TTD: ರಜಾ ಮೂಡಿನಲ್ಲಿರುವ ಭಕ್ತರು ತಿರುಪತಿಗೆ ಲಗ್ಗೆಯಿಡುತ್ತಿದ್ದಾರೆ, ದರ್ಶನಕ್ಕೆ ಕಾಯಬೇಕು ಎರಡು ದಿನ, ಸಂಯಮ ಪಾಲಿಸುವಂತೆ ಟಿಟಿಡಿ ಮನವಿ

ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ವೆಂಕಟರಮಣಸ್ವಾಮಿ ಭಕ್ತರು ವಿಶೇಷವಾಗಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಆದರೆ ಸದ್ಯ ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ ಬೇಕಾಗಿದೆ.

TTD: ರಜಾ ಮೂಡಿನಲ್ಲಿರುವ ಭಕ್ತರು ತಿರುಪತಿಗೆ ಲಗ್ಗೆಯಿಡುತ್ತಿದ್ದಾರೆ, ದರ್ಶನಕ್ಕೆ ಕಾಯಬೇಕು ಎರಡು ದಿನ, ಸಂಯಮ ಪಾಲಿಸುವಂತೆ ಟಿಟಿಡಿ ಮನವಿ
ತಿರುಪತಿಗೆ ಲಗ್ಗೆಯಿಡುತ್ತಿರುವ ಭಕ್ತರು
Follow us
ಸಾಧು ಶ್ರೀನಾಥ್​
|

Updated on: Apr 08, 2023 | 10:29 AM

ತಿರುಮಲಕ್ಕೆ ಭಕ್ತರ ದಂಡೇ (Devotees Rush) ಹರಿದು ಬರುತ್ತಿದೆ. ದರ್ಶನಕ್ಕೆ ಎರಡು ದಿನ ಬೇಕಾಗುವುದರಿಂದ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ-TTD -Tirumala Tirupati Devasthanams) ಕೋರಿದೆ. ತಿರುಮಲ ಶ್ರೀವಾರಿ ದರ್ಶನಕ್ಕೆ ಭಕ್ತಕೋಟಿ ಸಾಲುಗಟ್ಟಿ ನಿಂತಿದೆ (Sarva Darshan Queue). ಸತತ ರಜೆ ಇರುವ ಕಾರಣ ಭಕ್ತರ ದಂಡು ತಿರುಮಲದತ್ತ ನುಗ್ಗಿಬರುತ್ತಿದೆ. ಅದರಲ್ಲಿಯೂ… ಉದ್ಯೋಗಿಗಳಿಗೆ ಸತತ ರಜೆ ಇರುವುದರಿಂದ ತಿರುಮಲ ತಿಮ್ಮಪ್ಪನ (Tirupati) ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಜನರು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ದೂರದ ಊರುಗಳಿಂದ ತಿರುಮಲಕ್ಕೆ ಬರುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕ ದರ್ಶನದ ಕ್ಯೂ ಲೈನ್ ​​ಗೋ ಗರ್ಭ ಅಣೆಕಟ್ಟು ದಾಟಿ ಸಾಗಿದೆ.

ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ವೆಂಕಟರಮಣಸ್ವಾಮಿ ಭಕ್ತರು ವಿಶೇಷವಾಗಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಸದ್ಯ ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ ಬೇಕಾಗಿದೆ. ಮನೆಯಲ್ಲಿ ಅಪ್ಪ ಅಮ್ಮನಿಗೆ ಸತತ ರಜಾ ದಿನಗಳು, ಹಾಗೂ ಮಕ್ಕಳಿಗೆ ಪರೀಕ್ಷೆಗಳು ಮುಗಿದು ರಜಾ ಕಾಲ ಬಂದಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಇದರೊಂದಿಗೆ ತಿರುಮಲ ಬೆಟ್ಟದಲ್ಲಿ ಭಕ್ತ ಸಾಗರ ಪ್ರವಾಹೋಪಾದಿಯಲ್ಲಿದೆ.

ಇದನ್ನೂ ಓದಿ:  TTD: ತಿರುಪತಿ ತಿಮ್ಮಪ್ಪನಿಗೆ ಅನಾಮಧೇಯ ವ್ಯಕ್ತಿಯಿಂದ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಾಣಿಕೆ

ಇದೇ ವೇಳೆ ಸರ್ವ ದರ್ಶನ ಸರತಿ ಸಾಲಿನಲ್ಲಿ ಟೋಕನ್ ರಹಿತ ಭಕ್ತರು ಸಂಯಮದಿಂದ ಇರುವಂತೆ ಟಿಟಿಡಿ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ. ತಿರುಮಲದಲ್ಲಿ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ಯಾತ್ರೆಯನ್ನು ಯೋಜಿಸುವಂತೆ ಟಿಟಿಡಿ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ