ಮಹಿಳಾ ದಿನಾಚರಣೆ: ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾದ ಮೋದಿ ಸರ್ಕಾರದ ಯೋಜನೆಗಳು

| Updated By: ರಮೇಶ್ ಬಿ. ಜವಳಗೇರಾ

Updated on: Mar 08, 2024 | 6:24 PM

ಇಂದು ಎಲ್ಲೆಡೆ ಮಹಿಳೆಯರ ದಿನಾಚಣರ ಆಚರಣೆ ಮಾಡಲಾಗುತ್ತಿದ್ದು, ಈ ದಿನದಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಏನೆಲ್ಲಾ ಯೋಜನೆ ರೂಪಿಸಿದೆ ಎನ್ನುವುದನ್ನು ಹಂಚಿಕೊಂಡಿದ್ದು, ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆಯರ ವಿಡಿಯೋಗಳನ್ನು ಮೋದಿ ಶೇರ್ ಮಾಡಿಕೊಂಡಿದ್ದಾರೆ. ಈ ಮಹಿಳೆಯರ ಸ್ಪೂರ್ತಿದಾಯಕ ವಿಡಿಯೋಗಳು ಇಲ್ಲಿವೆ ನೋಡಿ.

ಮಹಿಳಾ ದಿನಾಚರಣೆ: ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾದ ಮೋದಿ ಸರ್ಕಾರದ ಯೋಜನೆಗಳು
ನರೇಂದ್ರ ಮೋದಿ
Image Credit source: Hindustan Times
Follow us on

ವಿಶ್ವಾದ್ಯಾಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (World women’s Day) ಇಂದು ಅಂದರೆ ಮಾರ್ಚ್ 8 ರಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಯಶ ಕೋರಿದ್ದಾರೆ. ಅಲ್ಲದೇ ಮಹಿಳೆರಿಗಾಗಿ ಕೆಲ ಸ್ಫೂರ್ತಿದಾಯಕ ಮಾತುಗಳೊಂದಿಗೆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸರ್ಕಾರ ಜಾರಿ ತಂದಿರುವ ಯೋಜನೆಗಳನ್ನು ಉಲ್ಲೇಖಿಸಿ ಮಹಿಳೆಯರಿಗೆ ಯಾವ ರೀತಿ ಅನುಕೂಲವಾಗುತ್ತಿದೆ ಎನ್ನುವುದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಮಹಿಳೆಯರನ್ನು ತಮ್ಮ ಸ್ಫೂರ್ತಿ ಮಾತುಗಳಿಂದ ಹಾಡಿಹೊಗಳಿದ್ದಾರೆ.

ಸ್ವನಿಧಿ ಯೋಜನೆ


ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಕೂಡಾ ಆಗಿದೆ. ಇದು ಜೂನ್ 2020 ರಲ್ಲಿ ಪ್ರಾರಂಭವಾದ ಕೇಂದ್ರ ವಲಯದ ಯೋಜನೆಯಾಗಿದೆ. ಈ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಿಳೆಯರ ದಿನಾಚರಣೆಯಂದು ಟ್ವೀಟ್ ಮಾಡಿದ್ದು, ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯು ಬಡ ಕಾರ್ಮಿಕರ ಜೀವನದಲ್ಲಿಯೂ ಹೊಸ ಸಂತೋಷವನ್ನು ತಂದಿದೆ. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ ಎಂದು ಹೇಳಿದ್ದಾರೆ.

ಲಖ್​ಪತಿ ದೀದಿ ಯೋಜನೆ


ಇನ್ನು ಆಗಸ್ಟ್ 15, 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಈ ಲಖ್‌ಪತಿ ದೀದಿ ಯೋಜನೆ ಘೋಷಣೆ ಮಾಡಿದ್ದು,ಮಹಿಳೆಯರು ತಮ್ಮ ಹಳ್ಳಿಗಳಲ್ಲಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು ಈ ಲಖ್‌ಪತಿ ದೀದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ಮೋದಿ ಪ್ರತಿಕ್ರಿಯಿಸಿ , ಲಖ್‌ಪತಿ ದೀದಿ ಯೋಜನೆಯು ದೇಶಾದ್ಯಂತ ಮಹಿಳೆಯರ ಸಬಲೀಕರಣಕ್ಕೆ ಪ್ರಮುಖವಾಗಿದೆ. ಸ್ವಸಹಾಯ ಗುಂಪುಗಳಲ್ಲಿರುವ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದಿದ್ದಾರೆ.

ನಮೋ ಡ್ರೋನ್ ದೀದಿ ಯೋಜನೆ


ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆರಂಭಿಸಿದ ನಮೋ ಡ್ರೋನ್ ದೀದಿ ಯೋಜನೆಯಡಿ (NAMO Drone Didi Scheme) ಡ್ರೋನ್ ಪೈಲಟ್‌ಗಳಾಗಿ ತರಬೇತಿ ಪಡೆದ ಭಾರತದ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಇದೀಗ ತರಬೇತಿ ಮುಗಿಸಿ ಆಕಾಶದಲ್ಲಿ ತಮ್ಮ ಡ್ರೋನ್‌ಗಳನ್ನು ಹಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡುವುದು, ಸಮಯ ಮತ್ತು ನೀರನ್ನು ಉಳಿಸುವುದು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ.

ಪಂಜಾಬ್‌ನಿಂದ 22, ಹರಿಯಾಣದಿಂದ 20, ರಾಜಸ್ಥಾನದಿಂದ 24, ಮಹಾರಾಷ್ಟ್ರದಿಂದ 29, ಹಿಮಾಚಲ ಪ್ರದೇಶದ ನಾಲ್ವರು, ಗುಜರಾತ್‌ನಿಂದ 18, ಮಧ್ಯಪ್ರದೇಶದಿಂದ 23, ಉತ್ತರ ಪ್ರದೇಶದ 28, ಕೇರಳದಿಂದ ಇಬ್ಬರು, ಸೇರಿದಂತೆ ಹಲವಾರು ಮಹಿಳೆಯರು ಬಿಹಾರ, ಉತ್ತರಾಖಂಡದ ಮೂವರು, ಕರ್ನಾಟಕದ 20, ಅಸ್ಸಾಂನ 9, ತೆಲಂಗಾಣದ 11, ತಮಿಳುನಾಡಿನ 16, ಆಂಧ್ರಪ್ರದೇಶದ 13 ಇತ್ಯಾದಿ ಡ್ರೋನ್ ಪೈಲಟ್‌ಗಳಾಗಿ ತರಬೇತಿ ಪಡೆದಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ


ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PMAY) ಭಾರತ ಸರ್ಕಾರವು ಪ್ರಾರಂಭಿಸಿದ ವಸತಿ ಯೋಜನೆಯಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳು, ನಗರ ಪ್ರದೇಶದ ಕಡಿಮೆ-ಆದಾಯದ ಗುಂಪುಗಳು ಮತ್ತು ಗ್ರಾಮೀಣ ಬಡವರ ಅನುಕೂಲಕ್ಕಾಗಿ ಈ ಯೋಜನೆಯಿದೆ. ಈ ಹಿಂದಿನ ಯೋಜನೆಗಳಿಗಿಂತ ಭಿನ್ನ ಎಂಬಂತೆ ಆರ್ಥಿಕ ದುರ್ಬಲ ವರ್ಗದವರು (EWS) ಮತ್ತು ಕಡಿಮೆ ಆದಾಯದ (LIG) ಮಹಿಳೆಯರ ಸಬಲೀಕರಣದ ಕಡೆಗೆ ಸರ್ಕಾರದ ಪ್ರಯತ್ನಗಳ ಮುಂದುವರಿಕೆಯಾಗಿ, PMAY (U) ಈ ಮಿಷನ್ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರಬೇಕು ಎಂಬ ಕಡ್ಡಾಯವಾದ ನಿಬಂಧನೆ ಮಾಡಿದೆ.

Published On - 6:22 pm, Fri, 8 March 24