PM Modi in Chennai: ಇಂದು ಚೆನ್ನೈ ವಿಮಾನ ನಿಲ್ದಾಣದ ನೂತನ ಟರ್ಮಿನಲ್​​ನ್ನು​ ಉದ್ಘಾಟಿಸಲಿರುವ ಪ್ರಧಾನಿ ಮೋದಿ

|

Updated on: Apr 08, 2023 | 9:53 AM

ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏಪ್ರಿಲ್​ 8) ತೆಲಂಗಾಣ ಮತ್ತು ತಮೀಳನಾಡು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನ ಚೈನ್ನೈನಲ್ಲಿ, ಚೆನ್ನೈ-ಕೊಯಮತ್ತೂರು ದಕ್ಷಿಣ ಭಾರತದ ಎರಡನೇ ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ.

PM Modi in Chennai: ಇಂದು ಚೆನ್ನೈ ವಿಮಾನ ನಿಲ್ದಾಣದ ನೂತನ ಟರ್ಮಿನಲ್​​ನ್ನು​ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಚೆನ್ನೈ​: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು (ಏಪ್ರಿಲ್​ 8) ತೆಲಂಗಾಣ (Telangana) ಮತ್ತು ತಮೀಳನಾಡು (Tamilnadu) ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನ ಚೈನ್ನೈನಲ್ಲಿ, ಚೆನ್ನೈ-ಕೊಯಮತ್ತೂರು ದಕ್ಷಿಣ ಭಾರತದ ಎರಡನೇ ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಹೊಸ ರೈಲು ಭಾರತದ ಸುಧಾರಿತ ರೈಲುಗಳ 12 ಮತ್ತು 13ನೇ ಯೂನಿಟ್​ ಆಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ 1,260 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್​ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಸುಮಾರು 2,20,972 ಚ.ಮೀ ವಿಸ್ತೀರ್ಣ ಹೊಂದಿರುವ ಈ ಟರ್ಮಿನಲ್‌ ಚೆನ್ನೈ ವಿಮಾನನಿಲ್ದಾಣದ ಪ್ರಯಾಣಿಕ ದಟ್ಟಣೆ ಮತ್ತು ಏರ್‌ ಟ್ರಾಫಿಕ್‌ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಈಗ ನಿರ್ಮಾಣವಾದ ಟಿ-2 ಮೂಲಕ ಚೆನ್ನೈ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ವರ್ಷಕ್ಕೆ 23 ಮಿಲಿಯನ್‌ನಿಂದ 30 ಮಿಲಿಯನ್‌ಗೆ ಹೆಚ್ಚಿಸಬಹುದಾಗಿದೆ.

ಇದನ್ನೂ ಓದಿ: ಏ.9 ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮದ ವಿವರ, ಹೆದ್ದಾರಿ ಬಂದ್; ಇಲ್ಲಿದೆ ವಿವರ ​

ಟರ್ಮಿನಲ್ 100 ಅತ್ಯಾಧುನಿಕ ಚೆಕ್-ಇನ್ ಕೌಂಟರ್‌ಗಳನ್ನು ಹೊಂದಿದೆ. ಈ ಕೌಂಟರ್‌ಗಳನ್ನು ಘನ ಅಕ್ರಿಲಿಕ್‌ನಿಂದ ತಯಾರಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ವಾರ್ಷಿಕ 2.3 ಕೋಟಿಯಿಂದ 3.5 ಕೋಟಿಗೆ ಹೆಚ್ಚಿಸಲಿದೆ. ಹೊಸ ವಿಮಾನ ನಿಲ್ದಾಣದ ನೆಲ ಮಹಡಿಯಲ್ಲಿ ರಂಗೋಲಿಯಂಥ ವಿನ್ಯಾಸಗಳನ್ನು ನೆಲದ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಬಿಡಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ