ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು, ಮೋದಿ-ಮೋಹನ್ ಭಾಗವತ್​ಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮಹಮೂದ್‌ಗೂ ಸೇರಿದೆ: ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ

ಪ್ರಧಾನಿ ಮೋದಿ ಮತ್ತು ಮೋಹನ್​ ಭಾಗವತ್​ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು ಅಂತೆಲ್ಲ ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ ಮಹಮೂದ್​ ಮದನಿ ಹೇಳಿದ್ದಾರೆ.

ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು, ಮೋದಿ-ಮೋಹನ್ ಭಾಗವತ್​ಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮಹಮೂದ್‌ಗೂ ಸೇರಿದೆ: ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ
ಮಹಮೂದ್​ ಮದನಿ, ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ
Follow us
ರಮೇಶ್ ಬಿ. ಜವಳಗೇರಾ
|

Updated on:Feb 11, 2023 | 6:52 PM

ನವದೆಹಲಿ: ಇಸ್ಲಾಂ ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮ. ಭಾರತ ನಮ್ಮ ದೇಶ. ಪ್ರಧಾನಿ ಮೋದಿ(Narendra Modi) ಮತ್ತು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್(RSS chief Mohan Bhagwat)​ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಅವರಿಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮುಸ್ಲಿಮರಿಗೂ ಸೇರಿದ್ದಾಗಿದೆ ಎಂದು ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ ಮಹಮೂದ್​ ಮದನಿ(Mahmood Madani)ಗುಡುಗಿದ್ದಾರೆ.

ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮೀಯತ್ ಉಲಮಾ-ಇ-ಹಿಂದ್‌ನ ಸಮಗ್ರ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮೌಲಾನಾ ಮದನಿ, ಭಾರತ ನಮ್ಮ ದೇಶ. ಪ್ರಧಾನಿ ಮೋದಿ ಮತ್ತು ಮೋಹನ್​ ಭಾಗವತ್​ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಮಹಮೂದ್, ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಮಹಮೂದ್‌ಗಿಂತ ಅವರು ಒಂದು ಇಂಚು ಮುಂದಿಲ್ಲ ಎಂದು ಹೇಳಿದರು.

ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು. ಭಾರತಕ್ಕೆ ಇಸ್ಲಾಂ ಧರ್ಮ ಹೊರಗಿನಿಂದ ಬಂದಿದೆ ಎಂಬುದು ಸುಳ್ಳು. ಅದು ಆಧಾರರಹಿತವಾಗಿದೆ. ಹಿಂದಿ ಮುಸ್ಲಿಮರಿಗೆ ಭಾರತವು ಅತ್ಯುತ್ತಮ ದೇಶವಾಗಿದೆ. ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ತುಂಬಾ ಹಳೆಯದು. ಆದ್ರೆ, ದೇಶದಲ್ಲಿ ದ್ವೇಷ ಭಾಷಣ ಮತ್ತು ಇಸ್ಲಮೋಫೋಬಿಯಾ ಹೆಚ್ಚುತ್ತಿದೆ. ಅಲ್ಲದೇ ಬಲವಂತದ ಧಾರ್ಮಿಕ ಮತಾಂತರವನ್ನು ನಾವು ವಿರೋಧಿಸುತ್ತೇವೆ. ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಪರಿವರ್ತಿಸುವ ಜನರನ್ನು ಕೂಡ, ಸುಳ್ಳು ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬಲವಂತವಾಗಿ ನಡೆಯುವ ಧಾರ್ಮಿಕ ಮತಾಂತರಕ್ಕೆ ನಮ್ಮ ವಿರೋಧವಿದೆ. ಧಾರ್ಮಿಕ ಸ್ವಾತಂತ್ರ್ಯದ ಭಾರತದ ಪ್ರಜೆಯ ಮೂಲಭೂತ ಹಕ್ಕು. ಬಲವಂತ, ವಂಚನೆ, ದುರಾಸೆಯಿಂದ ಮತಾಂತರ ಮಾಡುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ನಮಾಝ್ ನಿಷೇಧ, ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಡೋಜರ್ ಕ್ರಮವನ್ನು ಉದಾಹರಣಣೆಗಳನ್ನು ನೀಡಿ ಅಸಮಾಧಾನ ಹೊರಹಾಕಿದರು.

ಭಾರತ ಸರ್ವಧರ್ಮಗಳ ನೆಲೆಯಾಗಿದ್ದು, ಎಲ್ಲ ಧರ್ಮಗಳನ್ನೂ ಗೌರವಿಸುವುದು ಈ ಮಣ್ಣಿನ ಗುಣ. ಧರ್ಮ ವ್ಯಕ್ತಿಯ ಖಾಸಗಿ ವಿಷಯವಾಗಿದ್ದು, ಇತ್ತೀಚಿಗೆ ಈ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ. ಭಾರತದ ಮುಸ್ಲಿಮರು ಎರಡನೇ ದರ್ಜೆಯ ಪ್ರಜೆಗಳಲ್ಲ. ಅವರೂ ಕೂಡ ದೇಶದ ಇತರ ಪ್ರಜೆಗಳಂತೆ ಏಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಮಹಮೂದ್‌ ಮದನಿ ಸ್ಪಷ್ಟಪಡಿಸಿದರು.

Published On - 5:21 pm, Sat, 11 February 23

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ