AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ-ಹಿಂಡೆನ್​​ಬರ್ಗ್ ವಿಚಾರದಲ್ಲಿ ಶರದ್ ಪವಾರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ಎನ್‌ಸಿಪಿ ತನ್ನ ಅಭಿಪ್ರಾಯವನ್ನು ಹೊಂದಿರಬಹುದು. ಆದರೆ 19 ಸಮಾನ ಮನಸ್ಕ ಪಕ್ಷಗಳಿಗೆ ಪ್ರಧಾನಮಂತ್ರಿ-ಸಂಬಂಧಿತ ಅದಾನಿ ಗ್ರೂಪ್ ವಿಷಯವು ನಿಜ ಮತ್ತು ಅತ್ಯಂತ ಗಂಭೀರವಾಗಿದೆ ಎಂದು ಮನವರಿಕೆಯಾಗಿದೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾನಿ-ಹಿಂಡೆನ್​​ಬರ್ಗ್ ವಿಚಾರದಲ್ಲಿ ಶರದ್ ಪವಾರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್
ಜೈರಾಮ್ ರಮೇಶ್
ರಶ್ಮಿ ಕಲ್ಲಕಟ್ಟ
|

Updated on: Apr 07, 2023 | 10:08 PM

Share

ಅದಾನಿ ಗ್ರೂಪ್‌ (Adani Group) ಮೇಲಿನ ಯುಎಸ್ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್‌ನ (Hindenburg Research) ವರದಿಯು “ಉದ್ದೇಶಿತ” ದಾಳಿ ಎಂದು ತೋರುತ್ತಿದೆ ಎಂಬ ಶರದ್ ಪವಾರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಪಾಡಿದೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥರಾದ ಶರದ್ ಪವಾರ್ (Sharad Pawar)ಅದಾನಿ ಗ್ರೂಪ್ ಅನ್ನು ಬಲವಾಗಿ ಬೆಂಬಲಿಸಿದ್ದು ಹಿಂಡೆನ್‌ಬರ್ಗ್‌ನ ವರದಿಯ ಉದ್ದೇಶಿತ ದಾಳಿ ಎಂದಿದ್ದಾರೆ.  ಆದಾಗ್ಯೂ, ಪವಾರ್ ಅವರ ಹೇಳಿಕೆಯಿಂದ ಅಂತರ ಕಾಪಾಡಿದ್ದು, ಅದಾನಿ ಗ್ರೂಪ್ ವಿಷಯವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಂಬಂಧ ಹೊಂದಿದ್ದು ಇದು ನೈಜ ಮತ್ತು ಅತ್ಯಂತ ಗಂಭೀರವಾಗಿದೆ ಎಂದಿದೆ. ಸಂಸತ್ತಿನ ಅಧಿವೇಶನಗಳನ್ನು ಸ್ಥಗಿತಗೊಳಿಸಿದ ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಒತ್ತಾಯಿಸುತ್ತಿವೆ.

ಎನ್‌ಸಿಪಿ ತನ್ನ ಅಭಿಪ್ರಾಯವನ್ನು ಹೊಂದಿರಬಹುದು ಆದರೆ 19 ಸಮಾನ ಮನಸ್ಕ ಪಕ್ಷಗಳಿಗೆ ಪ್ರಧಾನಮಂತ್ರಿ-ಸಂಬಂಧಿತ ಅದಾನಿ ಗ್ರೂಪ್ ವಿಷಯವು ನಿಜ ಮತ್ತು ಅತ್ಯಂತ ಗಂಭೀರವಾಗಿದೆ ಎಂದು ಮನವರಿಕೆಯಾಗಿದೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಎನ್‌ಸಿಪಿ ಸೇರಿದಂತೆ ಎಲ್ಲಾ 20 ಸಮಾನ ಮನಸ್ಕ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿಯ ದಾಳಿಯಿಂದ ಸಂವಿಧಾನ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಬಿಜೆಪಿಯ ವಿಭಜಕ ಮತ್ತು ವಿನಾಶಕಾರಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಜೆಂಡಾವನ್ನು ಸೋಲಿಸುವಲ್ಲಿ ಒಟ್ಟಾಗಿರುತ್ತೇವೆ ಎಂದು ರಮೇಶ್ ಹೇಳಿದರು.

ಕೆಲವು ದಿನಗಳ ಕಾಲ ಸಂಸತ್ತಿನಲ್ಲಿ ಗದ್ದಲವಿತ್ತು ಆದರೆ ಈ ಬಾರಿ ಈ ವಿಷಯಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಟ್ಟುಕೊಂಡಿರುವ ವಿಚಾರಗಳು, ಯಾರು ಇಟ್ಟುಕೊಂಡಿದ್ದಾರೆ, ಹೇಳಿಕೆ ನೀಡಿದ ಇವರನ್ನು ನಾವು ಕೇಳಿರಲಿಲ್ಲ, ಹಿನ್ನೆಲೆ ಏನುಎಂದು. ಅವರು ದೇಶದಾದ್ಯಂತ ಗದ್ದಲವನ್ನು ಉಂಟುಮಾಡುವ ಸಮಸ್ಯೆಗಳನ್ನು ಎತ್ತಿದಾಗ, ದೇಶದ ಆರ್ಥಿಕತೆಯಿಂದ ವೆಚ್ಚವನ್ನು ಭರಿಸುತ್ತದೆ, ನಾವು ಈ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತೋರುತ್ತದೆ ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪವಾರ್ ಹೇಳಿದ್ದಾರೆ.

ದೇಶದ ಪ್ರತ್ಯೇಕ ಕೈಗಾರಿಕಾ ಗುಂಪನ್ನು ಗುರಿಯಾಗಿಸಲಾಗಿದೆ ಎಂದು ತೋರುತ್ತಿದೆ. ಅವರು ಏನಾದರೂ ತಪ್ಪು ಮಾಡಿದ್ದರೆ, ತನಿಖೆಯಾಗಬೇಕು.

ಹಿಂಡೆನ್‌ಬರ್ಗ್ ವರದಿಯ ಕುರಿತು ಜೆಪಿಸಿ ತನಿಖೆಗೆ ಕಾಂಗ್ರೆಸ್‌ನ ಬೇಡಿಕೆಯನ್ನು ಉಲ್ಲೇಖಿಸಿದ ಪವಾರ್, ತಾವು ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವುದಾಗಿ ಹೇಳಿದ್ದಾರೆ.  ಬೇಡಿಕೆ ಕೇಳಿಬಂದ ನಂತರ ಸುಪ್ರೀಕೋರ್ಟ್ ತನಿಖೆಗೆ ಆದೇಶಿಸಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು, ತಜ್ಞರು, ಆಡಳಿತಾಧಿಕಾರಿ ಮತ್ತು ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯನ್ನು ನೇಮಿಸಿತು. ಅವರಿಗೆ ಮಾರ್ಗಸೂಚಿಗಳು ಮತ್ತು ಕಾಲಮಿತಿಯನ್ನು ನೀಡಲಾಯಿತು ಮತ್ತು ವಿಚಾರಣೆ ನಡೆಸಲು ತಿಳಿಸಲಾಯಿತು.

ಮತ್ತೊಂದೆಡೆ ಪ್ರತಿಪಕ್ಷಗಳು ಸಂಸದೀಯ ಸಮಿತಿಯನ್ನು ನೇಮಿಸಬೇಕೆಂದು ಬಯಸಿದವು. ಸಂಸದೀಯ ಸಮಿತಿಯನ್ನು ನೇಮಿಸಿದರೆ, ಮೇಲ್ವಿಚಾರಣೆ ಆಡಳಿತ ಪಕ್ಷದ ಬಳಿ ಇರುತ್ತದೆ. ಈ ಬೇಡಿಕೆಯು ಆಡಳಿತ ಪಕ್ಷದ ವಿರುದ್ಧವಾಗಿತ್ತು. ತನಿಖೆಗಾಗಿ ನೇಮಿಸಲಾದ ಸಮಿತಿಯು ಆಡಳಿತ ಪಕ್ಷದತ್ತ ಒಲವು ಹೊಂದಿದ್ದರೆ, ಸತ್ಯವು ಹೇಗೆ ಹೊರಬರುತ್ತದೆ ಎಂಬುದು ಚಿಂತಿಸಬೇಕಾದ ವಿಷಯ. ಯಾರಿಂದಲೂ ಪ್ರಭಾವ ಬೀರದ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲು ಹೆಚ್ಚಿನ ಅವಕಾಶವಿತ್ತು. ಹಾಗಾಗಿ, ಸುಪ್ರೀಂ ಕೋರ್ಟ್ ತನಿಖೆಯನ್ನು ಘೋಷಿಸಿದ ನಂತರ, ಜೆಪಿಸಿ ತನಿಖೆಗೆ ಯಾವುದೇ ಮಹತ್ವವಿಲ್ಲ. ಅದರ ಅಗತ್ಯವಿರಲಿಲ್ಲ ಎಂದಿದ್ದಾರೆ ಪವಾರ್.

ಇದನ್ನೂ ಓದಿ: Sudha murthy: ಅತ್ತೆಗೆ ಪದ್ಮಭೂಷಣ ಪ್ರಶಸ್ತಿ, ಸಂತಸ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್

ಇಂದು ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಅಂಬಾನಿ ಕೊಡುಗೆ ನೀಡಿದ್ದಾರೆ, ದೇಶಕ್ಕೆ ಇದರ ಅವಶ್ಯಕತೆ ಇಲ್ಲವೇ? ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ಕೊಡುಗೆ ನೀಡಿದ್ದಾರೆ. ದೇಶಕ್ಕೆ ವಿದ್ಯುತ್ ಬೇಡವೇ? ಇಂತಹ ಜವಾಬ್ದಾರಿಯಿಂದ ದೇಶಕ್ಕಾಗಿ ದುಡಿಯುವ ಜನ ಇವರು. ಅವರು ತಪ್ಪು ಮಾಡಿದ್ದರೆ, ನೀವು ದಾಳಿ ಮಾಡುತ್ತೀರಿ, ಆದರೆ ಅವರು ಈ ಮೂಲಸೌಕರ್ಯವನ್ನು ಸೃಷ್ಟಿಸಿದ್ದಾರೆ, ಅವರನ್ನು ಟೀಕಿಸುವುದು ನನಗೆ ಸರಿಯನಿಸಲ್ಲ ಎಂದಿದ್ದಾರೆ ಪವಾರ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ