PM Narendra Modi: ನಾಳೆ ಏರ್​ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ

Bengaluuru Aero India Show: ಯಲಂಕದ ವಾಯುನೆಲೆಯಲ್ಲಿ ಐದು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಕಾರ್ಯಕ್ರಮ ನಾಳೆ ಸೋಮವಾರ ಆರಂಭವಾಗುತ್ತಿದೆ. ಕಾರ್ಯಕ್ರಮ ಉದ್ಘಾಟಿಸಲಿರುವ ಪ್ರಧಾನಿ ಮೋದಿ ಅದಕ್ಕಾಗಿ ಭಾನುವಾರವೇ ಬೆಂಗಳೂರಿಗೆ ಬರುತ್ತಿದ್ದಾರೆ.

PM Narendra Modi: ನಾಳೆ ಏರ್​ಶೋ ಉದ್ಘಾಟನೆಗೆ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 12, 2023 | 6:52 AM

ಬೆಂಗಳೂರು: ಇಡೀ ವಿಶ್ವದ ಕಣ್ಣು ಬೆಂಗಳೂರಿನ ಏರ್​ಶೋ (Aero India 2023) ಮೇಲೆ ನೆಟ್ಟಿದೆ. ಫೆಬ್ರುವರಿ 13ರಿಂದ 17ರವರೆಗೂ ಯಲಹಂಕದ ವಾಯುನೆಲೆಯಲ್ಲಿ (Yelahanka Air Base) ನಡೆಯಲಿರುವ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ನಾಳೆಯ ಕಾರ್ಯಕ್ರಮಕ್ಕಾಗಿ ಪ್ರಧಾನಿಗಳು ಇಂದು ಭಾನುವಾರವೇ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂದು ರಾಜಸ್ಥಾನ, ದೆಹಲಿ ಮೊದಲಾದೆಡೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿರುವ ನರೇಂದ್ರ ಮೋದಿ ಭಾನುವಾರ ಸಂಜೆ 7:45ಕ್ಕೆ ಹೆಚ್​ಎಎಲ್​ಗೆ ಬರಲಿದ್ದಾರೆ. ಆನಂತರ ರಾತ್ರಿ ರಾಜಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಏರೋ ಇಂಡಿಯಾ 2023 ಶೋ ಉದ್ಘಾಟನಾ ಕಾರ್ಯಕ್ರಮ ಸೋಮವಾರ ಬೆಳಗ್ಗೆ 9:30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 11:30ರವರೆಗೂ ಏರೋ ಶೋ ವೀಕ್ಷಣೆ ಮಾಡಿ ಅ ಬಳಿಕ ನಿರ್ಗಮಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಟ್ರಾಫಿಕ್‌ ಫೈನ್‌ ಆಫರ್, 50% ಡಿಸ್ಕೌಂಟ್…ಹತ್ತೇ ದಿನದಲ್ಲಿ 120 ಕೋಟಿ ರೂ. ಕಲೆಕ್ಷನ್‌..!

ಭಾರತದ ಪ್ರಬಲ ಯುದ್ಧವಿಮಾನಗಳ ಅನಾವರಣ

ಏರೋ ಇಂಡಿಯಾ ಶೋನಲ್ಲಿ ಭಾರತದ ಅತ್ಯಾಧುನಿಕ ಯುದ್ಧವಿಮಾನಗಳು ಪ್ರದರ್ಶನ ನೀಡುತ್ತವೆ. ಹೀಗಾಗಿ, ದೇಶ ವಿದೇಶಗಳಲ್ಲಿ ಬಹಳ ಮಂದಿ ಈ ಕಾರ್ಯಕ್ರಮವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಯಲಹಂಕದಲ್ಲಿ ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬ.

aero india show

ಏರೋ ಇಂಡಿಯಾ ಶೋ

ಭಾರತದ ಡಿಫೆನ್ಸ್ ಪಡೆಯ ತೇಜಸ್, ಸೂರ್ಯಕಿರಣ್, ಸಾರಂಗ್, ರಫೇಲ್, ಡಕೋಟ, ಎಲ್​ಸಿಎ, ಸುಖೋಯ್-30, ಸುಖೋಯ್ ಎಂಕೆ-1 ಸೇರಿದಂತೆ 40ಕ್ಕೂ ಹೆಚ್ಚು ಯುದ್ಧವಿಮಾನಗಳು ಯಲಹಂಕ ಮೇಲಿನ ಆಗಸದಲ್ಲಿ ಹಾರಾಟ ನಡೆಸಿ ರೋಚಕತೆ ಸೃಷ್ಟಿಸಲಿವೆ. ಈಗಾಗಲೇ ಯಲಯಂಕ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಪ್ರದರ್ಶನಕ್ಕೆ ತಾಲೀಮುಗಳು ನಡೆಯುತ್ತಿವೆ. ಜನರು ಈ ಅಭ್ಯಾಸದ ಕ್ಷಣಗಳನ್ನೂ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು, ಮೋದಿ-ಮೋಹನ್ ಭಾಗವತ್​ಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮಹಮೂದ್‌ಗೂ ಸೇರಿದೆ: ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ

ಈ ಏರೋ ಇಂಡಿಯಾ ಶೋಗೆ ಇದೂವರೆಗೂ ವೈಮಾನಿಕ ಕ್ಷೇತ್ರದ 806 ಕಂಪನಿಗಳು ನೊಂದಣಿ ಮಾಡಿವೆ. ಇದರಲ್ಲಿ ವಿದೇಶದ 99 ಕಂಪನಿಗಳು ಸೇರಿವೆ. ರಕ್ಷಣಾ ಕ್ಷೇತ್ರದಲ್ಲಿ ಹಲವು ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ. ತುಮಕೂರಿನಲ್ಲಿ ಹೆಚ್​ಎಲ್​ಗೆ ಸಾಕಷ್ಟು ಹೂಡಿಕೆ ಬರುವ ನಿರೀಕ್ಷೆ ಇದೆ.

Published On - 6:52 am, Sun, 12 February 23