Republic Day 2022: ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

| Updated By: Lakshmi Hegde

Updated on: Jan 24, 2022 | 8:18 AM

ಕೊವಿಡ್ 19 ಸಾಂಕ್ರಾಮಿಕ ಮತ್ತೆ ಹೆಚ್ಚಾಗಿದ್ದರಿಂದ ಸಮಾರಂಭ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್​ ಆಗಿ ಪ್ರಶಸ್ತಿ ಪುರಸ್ಕೃತರೊಟ್ಟಿಗೆ ಮಾತನಾಡಿ, ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತಿದೆ.

Republic Day 2022: ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ
ಪ್ರಧಾನಿ ಮೋದಿ
Follow us on

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ (Pradhan Mantri Rashtriya Bal Puraskar)ರೊಂದಿಗೆ ಇಂದು ಬೆಳಗ್ಗೆ 11.30ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಸಂವಾದ ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ, ರಾಜ್ಯ ಸಚಿವ ಡಾ. ಮುಂಜಪರಾ ಮಹೇಂದ್ರಭಾಯಿ  ಉಪಸ್ಥಿತರಿಸುವರು. ಹಾಗೇ, ಇದೇ ವೇಳೆ 2021 ಮತ್ತು 2022ನೇ ಸಾಲಿನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದವರಿಗೆ, ಬ್ಲಾಕ್​​​ಚೈನ್​ ತಂತ್ರಜ್ಞಾನದ ಮೂಲಕ ಡಿಜಿಟಲ್​ ಸರ್ಟಿಫಿಕೇಟ್​ ನೀಡಲಾಗುತ್ತದೆ. ಹೀಗೆ ಪ್ರಶಸ್ತಿ ಪುರಸ್ಕೃತರಿಗೆ ಡಿಜಿಟಲ್​ ಸರ್ಟಿಫಿಕೇಟ್​ ನೀಡಲು ಇದೇ ಮೊದಲ ಬಾರಿಗೆ ಬ್ಲಾಕ್​ಚೈನ್​ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. 

ಪ್ರಧಾನಮಂತ್ರಿ ಬಾಲ ಪುರಸ್ಕಾರವನ್ನು 5ವರ್ಷ ಮೇಲ್ಪಟ್ಟು-15ವರ್ಷ ಒಳಗಿನ ಸಾಧಕ ಮಕ್ಕಳಿಗೆ ನೀಡಲಾಗುತ್ತದೆ.  ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ, ನಾವೀನ್ಯತೆ, ಕ್ರೀಡೆ, ಕಲೆ, ಸಂಸ್ಕೃತಿ, ಸಮಾಜಸೇವೆ, ಶೌರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಕ್ಕಳನ್ನು ಆಯ್ಕೆ ಮಾಡಿ ಪ್ರತಿವರ್ಷವೂ ಪುರಸ್ಕಾರ ನೀಡಲಾಗುತ್ತದೆ. ಹೀಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪಡೆದ ಮಕ್ಕಳು 1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮೆಡಲ್​ ಹಾಗೂ ಸರ್ಟಿಫಿಕೇಟ್​ ಪಡೆಯುತ್ತಾರೆ. ಸಾಮಾನ್ಯವಾಗಿ ಬಾಲಪುರಸ್ಕಾರ ಪ್ರಶಸ್ತಿಯನ್ನು ರಾಷ್ಟ್ರಪತಿಯವರೇ ನೀಡುತ್ತಾರೆ. ಈ ಬಾರಿಯೂ ರಾಷ್ಟ್ರಪತಿ ರಾಮನಾಥ ಕೋವಿಂದ್​ ನೀಡಬೇಕಿತ್ತು. ಆದರೆ ಕೊವಿಡ್ 19 ಸಾಂಕ್ರಾಮಿಕ ಮತ್ತೆ ಹೆಚ್ಚಾಗಿದ್ದರಿಂದ ಸಮಾರಂಭ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್​ ಆಗಿ ಪ್ರಶಸ್ತಿ ಪುರಸ್ಕೃತರೊಟ್ಟಿಗೆ ಮಾತನಾಡಿ, ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತಿದೆ. ನಂತರ ಇವರೆಲ್ಲ ಜನವರಿ 26ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸುತ್ತಾರೆ.

ಕಳೆದ ವರ್ಷ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 25ರಂದು ಪ್ರಧಾನಮಂತ್ರಿ ಬಾಲ ಪುರಸ್ಕಾರ ಪಡೆದ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಆಗ ಮಾತನಾಡಿ, ನಿಮ್ಮ ಇಷ್ಟು ಸಣ್ಣ ವಯಸ್ಸಿನ ಸಾಧನೆ ನಿಜಕ್ಕೂ ಅಚ್ಚರಿ ತಂದಿದೆ. ನಿಮ್ಮಲ್ಲಿ ಹಲವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ, ಇನ್ನೊಬ್ಬರು ಸಂಶೋಧನೆ, ನಾವೀನ್ಯತೆ ಕ್ಷೇತ್ರದಲ್ಲಿ ಸಾಧಕರಾಗಿದ್ದೀರಿ. ಈ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದರು. ದೇ, ನಿರಂತರತೆ ಮತ್ತು ನಮ್ರತೆ ಎಂಬುದು ನಿಮ್ಮ ಮೂರು ರೆಸಲ್ಯೂಶನ್​ ಆಗಿರಲಿ ಎಂದು ಹೇಳಿದ್ದರು.

ಇದನ್ನೂ ಓದಿ: ಪುನೀತ್​ ನಟನೆಯ ‘ಜೇಮ್ಸ್​’ ಎದುರು ‘ಆರ್​ಆರ್​ಆರ್​’ ರಿಲೀಸ್​? ರಾಜಮೌಳಿಗೆ ಧರ್ಮಸಂಕಟ