PM Modi: ಇಂದು ತ್ರಿಪುರ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

| Updated By: Lakshmi Hegde

Updated on: Jan 04, 2022 | 3:14 PM

ಮಣಿಪುರದ ನಂತರ ಪ್ರಧಾನಿ ಮೋದಿ ತ್ರಿಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣ ಮಹಾರಾಜಾ ಬೀರ್​ ಬಿಕ್ರಮ್​ ಏರ್​ಪೋರ್ಟ್​​ನ ನೂತನ ಟರ್ಮಿನಲ್​ ಕಟ್ಟಡ ಉದ್ಘಾಟಿಸುವರು.

PM Modi: ಇಂದು ತ್ರಿಪುರ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi)ಯವರು ಇಂದು ಮಣಿಪುರ ಮತ್ತು ತ್ರಿಪುರಕ್ಕೆ(PM Modi Manipur and Tripura Visit) ಇಂದು ಭೇಟಿ ನೀಡಲಿದ್ದಾರೆ. ಈ ಎರಡು ಈಶಾನ್ಯ ರಾಜ್ಯಗಳಿಗೆ ಇಂದು ತೆರಳಲಿರುವ ಅವರು ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಣಿಪುರದ ಇಂಫಾಲ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4,800 ಕೋಟಿ ರೂಪಾಯಿ ಮೌಲ್ಯದ 22 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೇ, ತ್ರಿಪುರದಲ್ಲಿ ಅಗಾರ್ತಲಾದಲ್ಲಿ ಮಹಾರಾಜ ಬೀರ ಬಿಕ್ರಮ್​ ವಿಮಾನ ನಿಲ್ದಾಣದ ನೂತನ ಇಂಟಿಗ್ರೇಟೆಡ್​ ಟರ್ಮಿನಲ್​ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಅದರೊಂದಿಗೆ ಇನ್ನೆಡರು ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ಉದ್ಘಾಟಿಸುವರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಮಣಿಪುರದಲ್ಲಿ 2022ರ ಮಾರ್ಚ್​ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ. ಮಾರ್ಚ್​​ನಲ್ಲಿ ಚುನಾವಣೆ ನಡೆಯಲಿದ್ದರೂ, ಅಧಿಕೃತ ದಿನಾಂಕವನ್ನು ಇನ್ನೂ ಚುನಾವಣಾ ಆಯೋಗ ಘೋಷಣೆ ಮಾಡಿಲ್ಲ.  

ಮಣಿಪುರದಲ್ಲಿ ಚಾಲನೆ ನೀಡಲಿರುವ 22 ಯೋಜನೆಗಳಲ್ಲಿ 13 ಅಭಿವೃದ್ಧಿ ಯೋಜನೆಗಳು 1850 ರೂ.ಮೌಲ್ಯದ್ದು. ಇವು ಕಾಮಗಾರಿ ಮುಕ್ತಾಯವಾಗಿದ್ದು ಉದ್ಘಾಟನೆ ಮಾಡುವಂಥದ್ದಾಗಿದೆ. ಹಾಗೇ, ಇನ್ನೂ 9 ಯೋಜನೆಗಳು 2950 ಕೋಟಿ ರೂ.ವೆಚ್ಚದ್ದು. ಇವುಗಳಿಗೆ ಕಾಮಗಾರಿ ನಡೆಯಬೇಕಾಗಿದ್ದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡುತ್ತಿದೆ. ಅದರ ಒಂದು ಭಾಗವಾಗಿ ಮಣಿಪುರದಲ್ಲಿ ಇಂದು 1700 ಕೋಟಿ ರೂಪಾಯಿ ಮೌಲ್ಯದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಹಾಗೇ, ಇಂಫಾಲ್​​ನಿಂದ ಸಿಲ್ಚಾರ್​ಗೆ ಸಂಪರ್ಕ ಸುಗಮಗೊಳಿಸಲು ಬರಾಕ್​ ನದಿಗೆ, ಎನ್​ಎಚ್​-37 ಮಾರ್ಗದಲ್ಲಿ ನಿರ್ಮಿಸಲಾದ 75 ಕೋಟಿ ರೂಪಾಯಿ ವೆಚ್ಚದ ಸ್ಟೀಲ್​ ಸೇತುವೆಯನ್ನು ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಮಣಿಪುರದಲ್ಲಿ1100 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ 2387 ಮೊಬೈಲ್​ ಟವರ್​​ಗಳು, ಇಂಫಾಲ್​ ನಗರಕ್ಕೆ ನೀರು ಪೂರೈಸುವ 280 ಕೋಟಿ ರೂ. ಮೌಲ್ಯದ ತೌಬಲ್ ಬಹುಪಯೋಗಿ ಯೋಜನೆಯ ಜಲ ಪ್ರಸರಣ ವ್ಯವಸ್ಥೆ​​ ಸೇರಿ ಇನ್ನಿತರ ನೀರು ಪೂರೈಕೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.  ಇನ್ನು ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ ಇಂಫಾಲ್​​ನಲ್ಲಿ 160 ಕೋಟಿ ರೂ. ವೆಚ್ಚದ ಸ್ಟೇಟ್​ ಆಫ್​ ದಿ ಆರ್ಟ್​ ಕ್ಯಾನ್ಸರ್ ಹಾಸ್ಪಿಟಲ್​ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಕೊವಿಡ್​ 19 ನಿಯಂತ್ರಣಾ ವ್ಯವಸ್ಥೆ ಉತ್ತೇಜಿಸುವ ದೃಷ್ಟಿಯಿಂದ ಕಿಯಾಮ್ಗೆಯ್​​ನಲ್ಲಿನಿರ್ಮಿಸಲಾದ 200 ಹಾಸಿಗೆಗಳುಳ್ಳ ಕೊವಿಡ್ 19 ಆಸ್ಪತ್ರೆ ಉದ್ಘಾಟನೆ ಮಾಡುತ್ತಾರೆ. ಇದು ಡಿಆರ್​ಡಿಒ ಸಹಯೋಗದಲ್ಲಿ, 37 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ. ಇನ್ನುಳಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಫಾಲ್​ ಸ್ಮಾರ್ಟ್​ ಸಿಟಿ ಮಿಷನ್​ನಿಡಿ 170 ಕೋಟಿ ರೂ.ವೆಚ್ಚದ ಮೂರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ತ್ರಿಪುರಕ್ಕೆ ಭೇಟಿ
ಮಣಿಪುರದ ನಂತರ ಪ್ರಧಾನಿ ಮೋದಿ ತ್ರಿಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣ ಮಹಾರಾಜಾ ಬೀರ್​ ಬಿಕ್ರಮ್​ ಏರ್​ಪೋರ್ಟ್​​ನ ನೂತನ ಟರ್ಮಿನಲ್​ ಕಟ್ಟಡ ಉದ್ಘಾಟಿಸುವರು. ಈ ಕಟ್ಟಡವನ್ನು 450 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡುವ ದೃಷ್ಟಿಯಿಂದ ಈಗಿರುವ ಸುಮಾರು 100 ಶಾಲೆಗಳನ್ನು ವಿದ್ಯಾಜ್ಯೋತಿ ಶಾಲೆಗಳಾಗಿ ಪರಿವರ್ತಿಸುವ 500 ಕೋಟಿ ರೂ.ವೆಚ್ಚದ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದು ಸುಮಾರು 1.2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿದೆ.

ಇದನ್ನೂ ಓದಿ: Subliminal Excavation: ಕಲಾ ಪ್ರೇಮಿಗಳನ್ನು ಸೆಳೆಯುತ್ತಿದೆ ಕೃಷ್ಣ ಶೆಟ್ಟಿಯವರ ಕುಂಚದಿಂದ ಮೂಡಿ ಬಂದ ವೈವಿಧ್ಯಮಯ ಚಿತ್ರ ಕಲಾ ಪ್ರದರ್ಶನ

Published On - 8:11 am, Tue, 4 January 22