Delhi-Mumbai Expressway: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇಯ ಸೊಹ್ನಾ-ದೌಸಾ ಮಾರ್ಗಕ್ಕೆ ಇಂದು ಮೋದಿ ಚಾಲನೆ

ದೆಹಲಿ ಮತ್ತು ಜೈಪುರದ ನಡುವೆ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಸೊಹ್ನಾ (ಹರಿಯಾಣ)- ದೌಸಾ (ರಾಜಸ್ಥಾನ) ಮಾರ್ಗವು ಮಂಗಳವಾರದಿಂದ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

Delhi-Mumbai Expressway: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇಯ ಸೊಹ್ನಾ-ದೌಸಾ ಮಾರ್ಗಕ್ಕೆ ಇಂದು ಮೋದಿ ಚಾಲನೆ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇ

Updated on: Feb 12, 2023 | 9:42 AM

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು (ಫೆಬ್ರವರಿ 12) ದೆಹಲಿ-ದೌಸಾ-ಲಾಲ್ಸೋಟ್ ಮಾರ್ಗದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯನ್ನು (Delhi-Mumbai Expressway) ಉದ್ಘಾಟಿಸಲಿದ್ದಾರೆ.ಇದರಿಂದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಜೈಪುರದ ನಡುವೆ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಸೊಹ್ನಾ (ಹರಿಯಾಣ)- ದೌಸಾ (ರಾಜಸ್ಥಾನ) ಮಾರ್ಗವು ಮಂಗಳವಾರದಿಂದ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ದೆಹಲಿ-ದೌಸಾ ವಿಸ್ತರಣೆಯೊಂದಿಗೆ ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯವು ಗಮನಾರ್ಹವಾಗಿ ಕಡಿಮೆಯಾಗಲಿದೆ. ಇದುವರೆಗೂ ಈ ದೂರವನ್ನು ಕ್ರಮಿಸಲು ಸುಮಾರು 5.5 ಗಂಟೆಗಳು ಬೇಕಾಗುತ್ತಿತ್ತು. ಆದರೆ, ಈ ಎಕ್ಸ್​ಪ್ರೆಸ್​ವೇಯಿಂದ ಆ ಪ್ರಯಾಣದ ಸಮಯವು 3 ಗಂಟೆಗೆ ಇಳಿಕೆಯಾಗಲಿದೆ.

ಇದರ ಜೊತೆಗೆ, ಸಂಪೂರ್ಣ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಮೂಲಕ ಪ್ರಯಾಣಿಕರು ದೆಹಲಿಯಿಂದ ಮುಂಬೈಗೆ ಕೇವಲ 12 ಗಂಟೆಗಳಲ್ಲಿ ರಸ್ತೆಯ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Nitin Gadkari Karnataka Visit: ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ವೇ ಕಾಮಗಾರಿ ವೀಕ್ಷಿಸಿದ ನಿತಿನ್ ಗಡ್ಕರಿ

ಈ ಎಕ್ಸ್‌ಪ್ರೆಸ್‌ವೇಯ 5 ಪ್ರಮುಖ ಅಂಶಗಳು ಇಲ್ಲಿವೆ:
1. ಸೊಹ್ನಾ ಮತ್ತು ದೌಸಾ ನಡುವಿನ ವಿಸ್ತರಣೆಯು 246 ಕಿ.ಮೀ ಆಗಿದ್ದರೆ, ಭಾರತದ 2 ಪ್ರಮುಖ ನಗರಗಳನ್ನು ಸಂಪರ್ಕಿಸುವ ಸಂಪೂರ್ಣ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,380 ಕಿ.ಮೀ. ಉದ್ದವಿದೆ.

2. ಸೋಹ್ನಾ-ದೌಸಾ ಮಾರ್ಗವು ಜನನಿಬಿಡ ಭಾಗವಾದ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಗೆ ಪರ್ಯಾಯವಾಗಲಿದೆ.

3. ಸೊಹ್ನಾ-ದೌಸಾ ಮಾರ್ಗವನ್ನು 12,150 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

4. ಸೋಹ್ನಾ-ದೌಸಾ ಸ್ಟ್ರೆಚ್ ಹರಿಯಾಣದಲ್ಲಿ 160 ಕಿಮೀ ಕ್ರಮಿಸುತ್ತದೆ. ಇದು ಗುರುಗ್ರಾಮ್, ಪಲ್ವಾಲ್ ಮತ್ತು ನುಹ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಗುರುಗ್ರಾಮ್ ಜಿಲ್ಲೆಯ 11 ಗ್ರಾಮಗಳು, ಪಲ್ವಾಲ್‌ನ 7 ಗ್ರಾಮಗಳು ಮತ್ತು ನುಹ್ ಜಿಲ್ಲೆಯ 47 ಗ್ರಾಮಗಳನ್ನು ಒಳಗೊಂಡಿದೆ.

ಇದನ್ನೂ ಓದಿ: PM Narendra Modi: ನಾಳೆ ಏರ್​ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ

5. ಈ ವಿಸ್ತರಣೆಯು ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ವೇಯೊಂದಿಗೆ ನೇರವಾಗಿ ಸಂಪರ್ಕಗೊಳ್ಳುತ್ತದೆ. ಈ ವಿಸ್ತರಣೆಯು ಎಕ್ಸ್‌ಪ್ರೆಸ್‌ವೇಯ ಇತರ ಭಾಗಗಳಂತೆ, 8 ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ದಟ್ಟಣೆಯನ್ನು ಅವಲಂಬಿಸಿ ಭವಿಷ್ಯದಲ್ಲಿ 12 ಲೇನ್‌ಗಳಿಗೆ ವಿಸ್ತರಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 am, Sun, 12 February 23

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us