ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್​, ಸಮೀಪಿಸುತ್ತಿರುವ ಚುನಾವಣೆ; ಇಂದು ಮಂತ್ರಿಮಂಡಲದ ಸಭೆ ಕರೆದ ಪ್ರಧಾನಿ ಮೋದಿ

ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್​, ಸಮೀಪಿಸುತ್ತಿರುವ ಚುನಾವಣೆ; ಇಂದು ಮಂತ್ರಿಮಂಡಲದ ಸಭೆ ಕರೆದ ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಭಾರತದಲ್ಲಿ ಸದ್ಯ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 600ರ ಗಡಿ ದಾಟಿದೆ. ಈ ತಳಿ ಡೆಲ್ಟಾಕ್ಕಿಂತಲೂ ಮೂರು ಪಟ್ಟು ವೇಗವಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಅದರಂತೆ ದೇಶದಲ್ಲಿ ಕೂಡ ಸೋಂಕು ವೇಗವಾಗಿ ಹರಡುತ್ತಿದೆ.

TV9kannada Web Team

| Edited By: Lakshmi Hegde

Dec 29, 2021 | 12:06 PM

ದೇಶದಲ್ಲಿ ಒಮಿಕ್ರಾನ್​ ಆತಂಕ (Omicron) ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಸಂಜೆ 4ಗಂಟೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಕೇಂದ್ರ ಮಂತ್ರಿ ಮಂಡಲದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಎಲ್ಲ ಕೇಂದ್ರ ಸಚಿವರೂ ಪಾಲ್ಗೊಳ್ಳುತ್ತಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಹಾಗೇ, ಒಮಿಕ್ರಾನ್​, ಕೊರೊನಾ ಸೋಂಕಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುವ ಜತೆಗೆ, ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್​ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಕಳೆದ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಿ, ಕೊರೊನಾ ಸಾಂಕ್ರಾಮಿಕ, ರಾಜ್ಯದಲ್ಲಿ ಕೊವಿಡ್​ 19 ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದರು.  

ಭಾರತದಲ್ಲಿ ಸದ್ಯ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 600ರ ಗಡಿ ದಾಟಿದೆ. ಈ ತಳಿ ಡೆಲ್ಟಾಕ್ಕಿಂತಲೂ ಮೂರು ಪಟ್ಟು ವೇಗವಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಅದರಂತೆ ದೇಶದಲ್ಲಿ ಕೂಡ ಸೋಂಕು ವೇಗವಾಹಿ ಹರಡುತ್ತಿದೆ. ಈ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್ ಅವರು, ವಾರ್​ರೂಂಗಳನ್ನು ಮತ್ತೆ ಸಕ್ರಿಯಗೊಳಿಸಿ, ನೈಟ್​ ಕರ್ಫ್ಯೂದಂಥ ನಿರ್ಬಂಧಗಳನ್ನು ಹೇರಿ ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಸೂಚಿಸಿದ್ದಾರೆ.

ಬುಧವಾರದ ಹೊತ್ತಿಗೆ ಭಾರತದಲ್ಲಿ 781 ಒಮಿಕ್ರಾನ್​ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ದೆಹಲಿಯಲ್ಲಿ 238, ಮಹಾರಾಷ್ಟ್ರದಲ್ಲಿ 167, ಗುಜರಾತ್​ 73, ಕೇರಳದಲ್ಲಿ 65, ತೆಲಂಗಾಣ 62, ರಾಜಸ್ಥಾನದಲ್ಲಿ 46, ಕರ್ನಾಟಕದ 34, ತಮಿಳುನಾಡು 36 ಮತ್ತು ಹರ್ಯಾಣದಲ್ಲಿ 12 ಕೇಸ್​ಗಳಿವೆ.  ಈ ಮಧ್ಯೆ ದೇಶದಲ್ಲಿ ಜನವರಿ 10ರಿಂದ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಹಾಗೇ, ಜನವರಿ 3ರಿಂದ 15-18ವರ್ಷದವರಿಗೆ ಕೊವ್ಯಾಕ್ಸಿನ್​ ಲಸಿಕೆ ನೀಡಿಕೆಯೂ ಪ್ರಾರಂಭಗೊಳ್ಳಲಿದೆ. ಅದರಲ್ಲೂ ದೆಹಲಿಯಲ್ಲೀಗ ಒಮಿಕ್ರಾನ್​ ವಿಪರೀತವಾಗಿದ್ದು, ಅಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ: Bihar: ಬೆಂಕಿಯಿಂದ ಹೊತ್ತಿ ಉರಿದ ಮನೆ; 5 ಮಕ್ಕಳು ಸಜೀವ ದಹನ, ಪ್ರತಿ ವಸ್ತುವೂ ಸುಟ್ಟು ಭಸ್ಮ

Follow us on

Related Stories

Most Read Stories

Click on your DTH Provider to Add TV9 Kannada