AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​​ಗೆ ನಾಳೆ ಪ್ರಧಾನಿ ಮೋದಿ ಭೇಟಿ; 9,400 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಮೇ 10ರಂದು ತೆಲಂಗಾಣಕ್ಕೆ ಮೊದಲ ಬಾರಿ ಭೇಟಿ ನೀಡಲಿದ್ದಾರೆ. ಹೈದರಾಬಾದ್​​ಗೆ ತೆರಳಲಿರುವ ಪ್ರಧಾನ ಮಂತ್ರಿ ಮೋದಿ ಒಟ್ಟಾರೆಯಾಗಿ ಸುಮಾರು 7,823 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದಾರೆ. ಹೈದರಾಬಾದ್-ನಾಗ್ಪುರ ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಜಹೀರಾಬಾದ್‌ನಲ್ಲಿ 2,360 ಕೋಟಿ ರೂ. ವೆಚ್ಚದ, 3,245 ಎಕರೆ ವಿಸ್ತೀರ್ಣದ ಸಮಗ್ರ ಕೈಗಾರಿಕಾ ಸ್ಮಾರ್ಟ್ ಸಿಟಿಗೆ ಅವರು ಶಿಲಾನ್ಯಾಸ ಮಾಡಲಿದ್ದಾರೆ.

ಹೈದರಾಬಾದ್​​ಗೆ ನಾಳೆ ಪ್ರಧಾನಿ ಮೋದಿ ಭೇಟಿ; 9,400 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ
Prime Minister Modi
ಸುಷ್ಮಾ ಚಕ್ರೆ
|

Updated on: May 09, 2026 | 3:51 PM

Share

ಹೈದರಾಬಾದ್, ಮೇ 9: ನಾಳೆ ತೆಲಂಗಾಣ ರಾಜ್ಯದ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಅನಾವರಣಗೊಳ್ಳಲಿದೆ. ರಾಜ್ಯದ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಭಾನುವಾರ) ಹೈದರಾಬಾದ್​​ನಲ್ಲಿ 9,400 ಕೋಟಿ ರೂ. ಮೌಲ್ಯದ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 2.30ಕ್ಕೆ ಗಚಿಬೌಲಿಯ HIC ಕೇಂದ್ರದಲ್ಲಿ ನಡೆಯಲಿದೆ.

ಪ್ರಧಾನಿ ಮೋದಿ ಉದ್ಘಾಟಿಸಲಿರುವ ಪ್ರಮುಖ ಯೋಜನೆಗಳು:

ರಸ್ತೆ ವಿಸ್ತರಣೆ (ರೂ. 3,180 ಕೋಟಿ):

ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್ (NH-167)ನ ಭಾಗವಾಗಿ ಗುಡೇಬಲ್ಲೂರಿನಿಂದ ಮೆಹಬೂಬ್‌ನಗರವರೆಗಿನ 4 ಪಥಗಳ ರಸ್ತೆ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ತೆಲಂಗಾಣ ಮತ್ತು ಕರ್ನಾಟಕದ ನಡುವಿನ ಸಾರಿಗೆ ಸಂಪರ್ಕವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ

ಜಹೀರಾಬಾದ್ ಕೈಗಾರಿಕಾ ಪ್ರದೇಶ (ರೂ. 2,360 ಕೋಟಿ):

ಕೈಗಾರಿಕಾ ವಲಯವನ್ನು ಬಲಪಡಿಸುವ ಮೂಲಕ ಜಹೀರಾಬಾದ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಲಾಗುವುದು. ಇದು ಸ್ಥಳೀಯವಾಗಿ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ರೈಲ್ವೆ ಯೋಜನೆಗಳು (ರೂ. 1,550 ಕೋಟಿ):

ಕಾಜಿಪೇಟೆ-ವಿಜಯವಾಡ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯ (ರೂ. 1,250 ಕೋಟಿ) ವಿವಿಧ ವಿಭಾಗಗಳ ಪೂರ್ಣಗೊಂಡ ಕಾಮಗಾರಿಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕಾಜಿಪೇಟೆಯಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೈಲ್ ಅಂಡರ್ ರೈಲ್ ಬೈಪಾಸ್ ಮಾರ್ಗವನ್ನು ಸಹ ಉದ್ಘಾಟಿಸಲಾಗುವುದು.

ಪಿಎಂ ಮಿತ್ರ ಪಾರ್ಕ್ – ವಾರಂಗಲ್ (ರೂ. 1,700 ಕೋಟಿ):

ವಾರಂಗಲ್‌ನಲ್ಲಿ ಅತ್ಯಾಧುನಿಕ ‘ಪಿಎಂ ಮಿತ್ರ ಪಾರ್ಕ್’ (ಕಾಕತೀಯ ಮೆಗಾ ಜವಳಿ ಪಾರ್ಕ್) ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ಜವಳಿ ಉದ್ಯಮದಲ್ಲಿ ತೆಲಂಗಾಣಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತರಲಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಪ್ರಮಾಣವಚನಕ್ಕೆ ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಗ್ರೀನ್‌ಫೀಲ್ಡ್ ಪಿಒಎಲ್ ಟರ್ಮಿನಲ್ (ರೂ. 610 ಕೋಟಿ):

ಹೈದರಾಬಾದ್‌ನ ಮಲ್ಕಾಪುರದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಮಿಸಿರುವ ಅತ್ಯಾಧುನಿಕ ಗ್ರೀನ್‌ಫೀಲ್ಡ್ ಪಿಒಎಲ್ ಟರ್ಮಿನಲ್ ಅನ್ನು ಸಹ ಈ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು.

ತೆಲಂಗಾಣದ ರಾಜ್ಯಪಾಲರು, ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅಶ್ವಿನಿ ವೈಷ್ಣವ್, ಜಿ. ಕಿಶನ್ ರೆಡ್ಡಿ ಮತ್ತು ಇತರ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More