ಕರ್ನಾಟಕದಲ್ಲಿ ಕಠಿಣ ನಿಯಮಗಳಿಗೆ ತಜ್ಞರ ಸಲಹೆಗಳೇನು? ವಿವರ ಇಲ್ಲಿದೆ
ಹಳದಿ ಬಣ್ಣ ವಲಯದಲ್ಲಿ ಮದುವೆಗೆ ಕೇವಲ 200ರಿಂದ 300 ಜನರಿಗೆ ಮಾತ್ರ ಅವಕಾಶ ನೀಡಲು ತಜ್ಞರು ತಿಳಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆ 100ರಿಂದ 200 ಜನರಿಗೆ ಅವಕಾಶ ನೀಡಲು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಭೀತಿ ಶುರುವಾಗಿದೆ. ಲಾಕ್ಡೌನ್ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಲಾಕ್ಡೌನ್ ಬದಲು ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೊಳಿಸುವ ಸಾಧ್ಯತೆಯಿದೆ. ಲಾಕ್ಡೌನ್ ಜಾರಿಗೊಳಿಸದಿದ್ದರೆ ಸೋಂಕು ನಿಯಂತ್ರಿಸಲು ತಜ್ಞರು ಕೆಲ ಸಲಹೆಗಳನ್ನ ನೀಡಿದ್ದು, ಇಲ್ಲಿ ತಿಳಿಸಲಾಗಿದೆ.
* ಕೊರೊನಾ ಮಾರ್ಗಸೂಚಿ ಕಡ್ಡಾಯ ಜಾರಿ ಮಾಡಿ ನಿಗಾವಹಿಸವಬೇಕು. * ಹೆಚ್ಚು ಕೊವಿಡ್ ಟೆಸ್ಟಿಂಗ್ ಮಾಡಬೇಕು * ಶೇ.100 ರಷ್ಟು ಡಬಲ್ ಡೋಸ್ ವ್ಯಾಕ್ಸಿನ್ ಮಾಡಬೇಕು. * ಮಾಲ್, ಥಿಯೇಟರ್, ಶಾಲಾ ಮಕ್ಕಳ ಪೋಷಕರಿಗೆ ಡಬಲ್ ಡೋಸ್ ಕಡ್ಡಾಯ ಮಾಡಬೇಕು. * ಪಾರ್ಕ್, ಟ್ಯಾಕ್ಸಿ, ಆಟೋ ಸಂಚಾರಕ್ಕೂ 2 ಡೋಸ್ ಲಸಿಕೆ ರೂಲ್ಸ್ ಮಾಡಬೇಕು. * ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕೊವಿಡ್ ಟೆಸ್ಟ್ ಮಾಡಬೇಕು. * ಮೂರಕ್ಕಿಂತ ಹೆಚ್ಚು ಸೋಂಕಿತರು ಕಂಡುಬರುವ ವಲಯವನ್ನ ಕಂಟೈನ್ಮೆಂಟ್ ಝೋನ್ ಮಾಡಬೇಕು. * ಕ್ಲಸ್ಟರ್ ಮಟ್ಟದಲ್ಲಿ ಸೋಂಕು ಹೆಚ್ಚಾಗದಂತೆ ತಡೆಯಬೇಕು. * ಪಾಸಿಟಿವಿಟಿ ರೇಟ್ ಏರಿಕೆಯಾದಂತೆ ಟಫ್ ರೂಲ್ಸ್ ಹಾಕಬೇಕು. * ನೈಟ್ ಕರ್ಪ್ಯೂ ತಿಂಗಳು ಕೊನೆಯವೆಗೂ ಮುಂದುವರೆಸಬೇಕು. * ಪಾಸಿಟಿವಿಟಿ ರೇಟ್ 3 ಕ್ಕಿಂತ ಹೆಚ್ಚಾದರೆ ವೀಕೆಂಡ್ ಕರ್ಪ್ಯೂ ಜಾರಿ ಮಾಡಬೇಕು. * ಮದುವೆ, ಸಭೆ, ಸಮಾರಂಭ, ಉತ್ಸವಗಳಲ್ಲಿ ಹೆಚ್ಚು ಜನರ ಸೇರುವಿಕೆಗೆ ಕಡಿವಾಣ ಹಾಕಬೇಕು.
ಯೆಲ್ಲೋ, ಆರೆಂಜ್, ರೆಡ್ ಜೋನ್ ಆದಾರದ ಮೇಲೆ ನಿರ್ಬಂಧಕ್ಕೂ ಚಿಂತನೆ ನಡೆಸಲಾಗುತ್ತಿದೆ. ಕೊವಿಡ್ ಪಾಸಿಟಿವ್ ರೇಟ್ ಶೇ.1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅರ್ಲಟ್, ಪಾಸಿಟಿವ್ ರೇಟ್ ಶೇ.1ರಿಂದ 2ರಷ್ಟು ಇದ್ದರೆ ಆರೆಂಜ್, 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಿ ಚಟುವಟಿಕೆಗಳಲ್ಲಿ ನಿರ್ಬಂಧಗಳನ್ನು ಹೇರಲು ಚಿಂತನೆ ನಡೆಸಲಾಗುತ್ತಿದೆ.
ಯಾವ ಯಾವ ವಲಯದಲ್ಲಿ ಯಾವುದಕ್ಕೆಲ್ಲ ನಿರ್ಬಂಧ ಹಳದಿ ಬಣ್ಣ ವಲಯದಲ್ಲಿ ಮದುವೆಗೆ ಕೇವಲ 200ರಿಂದ 300 ಜನರಿಗೆ ಮಾತ್ರ ಅವಕಾಶ ನೀಡಲು ತಜ್ಞರು ತಿಳಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆ 100ರಿಂದ 200 ಜನರಿಗೆ ಅವಕಾಶ ನೀಡಲು ತಿಳಿಸಿದ್ದಾರೆ. ಇನ್ನು ಆರೇಂಜ್ ವಲಯದಲ್ಲಿ ಮಾಲ್, ಶಾಂಪಿಂಗ್ ಕಾಂಪ್ಲೆಕ್ಸ್ಗೆ ಬೆಳಿಗ್ಗೆ 6ರಿಂದ ಮಧ್ಯಹ್ನ 1 ರವೆಗೆ ಮಾತ್ರ ಅವಕಾಶ. ಸಿನಿಮಾ, ಸ್ಕೂಲ್, ಪಬ್, ಬಾರ್, ಆಫೀಸ್, ಫ್ಯಾಕ್ಟರಿ, ಸಲೂನ್, ಮೆಟ್ರೋಗಳಲ್ಲಿ ಶೇ.50 ಅವಕಾಶ. ಸ್ವಿಮಿಂಗ್ ಪೂಲ್, ಜಿಮ್ನಲ್ಲಿ ತರಬೇತಿಗೆ ಮಾತ್ರ ಅವಕಾಶ ನೀಡಲು ತಜ್ಞರು ತಿಳಿಸಿದ್ದಾರೆ.
ರೆಡ್ ವಲಯದಲ್ಲಿ ಮಾರುಕಟ್ಟೆ, ಶಾಪಿಂಗ್ ಮಾಲ್ಗೆ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಮಾತ್ರ ಅವಕಾಶ ನೀಡಬೇಕು. ಸಿನಿಮಾ ಹಾಲ್, ಸಲೂನ್, ಸ್ವಿಮಿಂಗ್ ಪೂಲ್, ಜಿಮ್ ಬಂದ್ ಮಾಡಬೇಕು. ಸಾರ್ವಜನಿಕ ಸಾರಿಗೆ, ವರ್ಕ್ಶಾಪ್, ಗಾರ್ಡನ್, ಪಾರ್ಕ್, ಪ್ರಾಣಿ ಸಂಗ್ರಹಾಲಯ, ಮನರಂಜನಾ ಪಾರ್ಕ್ ಆರ್ಟ್ ಗ್ಯಾಲರಿ, ಮ್ಯೂಸಿಯಂ, ಮೇಟ್ರೋ ಬಂದ್ ಮಾಡಬೇಕು. ಹೋಟೆಲ್, ಬಾರ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಬೇಕು ಎಂದು ಸಲಹೆ ನೀಡಿರುವ ತಜ್ಞರು, ಶಾಲೆಗಳನ್ನ ಬಂದ್ ಮಾಡಿ ಅನ್ಲೈನ್ ಕ್ಲಾಸ್ ನಡೆಸಲು ತಿಳಿಸಿದ್ದಾರೆ.
ಇದನ್ನೂ ಓದಿ
ಕುದುರೆಮುಖ ಅರಣ್ಯದ ಜಾಂಬಲೆ ಗ್ರಾಮಕ್ಕೆ ಸಿಕ್ತು ಡಿಜಿಟಲ್ ಲೈಫ್ ಶ್ರೀರಕ್ಷೆ, ಇದು ಜಿಯೋ ಕೊಡುಗೆ!