Subliminal Excavation: ಕಲಾ ಪ್ರೇಮಿಗಳನ್ನು ಸೆಳೆಯುತ್ತಿದೆ ಕೃಷ್ಣ ಶೆಟ್ಟಿಯವರ ಕುಂಚದಿಂದ ಮೂಡಿ ಬಂದ ವೈವಿಧ್ಯಮಯ ಚಿತ್ರ ಕಲಾ ಪ್ರದರ್ಶನ
2021ರ ಡಿಸೆಂಬರ್ 20ರಂದು ಆರಂಭವಾದ ಈ ಪ್ರದರ್ಶನ ಜನವರಿ ನಾಲ್ಕಕ್ಕೇ ಕೊನೆಗೊಳ್ಳಬೇಕಿತ್ತು. ಆದ್ರೆ ಚಿತ್ರ ಕಲಾ ಪ್ರದರ್ಶನಕ್ಕೆ ಸಿಕ್ಕ ಉತ್ತಮ ರೀತಿಯ ಸ್ಪಂದನೆಯಿಂದಾಗಿ ಇದನ್ನು 2022ರ ಜನವರಿ 20ರ ವರೆಗೆ ಮುಂದೂಡಲಾಗಿದೆ.
ತಮ್ಮ ಜೀವನದ ಅಮೂಲ್ಯ 50 ವರ್ಷಗಳನ್ನು ಚಿತ್ರ ಕಲೆಗೆಂದೇ ಸಮರ್ಪಿಸಿದ ಹಾಗೂ ಈಗಲೂ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತ ಜನ ಪ್ರಿಯರಾದ ಕಲಾವಿದ, ಕಲಾ ವಿಮರ್ಶಕ, ಬರಹಗಾರ, ಮಾಜಿ ಆಡಳಿತಾಧಿಕಾರಿ ಲಲಿತ ಕಲಾ ಅಕಾಡೆಮಿ, ನವದೆಹಲಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಸಿ ಎಸ್, ಬೆಂಗಳೂರಿನಲ್ಲಿ ತಮ್ಮ ಅಪರೂಪದ(Subliminal Excavation) ಚಿತ್ರ ಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
2021ರ ಡಿಸೆಂಬರ್ 20ರಂದು ಆರಂಭವಾದ ಈ ಪ್ರದರ್ಶನ ಜನವರಿ ನಾಲ್ಕಕ್ಕೇ ಕೊನೆಗೊಳ್ಳಬೇಕಿತ್ತು. ಆದ್ರೆ ಚಿತ್ರ ಕಲಾ ಪ್ರದರ್ಶನಕ್ಕೆ ಸಿಕ್ಕ ಉತ್ತಮ ರೀತಿಯ ಸ್ಪಂದನೆಯಿಂದಾಗಿ ಇದನ್ನು 2022ರ ಜನವರಿ 20ರ ವರೆಗೆ ಮುಂದೂಡಲಾಗಿದೆ. ಬೆಂಗಳೂರಿನ ಶ್ರೀನಿವಾಸಪುರದ ಚಿತ್ರ ಕಲಾ ಪರಿಷತ್ನ ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿ(College Of Fine Arts Srinivasapura, Bengaluru) ಈ ಪ್ರದರ್ಶನ ನಡೆಯುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಕಲಾವಿದರು ಭೇಟಿ ನೀಡಿ ಕೃಷ್ಣ ಶೆಟ್ಟಿ ಸಿ ಎಸ್ ಅವರ ಕುಂಚದಿಂದ ಅರಳಿದ ಕಲೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಾಲೇಜ್ ಆಫ್ ಫೈನ್ ಆರ್ಟ್ಸ್ನಲ್ಲಿ ಆರೋಜಿಸಿರುವ ಪ್ರದರ್ಶನದಲ್ಲಿ ಕೃಷ್ಣ ಶೆಟ್ಟಿ ಅವರ ಉಪನ್ಯಾಸ, ಕಲೆಯ ಬಗೆಗಿನ ಚರ್ಚೆ ಜೊತೆಗೆ ಗ್ಯಾಲರಿಯ ಸುತ್ತಲೂ ಗೋಡೆಗಳ ಮೇಲೆ ನೇತಾಡುವ ವಿವಿಧ ಬಗೆಯ ಚಿತ್ರಗಳು ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮಾಡುತ್ತವೆ . ವಿಶೇಷವೆಂದರೆ ಎಲ್ಲಾ ಬಗೆಯ ಕಲಾಸ್ತರಿಗೆ ಇಷ್ಟವಾಗುವ ವೈವಿದ್ಯಮಯ ಚಿತ್ರಕಲೆಗಳನ್ನು ಇಲ್ಲಿ ನೋಡಬಹುದು.
ಗ್ಯಾಲರಿಯಲ್ಲಿ ಪ್ರತಿಯೊಂದು ಚಿತ್ರವೂ ಭಿನ್ನವಾಗಿದೆ. ಭಿನ್ನ ಭಿನ್ನ ಶೈಲಿಯಲ್ಲಿ ಮೂಡಿ ಬಂದಿರೋದ್ರಿಂದ ಕಲಾಸ್ತರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಗಾಢ ಬಣ್ಣಗಳು, ಬಣ್ಣ ಬಣ್ಣಗಳ ನಡುವಿನ ಮಿಲನ, ವಿಷಯಾಧಾರಿತ ಜೋಡಣೆ, ಪ್ರಾಣಿ-ಪಕ್ಷಿಗಳ ತಲೆ ಭಾಗ, ಏಣಿ, ಚಿಟ್ಟೆ, ಬಲ್ಬ್, ಕುರ್ಚಿ ಇತ್ಯಾದಿಗಳನ್ನು ಇಲ್ಲಿನ ಚಿತ್ರಗಳಲ್ಲಿ ಕಾಣಬಹುದು. ಚಿತ್ರಕಲೆಯಲ್ಲಿ ಜ್ಞಾನ ಇಲ್ಲದವರಿಗೆ ಇದೊಂದು ಕೇವಲ ಚಿತ್ರವಾಗಲಿದ್ದು ಈ ಬಗ್ಗೆ ಆಸಕ್ತಿ ಇರುವವರಿಗೆ ಇದೊಂದು ಭಾವನೆಗಳ ಭಂಡಾರವೇ ಆಗಿರುತ್ತದೆ. ಪ್ರತಿಯೊಂದಿ ಚಿತ್ರವೂ ವಿಶೇಷವಾದ, ವೈವಿಧ್ಯಮಯವಾದ ಸಂದರ್ಭವನ್ನು ಹಿಡಿದಿಟ್ಟುಕೊಂಡಿದೆ. ಚಿತ್ರ ಕಲಾ ಪ್ರೇಮಿಗಳು, ಕಲಾಸ್ತರು ಈ ಪ್ರದರ್ಶನ ಮುಗಿಯುವ ಮುನ್ನ ಒಮ್ಮೆ ಭೇಟಿ ನೀಡಲೇ ಬೇಕು.
ಇದನ್ನೂ ಓದಿ: ಸಿನಿಮಾ ಕಲಾವಿದನ ಚಿತ್ರವನ್ನು ನಿಮಿಷಗಳಲ್ಲಿ ಬರೆಯುವ ಚಿತ್ರ ಕಲಾವಿದನ ಪ್ರತಿಭೆಯನ್ನು ಮೆಚ್ಚಲೇಬೇಕು