AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ರಸ್ತೆ ಅಪಘಾತ; ತಂಗಿ ಸಾವು, ಅಣ್ಣನ ಸ್ಥಿತಿ ಗಂಭೀರ

ಇಂದು ಬೆಳ್ಳಂಬೆಳಗ್ಗೆ ರಸ್ತೆ ಅಪಘಾತವೊಂದು ಸಂಭವಿಸಿದೆ. ಬೆಂಗಳೂರಿನ ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಅಣ್ಣ-ತಂಗಿಗೆ ಯಮನಂತೆ ಬಂದ ಲಾರಿವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ರಸ್ತೆ ಅಪಘಾತ; ತಂಗಿ ಸಾವು, ಅಣ್ಣನ ಸ್ಥಿತಿ ಗಂಭೀರ
ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ರಸ್ತೆ ಅಪಘಾತ; ತಂಗಿ ಸಾವು, ಅಣ್ಣನ ಸ್ಥಿತಿ ಗಂಭೀರ
TV9 Web
| Updated By: ಆಯೇಷಾ ಬಾನು|

Updated on:Jan 04, 2022 | 11:42 AM

Share

ಬೆಂಗಳೂರು: ಬೈಕ್‌ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದ್ದು ಬೈಕ್‌ನಲ್ಲಿದ್ದ ಯುವತಿ ಮೃತಪಟ್ಟ ಘಟನೆ ಬೆಂಗಳೂರಿನ ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ನಡೆದಿದೆ. ಬೈಕ್‌ನಲ್ಲಿದ್ದ ಸಂಜನಾ ಪ್ರಿಯಾ(24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಜನಾ ಅಣ್ಣನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಂದು ಬೆಳ್ಳಂಬೆಳಗ್ಗೆ ರಸ್ತೆ ಅಪಘಾತವೊಂದು ಸಂಭವಿಸಿದೆ. ಬೆಂಗಳೂರಿನ ಎಂ.ಜಿ. ರಸ್ತೆಯ ಗರುಡಾ ಮಾಲ್‌ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಅಣ್ಣ-ತಂಗಿಗೆ ಯಮನಂತೆ ಬಂದ ಲಾರಿವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸಂಜನಾ ಪ್ರಿಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತಳ ಅಣ್ಣನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶೋಕ್ ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಕ್ಕಣೆಗೆ ಹಾಕಿದ್ದ ರಾಗಿ ಹುಲ್ಲಿನಲ್ಲಿ ಬೆಂಕಿ, ಓಮ್ನಿ ಬೆಂಕಿಗಾಹುತಿ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ರಾಗಿ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹುಲ್ಲಿನ ಬೆಂಕಿ ಓಮ್ನಿ ಪೆಟ್ರೋಲ್ ಟ್ಯಾಂಕ್‌ಗೆ ತಗುಲಿ ಓಮ್ನಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಫಜಲಾಲಿ ಎಂಬುವರಿಗೆ ಸೇರಿದ ವ್ಯಾನ್ ಇದಾಗಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿನ್ನದ ಒಡವೆಗಳನ್ನ ಕದ್ದ ಆರೋಪಿಗಳು ಅರೆಸ್ಟ್ ಚಿನ್ನದ ಒಡವೆಗಳನ್ನ ಕದ್ದು ಗಟ್ಟಿ ಮಾಡಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಬಾಬಾ ಜಾನ್, ಖಲಿಂ ಖಾನ್, ಸುರೇಶ್ ಬಂಧಿತ ಆರೋಪಿಗಳು. ಬಸ್ ಗಳು ಸೇರಿದಂತೆ ಇನ್ನಿತರ ಸ್ಥಳದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಆರೋಪಿಗಳು. ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಚಿನ್ನದ ಒಡವೆಗಳನ್ನ ಪಿಕ್ ಪಾಕೇಟ್ ಮಾಡಿದ್ದ ಆರೋಪಿಗಳು. ಅದನ್ನ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡಿದ್ದರು. ಸದ್ಯ ಕೆ.ಆರ್. ಮಾರ್ಕೆಟ್ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಹಲಸೂರು ಪೊಲೀಸರಿಂದ ಇಬ್ಬರು ಕೊಲೆ ಆರೋಪಿಗಳ ಬಂಧನ ಡಿ.24ರಂದು ಹಲಸೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಿನ್ಯೂಶ್​ನನ್ನು ಹತ್ಯೆಗೈದಿದ್ದ ಸಂತೋಷ್, ಅಜಯ್​ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿಂದಿನ ರಾತ್ರಿ ಹಲಸೂರಿನಲ್ಲಿ ಮಿನ್ಯೂಶ್ ಕೊಲೆಯಾಗಿತ್ತು. ಮಿನ್ಯೂಶ್ ಹಾಗು ಮತ್ತೋರ್ವ ಏರಿಯಾದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಕ್ರಿಸ್ಮಸ್ ವಿಶ್ ಮಾಡಲು ಬೈಯಪ್ಪನಹಳ್ಳಿಯಿಂದ ಹಲಸೂರಿನ ಸಂಬಂಧಿಕರ ಮನೆಗೆ ಸಂತೋಸ್ ಅಲಿಯಾಸ್ ಸಿಂಬು ಬಂದಿದ್ದ. ಗಲಾಟೆ ಮಾಡಿಕೊಳ್ಳುತಿದ್ದ ಮಿನ್ಯೂಶ್ ಗೆ ಯಾಕೆ ಗಲಾಟೆ ಮಾಡ್ದಿರೀ ಅಂತ ಬಿಡಿಸಲು ಹೋಗಿದ್ದ ಸಿಂಬು. ಗಲಾಟೆ ಬಿಡಿಸಲು ಬಂದಿದ್ದ ಸಿಂಬೂಗೆ ನೀನು ಡಾನ್ ಇದಿಯಾ ನನ್ನ ಬಿಡಿಸೊಕ್ಕೆ ಎಂದು ಮಿನ್ಯೂಶ್ಗ ಲಾಟೆ ಮಾಡಿದ್ದ. ಈ ವೇಳೆ ಮಿನ್ಯೂಶ್, ಸಿಂಬು ಹೊಡೆದು ಕಳಿಸಿದ್ದ. ಒದೆ ತಿಂದ ನಂತ್ರ ಸಿಂಬು ಹೋಗಿ ಸ್ನೇಹಿತ ಅಜಯ್ ಗೆ ವಿಚಾರ ತಿಳಿಸಿದ್ದ. ಬಳಿಕ ಅಜಯ್ ಮತ್ತು ಸಿಂಬು ಇಬ್ಬರು ಸರ್ಜಿಕಲ್ ಬ್ಲೇಡ್ ತೆಗೆದುಕೊಂಡು ಬಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಮಿನ್ಯೂಶ್ ಕಿತ್ತನ್ನು ಸೀಳಿ ಕೊಲೆ ಮಾಡಿದ್ರು.

ಇದನ್ನೂ ಓದಿ: 9 ಬ್ಯಾಂಕ್​ಗಳಿಗೆ ವಂಚನೆ; ಗುಜರಾತ್​ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.

Published On - 8:40 am, Tue, 4 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ