ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೇ ಮಾದರಿ: ಪ್ರಧಾನಿ ನರೇಂದ್ರ ಮೋದಿ

ಭಾರತವು ಕೊರೊನಾ ಲಸಿಕೆಯನ್ನು ಇತರ ರಾಷ್ಟ್ರಗಳಿಗೂ ನೀಡಿದೆ. ಜೊತೆಗೆ, ಮಾಸ್ಕ್ , ಪಿಪಿಇ ಕಿಟ್​ಗಳನ್ನು ಕೂಡ ವಿದೇಶಕ್ಕೆ ರಫ್ತು ಮಾಡಿದೆ.

  • TV9 Web Team
  • Published On - 19:15 PM, 28 Jan 2021
ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೇ ಮಾದರಿ: ಪ್ರಧಾನಿ ನರೇಂದ್ರ ಮೋದಿ
ಈ ಬಾರಿಯ ಬಜೆಟ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಕೇಳಿಬಂದಿದೆ: ನರೇಂದ್ರ ಮೋದಿ

ದೆಹಲಿ: ಕೊರೊನಾ ಸೋಂಕಿನ ವಿರುದ್ಧ ಭಾರತ ಯಶಸ್ವಿ ಹೋರಾಟ ನಡೆಸಿದೆ. ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೇ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ತಿಳಿಸಿದರು. ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಂ WEF) ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಿದರು. ನಾವು ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದ್ದೇವೆ. ಸದ್ಯಕ್ಕೆ ಭಾರತದಲ್ಲಿ ಎರಡು ಲಸಿಕೆ ಉತ್ಪಾದಿಸಲಾಗುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ಮೋದಿ ಹೇಳಿದರು.

ನಾವು ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್​ಗೆ ಲಸಿಕೆ ನೀಡಿದ್ದೇವೆ. 2ನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುತ್ತೇವೆ. ಭಾರತವು ಕೊರೊನಾ ಲಸಿಕೆಯನ್ನು ಇತರ ರಾಷ್ಟ್ರಗಳಿಗೂ ನೀಡಿದೆ. ಜೊತೆಗೆ, ಮಾಸ್ಕ್ , ಪಿಪಿಇ ಕಿಟ್​ಗಳನ್ನು ಕೂಡ ವಿದೇಶಕ್ಕೆ ರಫ್ತು ಮಾಡಿದೆ. ಆ ಮೂಲಕ, ಪ್ರತಿಯೊಬ್ಬರ ಜೀವ ಉಳಿಸಲು ಭಾರತ ಆದ್ಯತೆ ನೀಡಿದೆ. ಭಾರತ ಆತ್ಮನಿರ್ಭರ ಭಾರತ್ ಆಗಲು ಮುನ್ನಡೆಯುತ್ತಿದೆ ಎಂದು ಮೋದಿ ದೇಶದ ಕಾರ್ಯಗಳ ಬಗ್ಗೆ ವಿಚಾರ ಹಂಚಿಕೊಂಡರು.

ಇದನ್ನೂ ಓದಿ: 60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ

ಕೊರೊನಾ ಪರಿಸ್ಥಿತಿಯಲ್ಲಿ ಜನರು ಧೈರ್ಯದಿಂದ ಪರಿಸ್ಥಿತಿ ಎದುರಿಸಿದೆವು. ಅದಕ್ಕಾಗಿ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಿದೆವು. ಕೊರೊನಾ ಪೀಡಿತರ ಸಂಖ್ಯೆ ಈಗ ವೇಗವಾಗಿ ಕುಸಿಯುತ್ತಿದೆ ಎಂದು ಭಾರತದ ಬಗ್ಗೆ ತಿಳಿಸಿದರು. ವಿಶ್ವದ ಅನೇಕ ದೇಶಗಳಲ್ಲಿ ಏರ್​ಸ್ಪೇಸ್ ಬಂದ್ ಆಗಿತ್ತು. ಆದರೆ ‌ ಭಾರತ 150 ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡಿತು. ಸುಮಾರು 1 ಲಕ್ಷ ನಾಗರಿಕರನ್ನು ತಮ್ಮ ತಮ್ಮ ದೇಶಗಳಿಗೆ ಕಳುಹಿಸಿಕೊಟ್ಟಿತು. ಆ ಮೂಲಕ, ಬೇರೆ ದೇಶದ ಜನರ ಜೀವವನ್ನೂ ಭಾರತ ರಕ್ಷಿಸಿತು. ಭಾರತದಲ್ಲಿ ಈಗಾಗಲೇ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳು ಬಂದಿವೆ. ಇನ್ನು ಮುಂದೆ ಇನ್ನೂ ಹೆಚ್ಚಿನ ಲಸಿಕೆ ಬರಲಿವೆ ಎಂದು ಪ್ರಧಾನಿ ಆಶಾಭಾವ ವ್ಯಕ್ತಪಡಿಸಿದರು.

ಕಳೆದ ಆರು ವರ್ಷದಲ್ಲಿ ಡಿಜಿಟಲ್ ಇಂಡಿಯಾದಲ್ಲಿ ಭಾರತ ಪ್ರಗತಿ ಹೊಂದಿದೆ. ಡಿಸೆಂಬರ್ ತಿಂಗಳಲ್ಲಿ ಭಾರತ 4 ಲಕ್ಷ ಕೋಟಿ ರೂಪಾಯಿಯನ್ನು ಯುಪಿಐ ಡಿಜಿಟಲ್ ಮೂಲಕ ವರ್ಗಾವಣೆ ಮಾಡಿದೆ. ಕೊರೊನಾದಿಂದ ಅನೇಕ ದೇಶ ಸಂಕಷ್ಟದಲ್ಲಿದ್ದವು. ಆದರೆ ಭಾರತ, 70 ಕೋಟಿ ಜನರ ಬ್ಯಾಂಕ್ ಖಾತೆಗಳಿಗೆ 4 ಲಕ್ಷ ಕೋಟಿ ಪರಿಹಾರ ಹಣ ವರ್ಗಾವಣೆ ಮಾಡಿತು. ಇದು ವರ್ಲ್ಡ್ ಎಕನಾಮಿಕ್ ಪೋರಂಗೆ ಅಧ್ಯಯನ ವಿಷಯವಾಗಿದೆ ಎಂದು ಡಿಜಿಟಲ್ ಇಂಡಿಯಾ ಬಗ್ಗೆ ಮೋದಿ ಮಾತನಾಡಿದರು.

ಭಾರತದ 130 ಕೋಟಿ ಜನರಿಗೆ ಯೂನಿಕ್ ಡಿಜಿಟಲ್ ಹೆಲ್ತ್ ಕಾರ್ಡ್ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲು ಭಾರತ ನಿರ್ಧರಿಸಿದೆ. ಸರ್ಕಾರ ಹಾಗೂ ಕೈಗಾರಿಕೆಗಳು ಈ ಗುರಿ ಮುಟ್ಟಲು ಒಟ್ಟಾಗಿ ಶ್ರಮಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟರು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸ್ಥಿತಿ ಉತ್ತಮವಾಗಿದೆ. ತಂತ್ರಜ್ಞಾನ ಬಳಸಿಕೊಂಡು ಈಸ್ ಆಫ್ ಲಿವೀಂಗ್ ಕೂಡ ಉತ್ತಮಪಡಿಸುತ್ತಿದ್ದೇವೆ. ಆರ್ಥಿಕ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ವೇಗವಾಗಿ ಬದಲಾಗಲಿದೆ ಎಂದು ಮೋದಿ ಹೇಳಿದರು.

ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು

ಭದ್ರತೆ ವಿಚಾರದಲ್ಲಿ NCC ಪಾತ್ರ ಹೆಚ್ಚಿಸಲು ಭಾರತ ಸರ್ಕಾರ ಶ್ರಮಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ