ಹಿಂಡನ್​​ಬರ್ಗ್ ವರದಿ ವಿಚಾರ; ಅದಾನಿಯನ್ನು ಗುರಿಯಾಗಿಸುವಂತೆ ಕಾಣುತ್ತಿದೆ: ಶರದ್ ಪವಾರ್

ಇದು ಈ ದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ನಾವು ರಾಜಕೀಯಕ್ಕೆ ಬಂದಾಗ ಸರ್ಕಾರದ ವಿರುದ್ಧ ಮಾತನಾಡಬೇಕಾದರೆ ಟಾಟಾ-ಬಿರ್ಲಾ ವಿರುದ್ಧ ಮಾತನಾಡುತ್ತಿದ್ದೆವು. ಟಾರ್ಗೆಟ್ ಯಾರು? ಟಾಟಾ-ಬಿರ್ಲಾ. ನಾವು ಟಾಟಾ ಕೊಡುಗೆಯನ್ನು ಅರ್ಥಮಾಡಿಕೊಂಡಾಗ, ನಾವು ಟಾಟಾ ಬಿರ್ಲಾ ಎಂದು ಯಾಕೆ ಹೇಳುತ್ತಿದ್ದೆವು ಎಂದು ಅಚ್ಚರಿಯಾಗುತ್ತದೆ

ಹಿಂಡನ್​​ಬರ್ಗ್ ವರದಿ ವಿಚಾರ; ಅದಾನಿಯನ್ನು ಗುರಿಯಾಗಿಸುವಂತೆ ಕಾಣುತ್ತಿದೆ: ಶರದ್ ಪವಾರ್
ಶರದ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 07, 2023 | 7:34 PM

ದೆಹಲಿ: ವಿಪಕ್ಷಗಳು ಅದಾನಿ (Adani) ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಒತ್ತಾಯಿಸಿದ್ದು, ಈ ಗದ್ದಲಗಳು ಸಂಸತ್ತಿನ ಅಧಿವೇಶನವನ್ನು ನುಂಗಿಹಾಕಿದೆ. ಇತ್ತ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಮತ್ತು ದೇಶದ ಅತಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಶರದ್ ಪವಾರ್ (Sharad Pawar) ಕೂಡ ಅದಾನಿ ಗ್ರೂಪ್‌ಗೆ ಬಲವಾಗಿ ಬೆಂಬಲ ನೀಡಿದ್ದು, ಯುಎಸ್ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ವರದಿಯ ಸುತ್ತಲಿನ ನಿರೂಪಣೆಯನ್ನು ಟೀಕಿಸಿದ್ದಾರೆ.ಇಂತಹ ಹೇಳಿಕೆಗಳನ್ನು ಇತರ ವ್ಯಕ್ತಿಗಳು ಈ ಹಿಂದೆ ನೀಡಿದ್ದರು. ಕೆಲವು ದಿನಗಳ ಕಾಲ ಸಂಸತ್ತಿನಲ್ಲಿ ಗದ್ದಲವಿತ್ತು ಆದರೆ ಈ ಬಾರಿ ಈ ವಿಷಯಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಟ್ಟುಕೊಂಡಿರುವ ವಿಚಾರಗಳು, ಯಾರು ಇಟ್ಟುಕೊಂಡಿದ್ದಾರೆ, ಹೇಳಿಕೆ ನೀಡಿದ ಇವರನ್ನು ನಾವು ಕೇಳಿರಲಿಲ್ಲ, ಹಿನ್ನೆಲೆ ಏನುಎಂದು. ಅವರು ದೇಶದಾದ್ಯಂತ ಗದ್ದಲವನ್ನು ಉಂಟುಮಾಡುವ ಸಮಸ್ಯೆಗಳನ್ನು ಎತ್ತಿದಾಗ, ದೇಶದ ಆರ್ಥಿಕತೆಯಿಂದ ವೆಚ್ಚವನ್ನು ಭರಿಸುತ್ತದೆ, ನಾವು ಈ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತೋರುತ್ತದೆ ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪವಾರ್ ಹೇಳಿದ್ದಾರೆ.

ದೇಶದ ಪ್ರತ್ಯೇಕ ಕೈಗಾರಿಕಾ ಗುಂಪನ್ನು ಗುರಿಯಾಗಿಸಲಾಗಿದೆ ಎಂದು ತೋರುತ್ತಿದೆ. ಅವರು ಏನಾದರೂ ತಪ್ಪು ಮಾಡಿದ್ದರೆ, ತನಿಖೆಯಾಗಬೇಕು.

ಹಿಂಡೆನ್‌ಬರ್ಗ್ ವರದಿಯ ಕುರಿತು ಜೆಪಿಸಿ ತನಿಖೆಗೆ ಕಾಂಗ್ರೆಸ್‌ನ ಬೇಡಿಕೆಯನ್ನು ಉಲ್ಲೇಖಿಸಿದ ಪವಾರ್, ತಾವು ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವುದಾಗಿ ಹೇಳಿದ್ದಾರೆ.  ಬೇಡಿಕೆ ಕೇಳಿಬಂದ ನಂತರ ಸುಪ್ರೀಕೋರ್ಟ್ ತನಿಖೆಗೆ ಆದೇಶಿಸಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು, ತಜ್ಞರು, ಆಡಳಿತಾಧಿಕಾರಿ ಮತ್ತು ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ಸಮಿತಿಯನ್ನು ನೇಮಿಸಿತು. ಅವರಿಗೆ ಮಾರ್ಗಸೂಚಿಗಳು ಮತ್ತು ಕಾಲಮಿತಿಯನ್ನು ನೀಡಲಾಯಿತು ಮತ್ತು ವಿಚಾರಣೆ ನಡೆಸಲು ತಿಳಿಸಲಾಯಿತು.

ಮತ್ತೊಂದೆಡೆ ಪ್ರತಿಪಕ್ಷಗಳು ಸಂಸದೀಯ ಸಮಿತಿಯನ್ನು ನೇಮಿಸಬೇಕೆಂದು ಬಯಸಿದವು. ಸಂಸದೀಯ ಸಮಿತಿಯನ್ನು ನೇಮಿಸಿದರೆ, ಮೇಲ್ವಿಚಾರಣೆ ಆಡಳಿತ ಪಕ್ಷದ ಬಳಿ ಇರುತ್ತದೆ. ಈ ಬೇಡಿಕೆಯು ಆಡಳಿತ ಪಕ್ಷದ ವಿರುದ್ಧವಾಗಿತ್ತು. ತನಿಖೆಗಾಗಿ ನೇಮಿಸಲಾದ ಸಮಿತಿಯು ಆಡಳಿತ ಪಕ್ಷದತ್ತ ಒಲವು ಹೊಂದಿದ್ದರೆ, ಸತ್ಯವು ಹೇಗೆ ಹೊರಬರುತ್ತದೆ ಎಂಬುದು ಚಿಂತಿಸಬೇಕಾದ ವಿಷಯ. ಯಾರಿಂದಲೂ ಪ್ರಭಾವ ಬೀರದ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲು ಹೆಚ್ಚಿನ ಅವಕಾಶವಿತ್ತು. ಹಾಗಾಗಿ, ಸುಪ್ರೀಂ ಕೋರ್ಟ್ ತನಿಖೆಯನ್ನು ಘೋಷಿಸಿದ ನಂತರ, ಜೆಪಿಸಿ ತನಿಖೆಗೆ ಯಾವುದೇ ಮಹತ್ವವಿಲ್ಲ. ಅದರ ಅಗತ್ಯವಿರಲಿಲ್ಲ ಎಂದಿದ್ದಾರೆ ಪವಾರ್.

ಜೆಪಿಸಿ ತನಿಖೆಗೆ ಒತ್ತಾಯಿಸುವುದರ ಹಿಂದೆ ಕಾಂಗ್ರೆಸ್‌ನ ಉದ್ದೇಶ ಏನಿರಬಹುದು?

ಉದ್ದೇಶ ಏನೆಂದು ನಾನು ಹೇಳಲಾರೆ ಆದರೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ನೇಮಿಸಿದ ಸಮಿತಿಯು ಬಹಳ ಮುಖ್ಯ ಎಂದು ನನಗೆ ತಿಳಿದಿದೆ. ಒಮ್ಮೆ ಜೆಪಿಸಿ ಪ್ರಾರಂಭವಾದಾಗ, ಅದರ ಕಾರ್ಯವಿಧಾನಗಳು ಪ್ರತಿದಿನವೂ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಬಹುಶಃ ಯಾರಾದರೂ ಎರಡು ನಾಲ್ಕು ತಿಂಗಳವರೆಗೆ ಸಮಸ್ಯೆಯನ್ನು ಉಲ್ಬಣಗೊಳಿಸಬೇಕೆಂದು ಬಯಸಿರಬಹುದು, ಆದರೆ ಸತ್ಯವು ಎಂದಿಗೂ ಹೊರಬರುವುದಿಲ್ಲ.

ದೊಡ್ಡ ಉದ್ಯಮಿಗಳನ್ನು ಗುರಿಯಾಗಿಸುವ ರಾಹುಲ್ ಗಾಂಧಿಯವರ ಅದಾನಿ-ಅಂಬಾನಿ ಶೈಲಿಯನ್ನು ನಾನು ಒಪ್ಪುವುದಿಲ್ಲ. ಇದು ಅರ್ಥಹೀನವಾಗಿತ್ತು.

ಇದು ಈ ದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಹಲವು ವರ್ಷಗಳ ಹಿಂದೆ ನಾವು ರಾಜಕೀಯಕ್ಕೆ ಬಂದಾಗ ಸರ್ಕಾರದ ವಿರುದ್ಧ ಮಾತನಾಡಬೇಕಾದರೆ ಟಾಟಾ-ಬಿರ್ಲಾ ವಿರುದ್ಧ ಮಾತನಾಡುತ್ತಿದ್ದೆವು. ಟಾರ್ಗೆಟ್ ಯಾರು? ಟಾಟಾ-ಬಿರ್ಲಾ. ನಾವು ಟಾಟಾ ಕೊಡುಗೆಯನ್ನು ಅರ್ಥಮಾಡಿಕೊಂಡಾಗ, ನಾವು ಟಾಟಾ ಬಿರ್ಲಾ ಎಂದು ಯಾಕೆ ಹೇಳುತ್ತಿದ್ದೆವು ಎಂದು ಅಚ್ಚರಿಯಾಗುತ್ತದೆ.ಆದರೆ ಯಾರಾನ್ನಾದರೂ ಟಾರ್ಗೆಟ್ ಮಾಡಬೇಕಿತ್ತು ಹಾಗಾಗಿ ನಾವು ಟಾಟಾ-ಬಿರ್ಲಾರನ್ನು ಗುರಿಯಾಗಿಸಿಕೊಳ್ಳುತ್ತಿದ್ದೆವು. ಇಂದು ಟಾಟಾ-ಬಿರ್ಲಾ ಹೆಸರು ಮುಂಚೂಣಿಯಲ್ಲಿಲ್ಲ, ಬೇರೆಯೇ ಟಾಟಾ-ಬಿರ್ಲಾಗಳು ಸರ್ಕಾರದ ಮುಂದೆ ಬಂದಿವೆ.

ಇದನ್ನೂ ಓದಿ: Sudha murthy: ಅತ್ತೆಗೆ ಪದ್ಮಭೂಷಣ ಪ್ರಶಸ್ತಿ, ಸಂತಸ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್

ಹಾಗಾಗಿ ಇಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬೇಕಾದರೆ ಅಂಬಾನಿ, ಅದಾನಿ ಹೆಸರು ಹೇಳಲಾಗುತ್ತಿದೆ. ಪ್ರಶ್ನೆ ಏನೆಂದರೆ, ನೀವು ಗುರಿಯಾಗಿಸುವ ಜನರು, ಅವರು ಏನಾದರೂ ತಪ್ಪು ಮಾಡಿದ್ದರೆ, ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ, ಪ್ರಜಾಪ್ರಭುತ್ವದಲ್ಲಿ ಅವರ ವಿರುದ್ಧ 100 ಪ್ರತಿಶತದಷ್ಟು ಮಾತನಾಡಲು ನಿಮಗೆ ಹಕ್ಕಿದೆ, ಆದರೆ ಏನೂ ಅರ್ಥವಿಲ್ಲದೇ ದಾಳಿ ಮಾಡುವುದು ನನಗೆ ಅರ್ಥವಾಗುತ್ತಿಲ್ಲ.

ಇಂದು ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಅಂಬಾನಿ ಕೊಡುಗೆ ನೀಡಿದ್ದಾರೆ, ದೇಶಕ್ಕೆ ಇದರ ಅವಶ್ಯಕತೆ ಇಲ್ಲವೇ? ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ಕೊಡುಗೆ ನೀಡಿದ್ದಾರೆ. ದೇಶಕ್ಕೆ ವಿದ್ಯುತ್ ಬೇಡವೇ? ಇಂತಹ ಜವಾಬ್ದಾರಿಯಿಂದ ದೇಶಕ್ಕಾಗಿ ದುಡಿಯುವ ಜನ ಇವರು. ಅವರು ತಪ್ಪು ಮಾಡಿದ್ದರೆ, ನೀವು ದಾಳಿ ಮಾಡುತ್ತೀರಿ, ಆದರೆ ಅವರು ಈ ಮೂಲಸೌಕರ್ಯವನ್ನು ಸೃಷ್ಟಿಸಿದ್ದಾರೆ, ಅವರನ್ನು ಟೀಕಿಸುವುದು ನನಗೆ ಸರಿಯನಿಸಲ್ಲ.

ಜೆಪಿಸಿ ತನಿಖೆಗಾಗಿರುವ ಪ್ರತಿಭಟನೆ ಮೇಲೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಪವಾರ್ ವಿಭಿನ್ನ ದೃಷ್ಟಿಕೋನಗಳು, ಟೀಕೆಗಳು ಇರಬಹುದು, ಸರ್ಕಾರದ ನೀತಿಗಳ ಬಗ್ಗೆ ಬಲವಾಗಿ ಮಾತನಾಡುವ ಹಕ್ಕಿದೆ, ಆದರೆ ಚರ್ಚೆ ನಡೆಯಬೇಕು. ಯಾವುದೇ ಪ್ರಜಾಪ್ರಭುತ್ವದಲ್ಲಿ ಚರ್ಚೆ ಮತ್ತು ಸಂವಾದ ಬಹಳ ಮುಖ್ಯ, ನೀವು ಚರ್ಚೆ ಮತ್ತು ಸಂವಾದವನ್ನು ನಿರ್ಲಕ್ಷಿಸಿದರೆ ವ್ಯವಸ್ಥೆಯು ಅಪಾಯಕ್ಕೆ ಸಿಲುಕುತ್ತದೆ, ಅದು ನಾಶವಾಗುತ್ತದೆ.

ಸಾಮಾನ್ಯ ಜನರ ಸಮಸ್ಯೆಗಳನ್ನು ನಿಯಮಿತವಾಗಿ ನಿರ್ಲಕ್ಷಿಸುವುದು ಸರಿಯಲ್ಲ.ಇದು ಸಂಭವಿಸಿದಾಗ, ನಾವು ತಪ್ಪು ಮಾರ್ಗವನ್ನು ಅನುಸರಿಸುತ್ತಿದ್ದೇವೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ ಪವಾರ್. ಕಾಂಗ್ರೆಸ್ ಪಕ್ಷವನ್ನು ಮಾತ್ರ ದೂಷಿಸಲು ನಿರಾಕರಿಸಿದ ಪವಾರ್, ಇತರ ವಿರೋಧ ಪಕ್ಷಗಳು ಕೂಡಾ ಇದೇ ಬೇಡಿಕೆಯನ್ನೊಡ್ಡಿವೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಪ್ರತಿಪಕ್ಷಗಳು ಮತ್ತು ಸರ್ಕಾರ ಎರಡರಿಂದಲೂ ಕಾಣೆಯಾಗಿದೆ ಎಂದಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಗೆ ಆಸ್ಪದ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದು ಸರಿ ಕೂಡಾ. ಆ ದಿನ ಅಧಿವೇಶನ ನಡೆಯುವುದಿಲ್ಲ, ಆದರೆ ಮರುದಿನ ಸದನವನ್ನು ನಡೆಸಲು ಬಿಡಬೇಕು. ಪರಿಹಾರವನ್ನು ಹುಡುಕುವ ಪ್ರಯತ್ನ ಮಾಡಬೇಕು. ಆದರೆ ಇಂಥದ್ದು ಈಗ ಕಾಣೆಯಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ