AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಕಲಾವಿದನ ಚಿತ್ರವನ್ನು ನಿಮಿಷಗಳಲ್ಲಿ ಬರೆಯುವ ಚಿತ್ರ ಕಲಾವಿದನ ಪ್ರತಿಭೆಯನ್ನು ಮೆಚ್ಚಲೇಬೇಕು

ಸಿನಿಮಾ ಕಲಾವಿದನ ಚಿತ್ರವನ್ನು ನಿಮಿಷಗಳಲ್ಲಿ ಬರೆಯುವ ಚಿತ್ರ ಕಲಾವಿದನ ಪ್ರತಿಭೆಯನ್ನು ಮೆಚ್ಚಲೇಬೇಕು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2021 | 8:20 PM

ಕೇವಲ ಎರಡೇ ನಿಮಿಷಗಳ ಅವಧಿಯಲ್ಲಿ ಅವರು ಪುನೀತ್ ರಾಜ್ ಕುಮರ್ ಅವರ ಪೇಟಿಂಗ್ ಪೂರ್ತಿಮಾಡುತ್ತಾರೆ ಮತ್ತು  ಅ ಮೂಲಕ ಅಗಲಿದ ಸಿನಿಮಾ ಕಲಾವಿದನಿಗೆ ಈ ಚಿತ್ರ ಕಲಾವಿದ ಶ್ರದ್ಧಾಂಜಲಿ ಸಮರ್ಪಿಸುತ್ತಾರೆ.

ಕೇವಲ 46 ನೇ ವಯಸ್ಸಿನಲ್ಲಿ ಆರೂವರೆ ಕೋಟಿ ಕನ್ನಡಿಗರನ್ನು ಆಗಲಿದ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ನಾಡಿನ ಜನರನ್ನು ಎರಡು ದಶಕಗಳಷ್ಟು ಕಾಲ ರಂಜಿಸಿದರು. ಚಿತ್ರ ಕಲಾವಿದನಾಗಿ ಅವರದ್ದೊಂದು ಬಗೆಯ ಪ್ರತಿಭೆಯಾದರೆ, ನಾವು ಕಣ್ಣು ಮಿಟುಕಿಸುವದರೊಳಗೆ ಆ ಕಲಾವಿದನ ಚಿತ್ರ ಬೆರೆದು ಬಿಡುವ ಈ ಕಲಾವಿದನ ಪ್ರತಿಭೆ ಇನ್ನೊಂದು ಬಗೆ. ನಮ್ಮ ಹಿರಿಯರು ಹೇಳೋದು ಎಲ್ಲರಿಗೂ ಗೊತ್ತಿದೆ, ಯಾಕೆಂದರೆ, ಎಲ್ಲ ಮನೆಗಳಲ್ಲಿನ ಹಿರಿಯರು ಈ ಮಾತನ್ನು ತಮ್ಮ ತಮ್ಮ ಶೈಲಿಯಲ್ಲಿ ಹೇಳಿರುತ್ತಾರೆ. ಗ್ರಾಮೀಣ ಭಾಗದಲ್ಲಿ ವಾಸ ಮಾಡುವ ಮತ್ತು ಅಕ್ಷರಭ್ಯಾಸ ಮಾಡದ ಹಿರಿಯರು ತಮ್ಮ ಬದುಕಿನ ಅನುಭವದ ಆಧಾರದ ಮೇಲೆ ಇಂಥ ಮಾತನ್ನು ಹೇಳುತ್ತಾರೆ. ಓಕೆ, ಆ ಮಾತು ಏನು ಅನ್ನೋದನ್ನು ಅಂತ ಮೊದಲು ತಿಳಿದುಕೊಳ್ಳುವ.

ಹಿರಿಯರು ಹೇಳುವುದೇನೆಂದರೆ, ಭಗವಂತ ಎಲ್ಲರಿಗೂ ಒಂದೊಂದು ಬಗೆಯ ಪ್ರತಿಭೆಯನ್ನು ನೀಡಿರುತ್ತಾನೆ, ಅದನ್ನು ಕಂಡುಕೊಂಡು, ತನಗಿರುವ ದೈವದತ್ತ ಕೌಶಲ್ಯ ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳುವವನು ಬದುಕಿನಲ್ಲಿ ಯಶ ಕಾಣುತ್ತಾನೆ.

ಪುನೀತ್ ಅವರ ಚಿತ್ರವನ್ನು ಕ್ಷಣಾರ್ಧದಲ್ಲಿ ಬರೆಯುವ ಈ ಕಲಾವಿದನ ಪ್ರತಿಭೆ ಅಸಾಮಾನ್ಯವೇ ಸರಿ. ಅದೆಷ್ಟು ಕ್ಷಿಪ್ರವಾಗಿ ಮತ್ತು ಸೊಗಸಾಗಿ ಅವರು ಚಿತ್ರ ಬರೆಯುತ್ತಾರೆ ಎನ್ನುವುದನ್ನು ಗಮನಿಸಿ. ಅವರ ಕೈಯಲ್ಲಿನ ಕುಂಚ ಅತ್ಯಂತ ಕರಾರುವಕ್ಕಾಗಿ ಸರಿದಾಡುತ್ತದೆ. ಅವರು ಆರಂಭಿಸಿದಾಗ ಏನು ಮಾಡುತ್ತಿದ್ದಾರೆ ಅನ್ನೋದು ಅರ್ಥವಾಗುವುದಿಲ್ಲ. ಕೇವಲ ಎರಡೇ ನಿಮಿಷಗಳ ಅವಧಿಯಲ್ಲಿ ಅವರು ಪುನೀತ್ ರಾಜ್ ಕುಮರ್ ಅವರ ಪೇಟಿಂಗ್ ಪೂರ್ತಿಮಾಡುತ್ತಾರೆ ಮತ್ತು  ಅ ಮೂಲಕ ಅಗಲಿದ ಸಿನಿಮಾ ಕಲಾವಿದನಿಗೆ ಈ ಚಿತ್ರ ಕಲಾವಿದ ಶ್ರದ್ಧಾಂಜಲಿ ಸಮರ್ಪಿಸುತ್ತಾರೆ.

ರವಿವರ್ಮ ಹುಟ್ಟಿದ ನಾಡಿನಲ್ಲಿ ಇಂಥ ಕಲಾವಿದರು ಇರೋದು ಆಶ್ಚರ್ಯವೇನೂ ಇಲ್ಲ.

ಇದನ್ನೂ ಓದಿ:   ಜಿಮ್​ನಲ್ಲಿ ಪುನೀತ್ ರಾಜ್​ಕುಮಾರ್ ವರ್ಕೌಟ್​​: ಹೇಗಿರುತ್ತಿತ್ತು ಗೊತ್ತಾ ಅಪ್ಪು ಕಸರತ್ತು​? ಇಲ್ಲಿದೆ ವಿಡಿಯೋ​