ಲೋಕಸಭಾ ಚುನಾವಣೆ ಭರ್ಜರಿ ತಯಾರಿ, ಅಸಾದುದ್ದೀನ್ ಓವೈಸಿ ಫಿಟ್ನೆಸ್ ಮಂತ್ರ ಇಲ್ಲಿದೆ ನೋಡಿ!

ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಫಿಟ್ನೆಸ್ ಸೆಂಟರ್​ನಲ್ಲಿ ಭಾರವಾದ ಡಂಬೆಲ್​​ಗಳನ್ನು ಎಡಗೈನಿಂದ ಎತ್ತುವ ವ್ಯಾಯಾಮ ಮಾಡಿದ್ದಾರೆ. ತಮ್ಮ ಇಳಿ ವಯಸ್ಸಿನ ಹೊರತಾಗಿಯೂ ಅವರು ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅವರು ಹಲವಾರು ರೀತಿಯ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow us
ಸಾಧು ಶ್ರೀನಾಥ್​
|

Updated on:Mar 09, 2024 | 7:30 AM

ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (MIM Chief Asaduddin Owaisi) ರಾಜಕೀಯದಲ್ಲಿ ಓರ್ವ ವಿವಾದಿತ ನಾಯಕ. ಸದಾ ವಿವಾದಗಳನ್ನೆಬ್ಬಿಸುವುದು ಅವರ ಚಾಳಿಯಾಗಿದೆ. ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಧ್ವನಿಯೆತ್ತುತ್ತಾರೆ. ಸಂಸತ್ತಿನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ತೀವ್ರ ಹೋರಾಟ ನಡೆಸಿದವರು. ಕೇಂದ್ರದ ನಿರ್ಧಾರಗಳ ವಿರುದ್ಧ ಹಲವು ಬಾರಿ ತಮ್ಮ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸಾದುದ್ದೀನ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಕ್ಷೇತ್ರದ ಜನರನ್ನು ಕಾಲಕಾಲಕ್ಕೆ ಮಂತ್ರಮುಗ್ಧರನ್ನಾಗಿಯೂ ಮಾಡುತ್ತಾರೆ. ಬುಲೆಟ್​ ಗಾಡಿಯೇರಿ (Viral Video) ಅವರು ಹಳೆಯ ನಗರದ ಬೀದಿಗಳಲ್ಲಿ ಉಲ್ಲಾಸದಿಂದ ಸುತ್ತುತ್ತಾರೆ ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯವನ್ನು ತುಂಬುತ್ತಾ, ಮುಂದೆ ಸಾಗುತ್ತಾರೆ. ಆದರೆ ಇತ್ತೀಚೆಗಷ್ಟೇ ಯಾರೂ ನಿರೀಕ್ಷಿಸದ ಸಾಹಸಗಳಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು.

ಫಿಟ್ನೆಸ್ ಸೆಂಟರ್​ನಲ್ಲಿ ಭಾರವಾದ ಡಂಬೆಲ್​​ಗಳನ್ನು ಎಡಗೈನಿಂದ ಎತ್ತುವ ವ್ಯಾಯಾಮ ಮಾಡಿದ್ದಾರೆ. ತಮ್ಮ ಇಳಿ ವಯಸ್ಸಿನ ಹೊರತಾಗಿಯೂ ಅವರು ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅವರು ಹಲವಾರು ರೀತಿಯ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದವರೆಲ್ಲ ವಾವ್ ಎಂದಿದ್ದಾರೆ. ಎಂಐಎಂ ಮುಖ್ಯಸ್ಥ ಓವೈಸಿ ಅವರು ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಇದರಿಂದ ಗೋಚರವಾಗಿದೆ. ಅಂದಹಾಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಇದೆ. ಹಾಗಾಗಿ ನಾನಾ ಕ್ಷೇತ್ರಗಳಲ್ಲಿ ಸಂಚರಿಸಲು ದೈಹಿಕ ಕಸರತ್ತು ಸಹ ಮುಖ್ಯವಾಗಿದ್ದು, ಓವೈಸಿ ಆ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 7:29 am, Sat, 9 March 24