PM Modi Hyderabad Visit: ಪ್ರಧಾನಿ ಮೋದಿ ಇಂದು ತೆಲಂಗಾಣ ಭೇಟಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ
ಪ್ರಧಾನಿ ಮೋದಿಯವರು ಸಿಕಂದರಾಬಾದ್ ಮತ್ತು ತಿರುಪತಿ ಮಧ್ಯೆ ಸಂಚರಿಸುವ ವಂದೇ ಭಾರತ ಎಕ್ಸಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು (ಏಪ್ರಿಲ್ 8) ತೆಲಂಗಾಣ (Telangana) ಮತ್ತು ತಮೀಳನಾಡು (Tamilnadu) ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ತೆಲಂಗಾಣ ಭೇಟಿ ವೇಳೆ ಪ್ರಧಾನಿ ಮೋದಿಯವರು 11,300 ಕೋಟಿ ರೂ. ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿಯವರು ಸಿಕಂದರಾಬಾದ್ ಮತ್ತು ತಿರುಪತಿ ಮಧ್ಯೆ ಸಂಚರಿಸುವ ವಂದೇ ಭಾರತ ಎಕ್ಸಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಿಕಂದರಾಬಾದ್ನಲ್ಲಿ 720 ಕೋಟಿ ವೆಚ್ಚದ ರೈಲು ನಿಲ್ದಾಣದ ಪುನರಾಭಿವೃದ್ದಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಿಬಿನಗರದಲ್ಲಿ ಏಮ್ಸ್ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡುತ್ತಾರೆ. ಏಮ್ಸ್ ಅನ್ನು 1,350 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಳಿಕ 1,410 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿಕಂದರಾಬಾದ್-ಮಹಬೂಬ್ನಗರ ನಡುವಿನ 84ಕಿ.ಮೀ ವಿದ್ಯದೀಕೃತ ಜೋಡಿ ಮಾರ್ಗ ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ 7850 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈ ರಸ್ತೆ ಯೋಜನೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡರ ರಸ್ತೆ ಸಂಪರ್ಕವನ್ನು ವೃದ್ಧಿಸುತ್ತದೆ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಇದನ್ನೂ ಓದಿ: ಅದಾನಿ-ಹಿಂಡೆನ್ಬರ್ಗ್ ವಿಚಾರದಲ್ಲಿ ಶರದ್ ಪವಾರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದ್ದು, ನಗರಗಳ ನಡುವೆ 660 ಕಿಮೀ ಪ್ರಯಾಣವನ್ನು ಒಳಗೊಂಡಿದೆ. ಆದರೆ, ಉದ್ಘಾಟನಾ ರೈಲಿನ ಮಾರ್ಗವು ವಿಭಿನ್ನವಾಗಿರುತ್ತದೆ. ಈ ಮಾರ್ಗದ ಮೊದಲ ರೈಲು ನಲ್ಗೊಂಡ, ಮಿರ್ಯಾಲಗುಡ, ಪಿದುಗುರಳ್ಳ, ಗುಂಟೂರು, ತೆನಾಲಿ, ಬಾಪಟ್ಲ, ಚಿರಾಲ, ಓಂಗೋಳೆ, ನೆಲ್ಲೂರು ಮತ್ತು ಗುಡೂರು ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Sat, 8 April 23