ದೆಹಲಿಯಲ್ಲಿ 12,200 ಕೋಟಿ ರೂ.ಗಳ ಯೋಜನೆಗಳಿಗೆ ನಾಳೆ ಪ್ರಧಾನಿ ಮೋದಿ ಶಂಕುಸ್ಥಾಪನೆ

|

Updated on: Jan 04, 2025 | 6:02 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಧ್ಯಾಹ್ನ 12:15 ಗಂಟೆಗೆ ದೆಹಲಿಯಲ್ಲಿ 12,200 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಮೋ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ ನಂತರ, ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ರೋಹಿಣಿಯಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೆಹಲಿಯಲ್ಲಿ 12,200 ಕೋಟಿ ರೂ.ಗಳ ಯೋಜನೆಗಳಿಗೆ ನಾಳೆ ಪ್ರಧಾನಿ ಮೋದಿ ಶಂಕುಸ್ಥಾಪನೆ
Prime Minister Narendra Modi
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ (ಜನವರಿ 5) ದೆಹಲಿಯಲ್ಲಿ 12,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದು, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ನಮೋ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಮೂಲಕ ನಾಳೆಯ ದಿನವನ್ನು ಪ್ರಾರಂಭಿಸುತ್ತಾರೆ. ಇದು ಸಾಹಿಬಾಬಾದ್ ಆರ್‌ಆರ್‌ಟಿಎಸ್ ನಿಲ್ದಾಣದಿಂದ ಬೆಳಿಗ್ಗೆ 11 ಗಂಟೆಗೆ ಹೊರಟು ನ್ಯೂ ಅಶೋಕ್ ನಗರ ಆರ್‌ಆರ್‌ಟಿಎಸ್ ನಿಲ್ದಾಣಕ್ಕೆ ಪ್ರಯಾಣಿಸುತ್ತದೆ.

ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವಿನ ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್‌ನ 13 ಕಿ.ಮೀ ವ್ಯಾಪ್ತಿಯ ಉದ್ಘಾಟನೆ ನಾಳೆಯ ಪ್ರಧಾನಿ ಮೋದಿಯವರ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿರುತ್ತದೆ. ಇದರ ಮೌಲ್ಯ ಸುಮಾರು 4,600 ಕೋಟಿ ರೂ. ಆಗಿದೆ. ಇದರ ಹೊಸ ಸಂಪರ್ಕವು ದೆಹಲಿಗೆ ತನ್ನ ಮೊದಲ ನಮೋ ಭಾರತ್ ಲಿಂಕ್ ಅನ್ನು ಒದಗಿಸುತ್ತದೆ. ಇದು ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣವನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: ನಾನು ಕೂಡ ಶೀಶ್​ ಮಹಲ್ ನಿರ್ಮಿಸಬಹುದಿತ್ತು; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ದೆಹಲಿ ಮೆಟ್ರೋ 4ನೇ ಹಂತದ ಉದ್ಘಾಟನೆ:

ಜನಕ್‌ಪುರಿ ಮತ್ತು ಕೃಷ್ಣ ಪಾರ್ಕ್ ನಡುವಿನ ದೆಹಲಿ ಮೆಟ್ರೋ 4ನೇ ಹಂತದ 2.8 ಕಿ.ಮೀ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸುಮಾರು 1,200 ಕೋಟಿ ರೂ. ಮೌಲ್ಯದ ಈ ಯೋಜನೆ 4ನೇ ಹಂತದ ಯೋಜನೆಯ ಮೊದಲ ಕಾರ್ಯಾಚರಣೆಯ ವಿಸ್ತರಣೆಯಾಗಿದೆ. ಇದು ಪಶ್ಚಿಮ ದೆಹಲಿಯ ಕೃಷ್ಣಾ ಪಾರ್ಕ್, ವಿಕಾಸಪುರಿಯ ಕೆಲವು ಭಾಗಗಳು ಮತ್ತು ಜನಕಪುರಿ ಪ್ರದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ.

ದೆಹಲಿ ಮೆಟ್ರೋ 4ನೇ ಹಂತದ 26.5 ಕಿಲೋಮೀಟರ್ ರಿಥಾಲಾ-ಕುಂಡ್ಲಿ ಮಾರ್ಗಕ್ಕೆ ಸಹ ನಾಳೆ ಶಂಕುಸ್ಥಾಪನೆ ಮಾಡಲಾಗುವುದು. ಇದರ ಅಂದಾಜು ವೆಚ್ಚ 6,230 ಕೋಟಿ ರೂ. ಹೊಸ ಕಾರಿಡಾರ್ ದೆಹಲಿಯ ರಿಥಾಲಾವನ್ನು ಹರಿಯಾಣದ ನಾಥುಪುರ್ (ಕುಂಡ್ಲಿ) ಗೆ ಸಂಪರ್ಕಿಸುತ್ತದೆ. ಇದು ರೋಹಿಣಿ, ಬವಾನಾ, ನರೇಲಾ ಮತ್ತು ಕುಂಡ್ಲಿಯಂತಹ ಪ್ರದೇಶಗಳನ್ನು ಒಳಗೊಂಡಂತೆ ದೆಹಲಿ ಮತ್ತು ಹರಿಯಾಣದ ವಾಯುವ್ಯ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಜನರಿಗಾಗಿ ಕೆಲಸ ಮಾಡುವವರು ಇತರರನ್ನು ನಿಂದಿಸುವುದಿಲ್ಲ; ದುರಂತ ಸರ್ಕಾರ ಎಂಬ ಮೋದಿ ಹೇಳಿಕೆಗೆ ಕೇಜ್ರಿವಾಲ್ ತಿರುಗೇಟು

CARI ಕಟ್ಟಡಕ್ಕೆ ಶಂಕುಸ್ಥಾಪನೆ:

ಇದರ ಜೊತೆಗೆ, ನವದೆಹಲಿಯ ರೋಹಿಣಿಯಲ್ಲಿ ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿಎಆರ್‌ಐ)ಗಾಗಿ ಸುಮಾರು 185 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಕಟ್ಟಡಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೊಸ ಕ್ಯಾಂಪಸ್ ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ಒಪಿಡಿ ಬ್ಲಾಕ್, ಐಪಿಡಿ ಬ್ಲಾಕ್ ಮತ್ತು ಮೀಸಲಾದ ಟ್ರೀಟ್‌ಮೆಂಟ್ ಬ್ಲಾಕ್ ಸೇರಿದಂತೆ ಸುಧಾರಿತ ಆರೋಗ್ಯ ಮತ್ತು ಸಂಶೋಧನಾ ಸೌಲಭ್ಯಗಳನ್ನು ಇದು ನೀಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ