ಕರ್ನಾಟಕ ಸರ್ಕಾರದ ಸಾಮಾಜಿಕ ಯೋಜನೆಗಳ ಸಂಪೂರ್ಣ ಮಾಹಿತಿ, EasyGov ನಲ್ಲಿ ಜಸ್ಟ್​ ಒಂದು ಕ್ಲಿಕ್‌ನಲ್ಲಿ ಪಡೆಯಿರಿ

MyJio: ಸರ್ಕಾರಿ ಅಧಿಕಾರಿಗಳಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿ ಅನಾಲಿಟಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಒದಗಿಸಲಾಗಿದೆ. ಇದರಿಂದ ಯೋಜನೆಗಳಿಗೆ ಬಂದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವುದು ಸುಲಭವಾಗುತ್ತದೆ. ನಾಗರಿಕರು ಸಲ್ಲಿಸಿದ ಅರ್ಜಿಗಳ ಇ-ಸಹಿ ಮತ್ತು ಸರ್ಕಾರಿ ಬಳಕೆದಾರರಿಂದ ಅವರ ಅನುಮೋದನೆಯನ್ನು ಸಹ ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.

ಕರ್ನಾಟಕ ಸರ್ಕಾರದ ಸಾಮಾಜಿಕ ಯೋಜನೆಗಳ ಸಂಪೂರ್ಣ ಮಾಹಿತಿ, EasyGov ನಲ್ಲಿ ಜಸ್ಟ್​ ಒಂದು ಕ್ಲಿಕ್‌ನಲ್ಲಿ ಪಡೆಯಿರಿ
EasyGov: ಕರ್ನಾಟಕ ಸರ್ಕಾರದ ಸಾಮಾಜಿಕ ಯೋಜನೆಗಳ ಪರಿಪೂರ್ಣ ಮಾಹಿತಿ: EasyGov ನಲ್ಲಿ ಜಸ್ಟ್​ ಒಂದು ಕ್ಲಿಕ್‌ನಲ್ಲಿ ಪಡೆಯಿರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 04, 2022 | 9:09 AM

ಕರ್ನಾಟಕ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ. MyJio ಆ್ಯಪ್ ನಲ್ಲಿ ಲಭ್ಯವಿರುವ EasyGov ನ ಮಿನಿ ಅಪ್ಲಿಕೇಶನ್ Suvidha ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಜನ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಶಕ್ತರಾಗಿದ್ದಾರೆ. ಕರ್ನಾಟಕ ಸರ್ಕಾರದ 300 ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳು ಮತ್ತು ನೂತನ ಉದ್ಯೋಗಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯಲಿದೆ. ಈ ಅಪ್ಲಿಕೇಶನ್ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇಸ್ಟೋರ್ ನಿಂದ ನೇರವಾಗಿಯೂ ಡೌನ್ ಲೋಡ್ ಮಾಡಿಕೊಳ್ಳಬಹುದು.

ನಿಯಮಾಧಾರಿತ ಎಂಜಿನ್ ಅನ್ನು ‘ಸುವಿಧಾ’ದಲ್ಲಿ ಅಳವಡಿಸಲಾಗಿದೆ, ಇದು ಅರ್ಹ ನಾಗರಿಕರನ್ನು ಹುಡುಕುವುದಲ್ಲದೆ, ಕ್ಲುಪ್ತ ಸಮಯದೊಳಗೆ ಅರ್ಹ ಫಲಾನುಭವಿಯನ್ನು ಗುರುತಿಸಿ ಖಚಿತಪಡಿಸುತ್ತದೆ. ಬಳಕೆದಾರರ ಡೇಟಾವನ್ನು ದೃಢೀಕರಿಸಲು ಅಥವಾ ಪರಿಶೀಲಿಸಲು ‘ಸುವಿಧಾ’ ಅಪ್ಲಿಕೇಶನ್ ಅನ್ನು ಸರ್ಕಾರ ಕುಟುಂಬ ಮಾಹಿತಿಗಳಿರುವ ಡೇಟಾಬೇಸ್ ‘ಕುಟುಂಬ್’ ನೊಂದಿಗೆ ಸಂಯೋಜಿಸಲಾಗಿದೆ. ಇದಲ್ಲದೆ, ಅಪ್ಲಿಕೇಶನ್ KYC ಗಾಗಿ ಆಧಾರ್, ದಾಖಲೆ ಪರಿಶೀಲನೆಗಾಗಿ ಡಿಜಿಲಾಕರ್, ಸರ್ಕಾರದ ಯೋಜನೆಗಳ ಪಾವತಿಗಾಗಿ DBT (ನೇರ ಬ್ಯಾಂಕ್ ವರ್ಗಾವಣೆ) ಜೊತೆಗೆ ಕಾರ್ಯನಿರ್ವಹಿಸುತ್ತದೆ.

ಸರ್ಕಾರಿ ಅಧಿಕಾರಿಗಳಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿ ಅನಾಲಿಟಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಒದಗಿಸಲಾಗಿದೆ. ಇದರಿಂದ ಯೋಜನೆಗಳಿಗೆ ಬಂದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವುದು ಸುಲಭವಾಗುತ್ತದೆ. ನಾಗರಿಕರು ಸಲ್ಲಿಸಿದ ಅರ್ಜಿಗಳ ಇ-ಸಹಿ ಮತ್ತು ಸರ್ಕಾರಿ ಬಳಕೆದಾರರಿಂದ ಅವರ ಅನುಮೋದನೆಯನ್ನು ಸಹ ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.

EasyGov ನ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಶುಕ್ಲಾ ಅವರ ಪ್ರಕಾರ, “ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಪ್ರತಿ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರಿಗೆ ಕನಿಷ್ಠ ಆರೋಗ್ಯ, ವಸತಿ, ಶಿಕ್ಷಣ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರಬೇಕು. ಇದಕ್ಕಾಗಿ ಅಗತ್ಯವಿರುವವರನ್ನು ಗುರುತಿಸಿ ಪ್ರಯೋಜನ ಒದಗಿಸಬೇಕು” ಎಂದು ಅಭಿಪ್ರಾಯಪಟ್ಟರು.

ಸುರಜ್ಯಾ ಸರ್ವೀಸ್ ಲಿಮಿಟೆಡ್, ಕರ್ನಾಟಕ ಸರ್ಕಾರಕ್ಕಾಗಿ EasyGov ಡಿಜಿಟಲ್ ಸೊಲ್ಯೂಷನ್ ಅನ್ನು ವಿನ್ಯಾಸಗೊಳಿಸಿದೆ. ಇದು ಈಗ ಮೊದಲಿಗಿಂತ ಹೆಚ್ಚು ಸುಧಾರಿತ ಮತ್ತು ಬಳಸಲು ಸುಲಭವಾಗುವಂತಿದೆ. EasyGov ಆಡಳಿತವನ್ನು ಸುಧಾರಿಸಲು ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ವಿನ್ಯಾಸ ಮತ್ತು ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರವನ್ನು ಹೊರತುಪಡಿಸಿ, EasyGov ಹಲವಾರು ಇತರ ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿದ್ದು, ಅವುಗಳೊಂದಿದಗೆ ಕೆಲಸ ಮಾಡಿದ ಅನುಭವವನ್ನೂ ಹೊಂದಿದೆ.

ಡೇಟಾ ಸುರಕ್ಷತೆಗಾಗಿ, EasyGov ವಿಶ್ವದ ಅತಿದೊಡ್ಡ ಮತ್ತು ವಿಶೇಷ ಕಂಪನಿ SAP ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ. ಅಲ್ಲದೆ, ಅಗತ್ಯವಿರುವವರನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ಅನ್ನು ಬಳಸಲಾಗಿದೆ.

‘ಜಾಗೃತ್ ತ್ರಿಪುರ’ ಎಂಬುದು EasyGov ನ ಮತ್ತೊಂದು ವೇದಿಕೆಯಾಗಿದೆ. ಈ ವೇದಿಕೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ತ್ರಿಪುರಾದಲ್ಲಿ ಪ್ರಾರಂಭಿಸಲಾಯಿತು. ಇದು ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಅರ್ಹ ನಾಗರಿಕರ ಹುಡುಕಾಟದಲ್ಲಿ ಸಹಾಯ ಮಾಡುತ್ತಿದೆ. ಭಾರತದ ಕಲ್ಯಾಣ ಕಾರ್ಯಕ್ರಮಗಳಲ್ಲಿ ವ್ಯಯಿಸಲಾದ ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಬಳಕೆಯನ್ನು ಖಾತ್ರಿಪಡಿಸುವುದರ ಜೊತೆಗೆ ಸ್ವಾವಲಂಬಿ ಭಾರತಕ್ಕೆ ‘ಜಾಗೃತ್ ತ್ರಿಪುರಾ’ ದಂತಹ ಪರಿಹಾರಗಳು ದೃಢವಾದ ಹೆಜ್ಜೆಯಾಗಲಿವೆ ಎಂದು ಆಶಿಸಲಾಗಿದೆ.

ವಾಮಾಚಾರ ಮಾಡಿ ಕೊಲೆ ಆರೋಪ: ಕೆರೆಯಲ್ಲಿ ಬಾಲಕನ ಶವ ಪತ್ತೆ, ಮೂವರು ಅಪ್ರಾಪ್ತ ಸ್ನೇಹಿತರನ್ನು ವಶಕ್ಕೆ ಪಡೆದ ಪೊಲೀಸ್

ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!

Published On - 7:24 am, Tue, 4 January 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ