Aditya-L1: ಇದು ಭಾರತದ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ: ಪ್ರಧಾನಿ ಮೋದಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೌರ ಮಿಷನ್ ಆದಿತ್ಯ-ಎಲ್ 1 ನಾಲ್ಕು ತಿಂಗಳ ನಂತರ ಶನಿವಾರ ತನ್ನ ಅಂತಿಮ ಗಮ್ಯಸ್ಥಾನದ ಕಕ್ಷೆಯನ್ನು ತಲುಪಿದೆ. ಈ ಕುರಿತಾಗಿ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 58ನೇ ಡಿಜಿಪಿ-ಐಜಿಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇದು ಭಾರತದ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎಂದಿದ್ದಾರೆ.
ದೆಹಲಿ, ಜನವರಿ 07: ಸೌರಮಂಡಲದ ಅಧಿಪತಿ ಸೂರ್ಯನ ಅಧ್ಯಯನಕ್ಕೆ ಇಸ್ರೋ ಕೈ ಹಾಕಿತ್ತು. ಅದರಂತೆ ಕಳೆದ ವರ್ಷ ಸೆಪ್ಟೆಂಬರ್ 2ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 (Aditya-L1) ಉಡಾವಣೆ ಮಾಡಲಾಗಿತ್ತು. ಬರೋಬ್ಬರಿ 126 ದಿನಗಳ ಬಳಿಕ ಸೂರ್ಯ ಮತ್ತು ಭೂಮಿಯ ನಡುವಿನ ಲ್ಯಾಗ್ರೇಂಜ್ ಪಾಯಿಂಟ್ L1ಅನ್ನು ಆದಿತ್ಯ ತಲುಪಿದ್ದಾನೆ. ಇದು ಭಾರತದ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 58ನೇ ಡಿಜಿಪಿ-ಐಜಿಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದ ಆದಿತ್ಯ ಎಲ್ 1 ಉಪಗ್ರಹ ಭೂಮಿಯಿಂದ 15 ಲಕ್ಷ ಕಿ.ಮೀ ದೂರ ಕ್ರಮಿಸಿ ನಿಗದಿತ ಸಮಯಕ್ಕೆ ತನ್ನ ಗುರಿ ತಲುಪಿದೆ. ಆದಿತ್ಯ ಎಲ್ 1 ಮುಂದೆ ಸೂರ್ಯನು ನೇರವಾಗಿದ್ದು, ಭೂಮಿಯ ಅಥವಾ ಚಂದ್ರನ ನೆರಳು ಎಂದಿಗೂ ಬೀಳುವುದಿಲ್ಲ. ಹಾಗಾಗಿ ಆದಿತ್ಯ ಎಲ್ 1 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ತುಂಬಾ ಸುಲಭವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸಚಿವರ ಅವಹೇಳನಕಾರಿ ಹೇಳಿಕೆ, ಈ ವಿಚಾರದಿಂದ ಅಂತರ ಕಾಯ್ದುಕೊಂಡ ಮಾಲ್ಡೀವ್ಸ್ ಸರ್ಕಾರ
ಆದಿತ್ಯ-ಎಲ್1 ತನ್ನ ನಿಗದಿ ಸ್ಥಾನವನ್ನು ತಲುಪಿದ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿ, “ಭಾರತವು ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸುತ್ತೇನೆ. ಮಾನವೀಯತೆಯ ಪ್ರಯೋಜನಕ್ಕಾಗಿ ನಾವು ವಿಜ್ಞಾನದ ಹೊಸ ಸಾಧನೆಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು.
ಸರಕು ಸಾಗಣೆ ಹಡಗು ಹೈಜಾಕ್ ಆದ ಬಗ್ಗೆ ಮೋದಿ ಮಾತು
ಸೊಮಾಲಿಯಾ ಕರಾವಳಿಯ ಬಳಿ ಅಪಹರಣಕ್ಕೊಳಗಾಗಿದ್ದ ‘ಎಂವಿ ಲೀಲಾ ನಾರ್ಫೋಕ್’ ಎಂಬ ಸರಕು ಸಾಗಣೆ ಹಡಗು ಹೈಜಾಕ್ ಆದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಒಂದು ಸರಕು ಸಾಗಣೆ ಹಡಗು ಅರಬ್ಬಿ ಸಮುದ್ರಕ್ಕೆ ಹೊರಟಿತ್ತು. ತೊಂದರೆಯಲ್ಲಿದೆ ಎಂಬ ಸಂದೇಶ ಬಂದ ತಕ್ಷಣ ಭಾರತೀಯ ನೌಕಾಪಡೆ ಮತ್ತು ಸಾಗರ ಯೋಧರು ಕಾರ್ಯಪ್ರವೃತ್ತರಾಗಿದರು.
ಇದನ್ನೂ ಓದಿ: Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್ ಸಚಿವ, ಭಾರತೀಯರು ಮಾಡಿದ್ದೇನು?
ಈ ಹಡಗಿನಲ್ಲಿ 15 ಭಾರತೀಯರು ಸೇರಿದಂತೆ 21 ಜನರಿದ್ದರು. ಭಾರತೀಯ ಕರಾವಳಿಯಿಂದ ಸುಮಾರು 2 ಸಾವಿರ ಕಿಲೋಮೀಟರ್ ದೂರದಲ್ಲಿ ಹೈಜಾಕ್ ಆದ ಹಡುಗಿನಲ್ಲಿದ್ದವರನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.