ಮೊದಲ ದಿನವೇ ಕೊರೊನಾ ಲಸಿಕೆ ಪಡೆದ 40 ಲಕ್ಷ ಯುವಜನತೆ: ಯಂಗ್ ಇಂಡಿಯಾಗೆ ಶಹಬ್ಬಾಸ್ ಎಂದ ನರೇಂದ್ರ ಮೋದಿ
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೆಹಲಿ: ದೇಶದಲ್ಲಿ ದೇಶದಲ್ಲಿ 15-18 ವಯೋಮಾನದವರ ಪೈಕಿ 40 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ವಯೋಮಾನದ ಯುವಜನತೆಗೆ ಲಸಿಕೆ ನೀಡಲು ಅವಕಾಶ ಸಿಕ್ಕ ಮೊದಲ ದಿನವೇ ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಲಸಿಕೆ ಪಡೆದಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಹರ್ಷ ವ್ಯಕ್ತಪಡಿಸಿದ್ದಾರೆ. ಯುವಜನತೆಯನ್ನು ಅಭಿನಂದಿಸಿರುವ ಮನಸುಖ್ ಮಾಂಡವೀಯಾ ಇದು ಭಾರತದ ಲಸಿಕಾ ಅಭಿಯಾನಕ್ಕೆ ಮತ್ತೊಂದು ಗರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಟ್ವೀಟ್ ಮೂಲಕ ಯುವಜನರನ್ನು ಅಭಿನಂದಿಸಿರುವ ಅವರು, ಕೊರೊನಾದಿಂದ ರಕ್ಷಿಸಲು ಇಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ. ಇಂದು ಲಸಿಕೆ ಪಡೆದ 15-18 ವರ್ಷದ ಯುವ ಸ್ನೇಹಿತರಿಗೆ ಮತ್ತು ಅವರ ಪೋಷಕರಿಗೆ ಅಭಿನಂದನೆ ಎಂದು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಲಸಿಕೆ ಪಡೆಯಲು ಮುಂದೆ ಬರಬೇಕು ಎಂದಿದ್ದಾರೆ.
Today we have taken an important step forward in protecting our youth against COVID-19. Congrats to all my young friends between the age group of 15-18 who got vaccinated. Congrats to their parents as well. I would urge more youngsters to get vaccinated in the coming days!
— Narendra Modi (@narendramodi) January 3, 2022
ಮತ್ತೊಂದು ಹಂತದ ಲಸಿಕೆ ಅಭಿಯಾನ ಭಾರತದಾದ್ಯಂತ ಸೋಮವಾರದಿಂದ (ಡಿ.3) ಮತ್ತೊಂದು ಹಂತದ ಕೊವಿಡ್ 19 ಲಸಿಕೆ ಅಭಿಯಾನ ಆರಂಭವಾಗಿದೆ. 15ರಿಂದ 18 ವರ್ಷದವರಿಗೆ ಕೊವ್ಯಾಕ್ಸಿನ್ ಲಸಿಕೆ (Covaxin Vaccine) ನೀಡಲಾಯಿತು. ಜ.1ರಿಂದಲೇ ಕೊವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಹೀಗಾಗಿ ಭಾನುವಾರ ಸಂಜೆ ಹೊತ್ತಿಗೆ ಕೊವಿಡ್ 19 ಲಸಿಕೆಗಾಗಿ ಕೊವಿನ್ ಆ್ಯಪ್ನಲ್ಲಿ (CoWin Portal) 6.35 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತದೆ. ಹೊಸ ಲಸಿಕಾ ಅಭಿಯಾನಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ, ಅಲ್ಲಿನ ಜನಸಂಖ್ಯೆ ಆಧಾರದ ಮೇಲೆ ಹೆಚ್ಚುವರಿಯಾಗಿ ಕೊವ್ಯಾಕ್ಸಿನ್ ಲಸಿಕೆ ಕಳಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿತ್ತು.
15ರಿಂದ 18 ವರ್ಷದವರಿಗಿನ ಎಲ್ಲರೂ ಕೊವಿಡ್ 19 ಲಸಿಕೆಯನ್ನು ಈ ಹಂತದಲ್ಲಿ ಪಡೆಯಬಹುದು. 15 ವರ್ಷವಾಗಿದೆಯಾ ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. 2007ನೇ ಇಸವಿ ಅಥವಾ ಅದಕ್ಕೂ ಮೊದಲು ಜನಿಸಿರುವ ಎಲ್ಲರೂ ಕೊರೊನಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೀಗ ವಯಸ್ಕರಿಗೆ ನೀಡಲಾಗುತ್ತಿರುವ ಕೇಂದ್ರದಲ್ಲೇ ಮಕ್ಕಳಿಗೆ ಕೊವ್ಯಾಕ್ಸಿನ್ ನೀಡಿದರೆ ಸ್ವಲ್ಪ ಗೊಂದಲ ಆಗಬಹುದು. ಹಾಗಾಗಿ ಅವರಿಗೆ ಕೊವಿಡ್ 19 ಲಸಿಕೆ ನೀಡಲು ಪ್ರತ್ಯೇಕ ತಂಡ ಇರಬೇಕು. 15-18 ವರ್ಷದವರು ಪ್ರತ್ಯೇಕ ಸಾಲುಗಳಲ್ಲಿಯೇ ನಿಲ್ಲಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಎಲ್ಲಿ ಲಸಿಕೆ ಪಡೆಯಬಹುದು ಸದ್ಯ ದೇಶಾದ್ಯಂತ ಇರುವ ಕೊವಿಡ್ 19 ಲಸಿಕಾ ಕೇಂದ್ರಗಳಲ್ಲಿಯೇ ಇಂದಿನಿಂದ 15-18ವರ್ಷದವರೆಗಿನವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತದೆ. ಆದರೆ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರವನ್ನೂ ನಿರ್ಮಿಸಿಕೊಳ್ಳಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ, ಸ್ಥಳೀಯ ಆಡಳಿತಗಳು ಎಲ್ಲಿ ವ್ಯವಸ್ಥೆ ಮಾಡಿವೆ ಎಂಬುದನ್ನು ಅವರೇ ತಿಳಿಸುತ್ತಾರೆ. ವಿವಿಧ ವಯೋಮಾನಗಳವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಈಗಿರುವ ಕೊರೊನಾ ಲಸಿಕೆ ಕೇಂದ್ರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕ್ಯೂ ಮಾಡಲು ಹೇಳಲಾಗಿದೆ. ಇನ್ನುಳಿದಂತೆ ವಯಸ್ಕರ ಕೊವಿಡ್ 19 ಲಸಿಕೆ ಅಭಿಯಾನಕ್ಕಾಗಿ ಮಾಡಲಾದಂಥ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ.
ಇದನ್ನೂ ಓದಿ: Covid Vaccine: ಕರ್ನಾಟಕದಲ್ಲಿರುವ 31 ಲಕ್ಷ ಮಕ್ಕಳಿಗೆ ಕೊವಿಡ್ ಲಸಿಕೆ ಪಡೆಯಲು ಅರ್ಹತೆ ಇದನ್ನೂ ಓದಿ: ಉಚಿತ ಲಸಿಕೆ: ಇಂದಿನಿಂದ ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊವಿಡ್ ಲಸಿಕೆ ಅಭಿಯಾನ
Published On - 10:48 pm, Mon, 3 January 22