Vibrant Gujarat Global Summit: ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್​ಗೆ ಭೇಟಿ, ವೈಬ್ರೆಂಟ್ ಗುಜರಾತ್ ಶೃಂಗಸಭೆ ಉದ್ಘಾಟನೆ

|

Updated on: Jan 08, 2024 | 7:40 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್​ ಪ್ರವಾಸ ಕೈಗೊಳ್ಳಲಿದ್ದಾರೆ. 8-10ರವರೆಗೆ ನಡೆಯಲಿರುವ ವೈಬ್ರೆಂಟ್​ ಗುಜರಾತ್ ಗ್ಲೋಬಲ್​ ಶೃಂಗಸಭೆ(Vibrant Gujarat Global Summit)ಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಜಾಗತಿಕ ನಾಯಕರು ಮತ್ತು ಉನ್ನತ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

Vibrant Gujarat Global Summit: ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್​ಗೆ ಭೇಟಿ, ವೈಬ್ರೆಂಟ್ ಗುಜರಾತ್ ಶೃಂಗಸಭೆ ಉದ್ಘಾಟನೆ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್​ ಪ್ರವಾಸ ಕೈಗೊಳ್ಳಲಿದ್ದಾರೆ. 8-10ರವರೆಗೆ ನಡೆಯಲಿರುವ ವೈಬ್ರೆಂಟ್​ ಗುಜರಾತ್ ಗ್ಲೋಬಲ್​ ಶೃಂಗಸಭೆ(Vibrant Gujarat Global Summit)ಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಜಾಗತಿಕ ನಾಯಕರು ಮತ್ತು ಉನ್ನತ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10 ನೇ ಆವೃತ್ತಿಯನ್ನು 2024 ರ ಜನವರಿ 10 ರಿಂದ 12 ರವರೆಗೆ ಗಾಂಧಿನಗರದಲ್ಲಿ ಆಯೋಜಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಮಾಹಿತಿ ನೀಡಿದೆ. ಇದರ ವಿಷಯವಸ್ತು ಗೇಟ್‌ವೇ ಟು ದಿ ಫ್ಯೂಚರ್ ಆಗಿದೆ.

2003 ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ VGGS ಅನ್ನು ಪರಿಕಲ್ಪನೆ ಮಾಡಲಾಯಿತು. ಇ-ಸಾರಿಗೆ, ಸ್ಟಾರ್ಟ್‌ಅಪ್‌ಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME), ಸಾಗರ ಆರ್ಥಿಕತೆ, ಹಸಿರು ಶಕ್ತಿ ಮತ್ತು ಸ್ಮಾರ್ಟ್ ಮೂಲಸೌಕರ್ಯಗಳು ಅದರ ಕೆಲವು ಪ್ರಮುಖ ಕ್ಷೇತ್ರಗಳಾಗಿವೆ.

ಮತ್ತಷ್ಟು ಓದಿ:ವಿಶ್ವ ಹವಾಮಾನ ಶೃಂಗಸಭೆ: ದುಬೈನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ, 400ಕ್ಕೂ ಅಧಿಕ ಸ್ಥಾನಗಳಿಂದ ಗೆಲ್ಲಿ ಎಂದು ಹರಸಿದ ಅನಿವಾಸಿ ಭಾರತೀಯರು

ಪ್ರಧಾನಿ ಮೋದಿ ಜನವರಿ 9 ರಂದು ತಲುಪಲಿದ್ದಾರೆ. ಜನವರಿ 9 ರಂದು ಬೆಳಿಗ್ಗೆ 9:30 ರ ಸುಮಾರಿಗೆ ಗಾಂಧಿನಗರದ ಮಹಾತ್ಮ ಮಂದಿರಕ್ಕೆ ಮೋದಿ ತಲುಪಲಿದ್ದಾರೆ, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಟಾಪ್ ಗ್ಲೋಬಲ್ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಎಕ್ಸಿಬಿಷನ್ ಉದ್ಘಾಟಿಸಲಿದ್ದಾರೆ. ಜನವರಿ 10 ರಂದು ಬೆಳಿಗ್ಗೆ 9.45 ರ ಸುಮಾರಿಗೆ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024 ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಇದಾದ ಬಳಿಕ ಟಾಪ್ ಗ್ಲೋಬಲ್ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಪ್ರಧಾನಮಂತ್ರಿಯವರು ಗಿಫ್ಟ್ ಸಿಟಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಸಂಜೆ 5.15 ರ ಸುಮಾರಿಗೆ ಅವರು ಗ್ಲೋಬಲ್ ಫಿನ್‌ಟೆಕ್ ಲೀಡರ್‌ಶಿಪ್ ಫೋರಮ್‌ನಲ್ಲಿ ವ್ಯಾಪಾರದ ಪ್ರಮುಖರೊಂದಿಗೆ ಚರ್ಚೆ ನಡೆಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ