ದೆಹಲಿ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಲ್ಲಿನ ಸಾಗರ ಜಿಲ್ಲೆಯ ಮಹಿಳೆಯರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಮಹಿಳೆಯರ ಜೊತೆಗೆ ಕುಳಿತು ಭಜನೆಯನ್ನೂ ಮಾಡಿದ್ದಾರೆ. ಜನಸಾಮಾನ್ಯರ ಸಿಎಂ ಎಂದೇ ಖ್ಯಾತಿ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಸಾಮಾನ್ಯರ ಜೊತೆ ಸಾಮಾನ್ಯರಂತೆ ಕುಳಿತು ಭಜನೆ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಜನಸಾಮಾನ್ಯ ಮಹಿಳೆಯರ ಜೊತೆ ನೆಲದಲ್ಲಿ ಕುಳಿತು ಭಜನೆ ಮಾಡಿರುವ ವಿಡಿಯೋವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸರಳ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯ ಹಳ್ಳಿಯೊಂದರಲ್ಲಿ ಅಭಿವೃದ್ಧಿ ಕಾರ್ಯಗಳ ಯೋಜನೆಗೆ ಭೂಮಿ ಪೂಜೆ, ಹಾಗೂ ಅಭಿವೃದ್ಧಿ ಪರಿಶೀಲನೆ ಕಾರ್ಯಕ್ರಮಕ್ಕೆ ಸಿಎಂ ಚೌಹಾಣ್ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಸಾಮಾನ್ಯ ಹಳ್ಳಿ ಜನರ ಜೊತೆ ಬೆರೆತು ಸಿಎಂ ಭಜನೆ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆಗೆ ಕೂಡ ಸಿಎಂ ಈ ವೇಳೆ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಭದ್ರತಾ ಲೋಪದ ನಂತರ ಮೋದಿ ದೀರ್ಘಾಯುಷ್ಯಕ್ಕಾಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಾರ್ಥನೆ