ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 18 ರಂದು ಆಕಾಶವಾಣಿಯಲ್ಲಿ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ಮಾತನಾಡಲಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮದ 102 ನೇ ಸಂಚಿಕೆಗಾಗಿ ಮೋದಿ ಅವರು ದೇಶದ ನಾಗರಿಕರಿಂದ ವಿಷಯಗಳನ್ನು ಆಹ್ವಾನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ನಾಗರಿಕರಿಂದ ವಿಷಯಗಳನ್ನು ಸ್ವೀಕರಿಸಲು ಯಾವಾಗಲೂ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
This month’s #MannKiBaat programme will take place on Sunday, 18th June. It is always a delight to receive your inputs. Share your inputs on the NaMo App, MyGov or record your message by dialling 1800-11-7800. https://t.co/btZKHrI9Nv
— Narendra Modi (@narendramodi) June 13, 2023
ಜನರು ತಮ್ಮ ಇನ್‌ಪುಟ್‌ಗಳನ್ನು NaMo ಅಪ್ಲಿಕೇಶನ್, MyGov ನಲ್ಲಿ ಹಂಚಿಕೊಳ್ಳಬಹುದು ಅಥವಾ 1800-11-7800 ಅನ್ನು ಡಯಲ್ ಮಾಡುವ ಮೂಲಕ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಬಹುದು. 1922 ಎಂಬ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದಾಗ ಬರುವ SMS ನಲ್ಲಿರುವ ಲಿಂಕ್ ಮೂಲಕವೂ ಸಲಹೆ, ವಿಷಯಗಳನ್ನು ಕಳುಹಿಸಬಹುದು ಎಂದು ಹೇಳಿದ್ದಾರೆ.
ಜೂನ್ 18 ಸೇವ್ ಮಾಡಿಡಿ. ನರೇಂದ್ರ ಮೋದಿಯವರು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮದಲ್ಲಿ ರಾಷ್ಟ್ರದೊಂದಿಗೆ ಸಂವಾದಕ್ಕೆ ಸಿದ್ಧರಾಗುತ್ತಿದ್ದಾರೆ. ನಿಮ್ಮ ಗಮನಾರ್ಹ ಕಥೆಗಳು, ಆಲೋಚನೆಗಳು ಮತ್ತು ಆಕಾಂಕ್ಷೆಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ ಧ್ವನಿಗೆ ಮಹತ್ವವಿದೆ ಎಂದು mygovindia ಟ್ವೀಟ್ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ