ್ರಮವಾಗಿದೆ. ದೇಶದಾದ್ಯಂತ ಜನರು ಸಿಂಧೂ ಕಣಿವೆ ಮತ್ತು ಮೊಹೆಂಜದಾರೊ ಆಟಿಕೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಭಾರತದ ಚೆಸ್ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿದೆ. ದೇಶದಲ್ಲಿನ ಆಟಿಕೆ ಉದ್ಯಮದಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಇವುಗಳ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವುದು ಮತ್ತು ಮತ್ತಷ್ಟು ಪ್ರಚಲಿತಗೊಳಿಸುವುದು ಆತ್ಮನಿರ್ಭರ್ ಅಭಿಯಾನದ ಭಾಗವಾಗಿದೆ.
ಭಾರತದ ಸ್ಥಳೀಯ ಆಟಿಕೆಗಳು ಕೈಗೆಟುಕುವ ದರದ್ದು ಮತ್ತು ನೈಸರ್ಗಿಕ ಉತ್ಪನ್ನಗಳಿಂದ ಮಾಡಿದ್ದಾಗಿದೆ. ಜಗತ್ತಿನಲ್ಲಿ ಖ್ಯಾತಿ ಪಡೆದಿರುವ ಚೆಸ್ ಭಾರತದಲ್ಲಿ ಈ ಹಿಂದೆ ಚತುರಂಗ ಅಥವಾ ಚದುರಂಗ ಎಂದು ಕರೆಯಲ್ಪಟ್ಟಿತ್ತು. ಲೂಡೊ ‘ಪಚೀಸಿ’ ಎಂಬ ಹೆಸರಿನಲ್ಲಿ ದೇಶದಲ್ಲಿ ಬಳಕೆಯಲ್ಲಿತ್ತು. ನಮ್ಮ ಕೆತ್ತನೆಗಳಲ್ಲಿ ಶ್ರೀರಾಮನ ಬಳಿ ಇದ್ದ ಹಲವಾರು ಆಟಿಕೆಗಳನ್ನು ನಾವು ಕಾಣಬಹುದು. ಸಿಂಧೂನಾಗರಿಕತೆ, ಮೊಹೆಂಜದಾರೊ, ಹರಪ್ಪ ನಾಗರಿಕತೆಯಲ್ಲಿದ್ದ ಆಟಿಕೆಗಳ ಬಗ್ಗೆ ಅಧ್ಯಯನ ನಡೆದಿದೆ. ವಿದೇಶಿ ಯಾತ್ರಿಕರು ಇಲ್ಲಿಗೆ ಬಂದಾಗ ಅವರು ನಮ್ಮ ದೇಶದ ಕ್ರೀಡೆಗಳನ್ನು ಕಲಿತು ಹೋಗುತ್ತಿದ್ದರು.
ಮರುಬಳಕೆ ಮತ್ತು ಪುನರ್ ಬಳಕೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಆಟಿಕೆ ತಯಾರಿಗಳಲ್ಲಿಯೂ ಇದನ್ನು ಕಾಣಬಹುದು. ಭಾರತದ ಹೆಚ್ಚಿನ ಆಟಿಕೆಗಳು ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಆಗಿವೆ. ಅದರಲ್ಲಿ ಬಳಸುವ ಬಣ್ಣವೂ ನೈಸರ್ಗಿಕ ಮತ್ತು ಸುರಕ್ಷಿತವಾಗಿದೆ.
ಪರಿಸರ ವಿಜ್ಞಾನ ಮತ್ತು ಮನಶಾಸ್ತ್ರಕ್ಕೆ ಸಂಬಂಧಿಸಿದ ಆಟಿಕೆಗಳನ್ನು ತಯಾರಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಆಟಿಕೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ಪುನರ್ ಬಳಕೆಯಾಗುವ ವಸ್ತುಗಳನ್ನು ಬಳಸಿ.
ಸ್ಥಳೀಯ ಆಟಕೆಗಳು ಮಕ್ಕಳಲ್ಲಿ ಒಗ್ಗಟ್ಟನ್ನು ಪ್ರೋತ್ಸಾಹಿಸುತ್ತವೆ. ಪೇಪರ್ನಿಂದ ಮಾಡಿದ ವಿಮಾನ, ಹೂ, ದೋಣಿ ಎಲ್ಲವೂ ನಮ್ಮ ಬದುಕಿನ ಭಾಗಗಳಾಗಿವೆ.
Today more than 85% of toys are imported from different countries. There is a need to replace international stars with Indian superheroes : PM @narendramodi #TheIndiaToyFair #Vocal4LocalToys @PMOIndia @TheIndiaToyFair
— MyGovIndia (@mygovindia) February 27, 2021
ಭಾರತದ ಆಟಿಕೆಗಳು ಕೇವಲ ಮನರಂಜನೆ ಅಲ್ಲ , ಅವು ನಮಗೆ ವೈಜ್ಞಾನಿಕ ಸಿದ್ಧಾಂತಗಳನ್ನು ಹೇಳುತ್ತವೆ. ‘ಲಟ್ಟು’ (ಬುಗುರಿ) ನಮಗೆ ಗುರುತ್ವಾಕರ್ಷಣೆ ಮತ್ತು ಸಮತೋಲನವನ್ನು ಕಲಿಸುತ್ತದೆ. ಗುಲೇಲ್ (ಕವಣೆ) ವಸ್ತುವಿನ ಸಾಮರ್ಥ್ಯ ಮತ್ತು ಚಲನಾತ್ಮಕ ಶಕ್ತಿಯನ್ನು ವಿವರಿಸುತ್ತದೆ. ಪಜಲ್ ಆಟಿಕೆಗಳು ಸಮಸ್ಯಾ ಪರಿಹಾರ ಮತ್ತು ನೆನಪಿನ ಶಕ್ತಿಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಅದೇ ರೀತಿ ಪುಟ್ಟ ಮಗು ಜುನ್ ಜುನಾ ತಿರುಗುವುದನ್ನು ನೋಡಿ ವರ್ತುಲ ಚಲನೆಯನ್ನು ಗುರುತಿಸುತ್ತದೆ.
ಮಕ್ಕಳು ಆಟಿಕೆಗಳ ಜತೆ ಆಡುವಾಗ ಪಾಲಕರೂ ಅದರಲ್ಲಿ ಭಾಗಿಯಾಗಿ. ಇದು ಮಕ್ಕಳ ಕಲಿಕಾ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ. ಹೊಸ ಶಿಕ್ಷಣ ನೀತಿ (NEP) ಆಟ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಈಗ ಶೇ. 85ರಷ್ಟು ಆಟಿಕೆಗಳು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ.ಅಂತರಾಷ್ಟ್ರೀಯ ಹೀರೊಗಳ ಬದಲು ಭಾರತದ ಸೂಪರ್ ಹೀರೊಗಳು ಇರಲಿ.
The country has now ranked the toy industry in 24 major sectors. The National Toy Action Plan has also been prepared. It includes 15 ministries and departments to make these industries competitive, and country to become #AatmaNirbhar in toys: PM @narendramodi #TheIndiaToyFair
— MyGovIndia (@mygovindia) February 27, 2021
ಮಕ್ಕಳ ಸೃಜನಾತ್ಮಕ ಮತ್ತು ವಿವೇಚನೆಗೆ ಹೊಂದುವಂತೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಆಟಿಕೆ ಉದ್ಯಮದಲ್ಲಿ ಭಾರತ ಸಾಂಪ್ರದಾಯಿಕ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ನಾವು ಪರಿಸರ ಸ್ನೇಹಿ ಆಟಿಕೆಗಳನ್ನು ಮಾಡಬೇಕಿದೆ .
ನಮ್ಮ ಸಾಫ್ಟ್ ವೇರ್ ಎಂಜಿನಿಯರ್ಗಳು, ಕಂಪ್ಯೂಟರ್ ಗೇಮ್ಸ್ ಮೂಲಕ ಭಾರತದ ಕತೆಗಳನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ಯಬಹುದು. ಆಟಿಕೆ ತಯಾರಿಕೆಯ ಕ್ಷೇತ್ರದಲ್ಲಿ ನಾವು 24 ವಲಯಗಳನ್ನು ಸಂಬೋಧಿಸಿದ್ದೇವೆ. ನಮಗೆ ‘ಟಾಯಕಥಾನ್’ ಮೂಲಕ 7,000ಕ್ಕಿಂತಲೂ ಹೆಚ್ಚು ಅಭಿಪ್ರಾಯಗಳು ಲಭಿಸಿವೆ.
ಮೇಡ್ ಇನ್ ಇಂಡಿಯಾಗೆ ಹೇಗೆ ಬೇಡಿಕೆ ಇರುತ್ತೋ ಅದೇ ರೀತಿ ಹ್ಯಾಂಡ್ ಮೇಡ್ ಇಂಡಿಯಾಗೂ ಬೇಡಿಕೆ ಇದೆ. ಈಗ ಜನರು ಕೇವಲ ಉತ್ಪನ್ನವಾಗಿ ಆಟಿಕೆಗಳನ್ನು ಖರೀದಿಸುವುದಿಲ್ಲ, ಅವರು ತಮ್ಮ ಅನುಭವಗಳನ್ನು ಅದರೊಂದಿಗೆ ಜೋಡಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ನಾವು ಹ್ಯಾಂಡ್ ಮೇಡ್ ಇನ್ ಇಂಡಿಯಾ ಆಟಿಕೆಗಳನ್ನು ಪ್ರೋತ್ಸಾಹಿಸಬೇಕು ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ:India Toy Fair 2021: ಆಟಿಕೆ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Published On - 1:23 pm, Sat, 27 February 21