National Youth Festival 2022: ಜ. 12ಕ್ಕೆ ರಾಷ್ಟ್ರೀಯ ಯುವಜನೋತ್ಸವ; ಯುವಕರಿಂದ ಸಲಹೆ, ಐಡಿಯಾಗಳನ್ನು ಆಹ್ವಾನಿಸಿದ ಮೋದಿ

National Youth Day 2022: ಭಾರತದ ಪ್ರತಿಭಾವಂತ ಯುವಕರ ಸಲಹೆ, ಐಡಿಯಾಗಳ ಬಗ್ಗೆ ತಿಳಿಯಲು ನನಗೆ ಯಾವಾಗಲೂ ಸಂತೋಷವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

National Youth Festival 2022: ಜ. 12ಕ್ಕೆ ರಾಷ್ಟ್ರೀಯ ಯುವಜನೋತ್ಸವ; ಯುವಕರಿಂದ ಸಲಹೆ, ಐಡಿಯಾಗಳನ್ನು ಆಹ್ವಾನಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ
Edited By:

Updated on: Jan 10, 2022 | 2:13 PM

ನವದೆಹಲಿ: ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಪ್ರಯುಕ್ತ ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ 25ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುವಜನರನ್ನು ಮನವಿ ಮಾಡಿರುವ ಪ್ರಧಾನಮಂತ್ರಿ ಮೋದಿ ಯುವಜನರು ತಮ್ಮ ಸಲಹೆ, ಐಡಿಯಾಗಳನ್ನು ಹಂಚಿಕೊಳ್ಳಬಹುದು ಎಂದಿದ್ದಾರೆ. ಜನವರಿ 12ರಂದು ನಾನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 25ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ. ಈ ಕಾರ್ಯಕ್ರಮಕ್ಕೆ ಸೇರಲು ನನ್ನ ಯುವ ಸ್ನೇಹಿತರನ್ನು ಕೇಳುವುದರ ಜೊತೆಗೆ, ಅವರ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಭಾರತದ ಪ್ರತಿಭಾವಂತ ಯುವಕರ ಸಲಹೆ, ಐಡಿಯಾಗಳ ಬಗ್ಗೆ ತಿಳಿಯಲು ನನಗೆ ಯಾವಾಗಲೂ ಸಂತೋಷವಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಐದು ದಿನಗಳ 25ನೇ ಯುವಜನೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಲಿದ್ದಾರೆ. ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಐದು ದಿನಗಳ ಉತ್ಸವ ನಡೆಯಲಿದೆ.

ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ದೇಶದ ಯುವಜನರು ಕೇಳಲು ಬಯಸುವ ಉತ್ತಮ ವಿಚಾರಗಳನ್ನು ಈ ಸಂದರ್ಭದಲ್ಲಿ ಮಾತನಾಡಲು ಪ್ರಧಾನಮಂತ್ರಿಯವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಯಾವ ವಿಚಾರವಾಗಿ ಮಾತನಾಡಬೇಕೆಂಬುದರ ಬಗ್ಗೆ ಯುವಪೀಳಿಗೆ ಟ್ವಿಟ್ಟರ್​ನಲ್ಲಿ ಸಲಹೆಗಳನ್ನು ಕೂಡ ನೀಡಬಹುದು. ಯುವಜನೋತ್ಸವದ ದಿನದಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅವುಗಳನ್ನು ಸೇರಿಸುತ್ತಾರೆ. ಆಸಕ್ತ ಯುವಕರು ತಮ್ಮ ವಿಚಾರಗಳನ್ನು ಪ್ರಧಾನಮಂತ್ರಿಯವರೊಂದಿಗೆ ಇಲ್ಲಿ ಹಂಚಿಕೊಳ್ಳಬಹುದು.

ಇದನ್ನೂ ಓದಿ: Makar Sankranti 2022: ಮಕರ ಸಂಕ್ರಾಂತಿಯಂದು 75 ಲಕ್ಷ ಜನರಿಂದ ಸೂರ್ಯ ನಮಸ್ಕಾರ

ಕಾಶಿ ವಿಶ್ವನಾಥ ಧಾಮ ನವೀಕರಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪಾದರಕ್ಷೆ ಕಳಿಸಿದ ಪ್ರಧಾನಿ ಮೋದಿ; ಇದರ ಹಿಂದಿದೆ ಸೂಕ್ಷ್ಮ ಕಾರಣ

Published On - 2:08 pm, Mon, 10 January 22