ಕುದುರೆಮುಖ ಅರಣ್ಯದ ಜಾಂಬಲೆ ಗ್ರಾಮಕ್ಕೆ ಸಿಕ್ತು ಡಿಜಿಟಲ್ ಲೈಫ್ ಶ್ರೀರಕ್ಷೆ, ಇದು ಜಿಯೋ ಕೊಡುಗೆ!
ಜಿಯೋ ಇತ್ತೀಚೆಗೆ ಜಂಬಳೆಯನ್ನು (Jambale) ಡಿಜಿಟಲ್ ಲೈಫ್ಗೆ (Digital Life) ಪರಿಚಯಿಸಿದ್ದು, ಸ್ಥಳೀಯ ಕುಟುಂಬಗಳಿಗೆ ಮತ್ತು ಇಡೀ ಸಮುದಾಯಕ್ಕೆ ಮೆರಗು ತಂದಿದೆ. ಅಂತರ್ಜಾಲ ನೆಟ್ವರ್ಕ್ ಲಭ್ಯತೆಯಿಂದಾಗಿ ತಮ್ಮ ಮಕ್ಕಳು ಪ್ರತಿದಿನ 8 ಕಿಲೋ ಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ
ಕರ್ನಾಟಕದ ಕುದುರೆಮುಖ ಅರಣ್ಯದೊಳಗೆ (Kudremukha) ನೆಲೆಸಿರುವ ಜಾಂಬಲೆ, ಪ್ರಪಂಚದ ಇತರ ಭಾಗಗಳಿಂದ ಮರೆಯಾಗಿರುವ ಒಂದು ಸಣ್ಣ, ಸುಂದರವಾದ ಹಳ್ಳಿಯಾಗಿದೆ. ಜಿಯೋ ಇತ್ತೀಚೆಗೆ ಜಾಂಬಲೆಯನ್ನು (Jambale) ಡಿಜಿಟಲ್ ಲೈಫ್ಗೆ (Digital Life) ಪರಿಚಯಿಸಿದ್ದು, ಸ್ಥಳೀಯ ಕುಟುಂಬಗಳಿಗೆ ಮತ್ತು ಇಡೀ ಸಮುದಾಯಕ್ಕೆ ಮೆರಗು ತಂದಿದೆ. ಅಂತರ್ಜಾಲ ನೆಟ್ವರ್ಕ್ ಲಭ್ಯತೆಯಿಂದಾಗಿ ತಮ್ಮ ಮಕ್ಕಳು ಪ್ರತಿದಿನ 8 ಕಿಲೋ ಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ ಮತ್ತು ಯುವಕರು ಸುರಕ್ಷಿತ ವಾತಾವರಣದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸಮರ್ಥರಾಗಿದ್ದಾರೆ ಎಂದು ಪೋಷಕರು ಜಿಯೋಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಸಂಪರ್ಕದ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ! ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ಜಾಂಬಲೆಯ ಜನರು ಪ್ರಪಂಚದ ಮೂಲ ಸಂಪರ್ಕದಿಂದ ವಂಚಿತರಾಗಿದ್ದರು. ಜಾಂಬಲೆ ಗ್ರಾಮಕ್ಕೆ ಸಂಪರ್ಕವನ್ನು ತರಲು ಎರಡು ಪ್ರಮುಖ ಸವಾಲುಗಳೆಂದರೆ ಕಡಿದಾದ ಗುಡ್ಡಗಾಡು, ಅರಣ್ಯದಿಂದ ಆವೃತವಾದ ಭೂಪ್ರದೇಶ ಮತ್ತು ಸುತ್ತಮುತ್ತಲಿನ ವಿದ್ಯುತ್ ಸ್ಥಾವರದಿಂದಾಗಿ ಭದ್ರತಾ ಕಾಳಜಿಗಳು.
ಜಾಂಬಲೆ ಗ್ರಾಮಕ್ಕೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಜಿಯೋ ಯೋಜನೆ ಕೈಗೊಂಡಿತು. ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್ಸಿ) ಮತ್ತು ಭೂಗತ (ಯುಸಿ) ಕೇಬಲ್ಗಳನ್ನು ಅಳವಡಿಸಲು ಮತ್ತು ಪರಿಹಾರವನ್ನು ಗುರುತಿಸಲು ಜಿಯೋದ ನೆಟ್ವರ್ಕ್, ನಿರ್ಮಾಣ ಮತ್ತು ಜಿಯೋ ಸೆಂಟರ್ ತಂಡವು ಗ್ರಾಮ ಪಂಚಾಯತ್, ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್ಒ) ಮತ್ತು ಅರಣ್ಯ ರಕ್ಷಕರೊಂದಿಗೆ ಸಹಕರಿಸಿದೆ.
ಸಮೀಕ್ಷೆಯಲ್ಲಿ ಡಿಎಫ್ಓ ಅವರನ್ನು ಒಳಗೊಂಡಿರುವ ಜಿಯೋ ತಂಡವು ಪ್ರದರ್ಶಿಸಿದ ದೂರದೃಷ್ಟಿಯು ಅನುಮೋದನೆಗಳನ್ನು ತ್ವರಿತಗೊಳಿಸಲು ಸಹಾಯ ಮಾಡಿತು ಮತ್ತು ಯೋಜನೆಯನ್ನು 20 ದಿನಗಳಲ್ಲಿ ಕಾರ್ಯಗತಗೊಳಿಸಲಾಯಿತು. ಇದೀಗ ಜಾಂಬಲೆ ಎಂಬ ಕುಗ್ರಾಮವು ಈಗ ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿ ಕ್ಲಿಕ್ ಮಾಡಿ https://jiobytes.ril.com/
ಇದನ್ನೂ ಓದಿ:
ಕರ್ನಾಟಕ ಸರ್ಕಾರದ ಸಾಮಾಜಿಕ ಯೋಜನೆಗಳ ಸಂಪೂರ್ಣ ಮಾಹಿತಿ, EasyGov ನಲ್ಲಿ ಜಸ್ಟ್ ಒಂದು ಕ್ಲಿಕ್‌ನಲ್ಲಿ ಪಡೆಯಿರಿ
ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!